ಬೆಳಗಾವಿ: ದೇಶದ ಜನಸಂಖ್ಯೆಗೆ ಅನುಗುಣವಾಗಿ ಸಮಾನ ಮತ್ತು ಗುಣಮಟ್ಟದ ಆರೋಗ್ಯ ಸೇವೆ ಕಲ್ಪಿಸುವುದು ತುರ್ತು ಅಗತ್ಯ ಎಂದು ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಕರ್ನಲ್ ಡಾ.ಎಂ.ದಯಾನಂದ ಹೇಳಿದರು.
ತೊಲಗಿಸಲು ವಿಜ್ಞಾನ ಮತ್ತು ತಂತ್ರಜ್ಞಾನವೇ ಏಕೈಕ ಸಾಧನ ಎಂದರು.
ಕಾಹೆರ್ ಫೆರಿಪೆರಲ್ ಆಸ್ಪತ್ರೆ ಮುಖ್ಯ ವೈದ್ಯಕೀಯ ಸಲಹೆಗಾರ ಡಾ.ಎಂ.ವಿ.ಜಾಲಿ ಮಾತನಾಡಿ, ವಿಜ್ಞಾನದ ಆವಿಷ್ಕಾರ ಬಳಸಿ ಹಳ್ಳಿ ಮತ್ತು ನಗರಗಳ ನಡುವಿನ ಆರೋಗ್ಯ ಸೇವೆ ಕಂದಕ ಕಡಿಮೆ ಮಾಡುವುದು ಆಸ್ಪತ್ರೆಯ ಮೂಲ ಉದ್ದೇಶವಾಗಿದೆ ಎಂದರು.
ಆಸ್ಪತ್ರೆಯ ಕ್ಲಿನಿಕಲ್ ಸರ್ವಿಸ್ ನಿರ್ದೇಶಕ ಡಾ.ಮಾಧವ ಪ್ರಭು ಮಾತನಾಡಿ, ಉತ್ತರ ಕರ್ನಾಟಕದ ಭಾಗದಲ್ಲಿ ಕ್ಯಾನ್ಸರ್ ಮತ್ತು ಸಂತಾನಹೀನತೆಯಂತಹ ಸಮಸ್ಯೆ ಕುರಿತು ಮೂಢನಂಬಿಕೆಗಳಿದ್ದು, ಅವೈಜ್ಞಾನಿಕ ಚಿಕಿತ್ಸೆಗಳ ಮೊರೆ ಹೋಗುತ್ತಿದ್ದಾರೆ. ಇದನ್ನು ತಡೆಯಲು ವೈಜ್ಞಾನಿಕ ಮನೋಭಾವ ಮೂಡಿಸುವುದು ಎಲ್ಲರ ಜವಾಬ್ದಾರಿ ಎಂದರು.
ಸಹಾಯಕ ವ್ಯವಸ್ಥಾಪಕರಾದ ಎನ್.ಲೋಕೇಶ,
ಡಾ.ಆರ್.ಎಸ್.ಮುಧೋಳ, ಆಡಳಿತಾಧಿಕಾರಿಗಳಾದ ಡಾ.ಬಸವರಾಜ ಬಿಜ್ಜರಗಿ, ಡಾ.ರಾಜಶೇಖರ ಸೋಮನಟ್ಟಿ, ಡಾ.ಸಮೀರ್ ಚಾಟೆ, ಕ್ಯಾನ್ಸರ್ ಆಸ್ಪತ್ರೆ ಸಿಒಒ ಪ್ರಶಾಂತ ದೇಸಾಯಿ, ನರ್ಸಿಂಗ್ ಅಧೀಕ್ಷಕಿ ಶ್ರೇಯಾ ಹಿರೇಕರ ಇತರರಿದ್ದರು.
ಇನ್ನಷ್ಟು ಓದಿ

