ಅಹಮದಾಬಾದ್: ಇಲ್ಲಿ ನರೇಂದ್ರ ಮೋದಿ ಅಂತರಾಕಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ 59ನೇ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಆಲ್ರೌಂಡ್ ಪ್ರದರ್ಶನದ ಫಲವಾಗಿ ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ಗೆಲುವಿನ ನಗೆ ಬೀರಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು ನಾಯಕ ಶುಭಮನ್ ಗಿಲ್ (104 ರನ್, 55 ಎಸೆತ, 9 ಬೌಂಡರಿ, 6 ಸಿಕ್ಸರ್), ಸಾಯಿ ಸುದರ್ಶನ್ (103 ರನ್, 51 ಎಸೆತ, 5 ಬೌಂಡರಿ, 7 ಸಿಕ್ಸರ್) ಶತಕಗಳ ಫಲವಾಗಿ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 231 ರನ್ ಗಳಿಸಿತ್ತು.
ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಚೆನ್ನೈ ಬೌಲರ್ಗಳನ್ನು ದಂಡಿಸಿದ ಈ ಇಬ್ಬರು ಬ್ಯಾಟ್ಸ್ಮನ್ಗಳು ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿದರು. ಗುಜರಾತ್ ಬ್ಯಾಟ್ಸ್ಮನ್ಗಳ ಆರ್ಭಟಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಯೋರ್ವ ಕಣ್ಣೀರಿಟ್ಟಿದ್ದು, ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪಂಜಾಬ್ ಆಟಗಾರರ ಚಳಿ ಬಿಡಿಸಿದ ಕಿಂಗ್ ಕೊಹ್ಲಿ; ವಿಡಿಯೋ ವೈರಲ್
ಪ್ರಾರಂಭದಲ್ಲಿ ನಿಧಾನಗತಿಯ ಆಟಕ್ಕೆ ಒತ್ತು ನೀಡಿದ ಈ ಇಬ್ಬರು ಬ್ಯಾಟ್ಸ್ಮನ್ಗಳು ಪವರ್ಪ್ಲೇ ಅಂತ್ಯಕ್ಕೆ 58 ರನ್ ಗಳಿಸಿದರು. ಪವರ್ಪ್ಲೇ ಬಳಿಕ ವೇಗದ ಆಟಕ್ಕೆ ಒತ್ತು ನೀಡಿದ ಈ ಇಬ್ಬರು ಆಟಗಾರರು ಚೆನ್ನೈ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. ಈ ಇಬ್ಬರು ಬ್ಯಾಟ್ಸ್ಮನ್ಗಳು ಔಟಾಗುವವರೆಗೂ ಸಿಎಸ್ಕೆ ಅಭಿಮಾನಿಗಳ ಮೊಗದಲ್ಲಿ ಮೌನ ಆವರಿಸಿತ್ತು. ಈ ವೇಳೆ ತನ್ನ ಪೋಷಕರೊಂದಿಗೆ ಪಂದ್ಯ ವೀಕ್ಷಿಸಲು ಆಗಮಿಸಿದ್ದ ಬಾಲಕನೋರ್ವ ಗುಜರಾತ್ ಬ್ಯಾಟ್ಸ್ಮ್ಗಳ ಆರ್ಭಟ ಕಂಡು ಕಣ್ಣೀರಿಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಾಲಕನ ವಿಡಿಯೋಗೆ ಕಮೆಂಟ್ಗಳ ಮಹಾಪೂರವೇ ಹರಿದು ಬರುತ್ತಿದೆ.
232 ರನ್ಗಳ ಬೃಹತ್ ಗುರಿ ಬೆನ್ನತ್ತಿದ್ದ ಸಿಎಸ್ಕೆ ಡೆರಿಲ್ ಮಿಚೆಲ್ (63 ರನ್, 34 ಎಸೆತ, 7 ಬೌಂಡರಿ, 3 ಸಿಕ್ಸರ್), ಮೊಯಿನ್ ಅಲಿ (56 ರನ್, 36 ಎಸೆತ, 4 ಬೌಂಡರಿ, 4 ಸಿಕ್ಸರ್) ಅರ್ಧಶತಕಗಳ ಫಲವಾಗಿ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿ ಸೋಲೊಪ್ಪಿಕೊಂಡಿತ್ತು.
ವಿರಾಟ್ ಸಿಡಿಲಬ್ಬರದ ಬ್ಯಾಟಿಂಗ್ಗೆ ರೆಕಾರ್ಡ್ಗಳು ಉಡೀಸ್; ಐಪಿಎಲ್ನಲ್ಲಿ ಐತಿಹಾಸಿಕ ದಾಖಲೆ ಬರೆದ ಕಿಂಗ್ ಕೊಹ್ಲಿ
ಪಾಕಿಸ್ತಾನದ ಬಳಿ ಅಣು ಬಾಂಬ್ ಇದೆ, ಭಾರತ ಅವರನ್ನು ಗೌರವಿಸುವುದು ಸೂಕ್ತ: ಮಣಿಶಂಕರ್ ಅಯ್ಯರ್

