ಬೆಂಗಳೂರು: ಲೋಕಸಭೆ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಕೆಯಲ್ಲಿ ತೊಡಗಿದ್ದಾರೆ. ಇನ್ನೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಸಿದ್ದು, ಇವರಿಗೆ ಹಿರಿಯ ಬಿಜೆಪಿ ನಾಯಕರು ಸಾಥ್ ನೀಡಿದ್ದಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಕೆಗೂ ಮುನ್ನ ಸಾರ್ವಜನಿಕರನ್ನು ಉದ್ಧೇಶಿಸಿ ಮಾತನಾಡಿದ ನಟ ಜಗ್ಗೇಶ್, ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿಗಳನ್ನು ಜಾರಿ ಮಾಡುವುದಾಗಿ ಕಾಂಗ್ರೆಸ್ನವರು ಹೇಳಿದ್ದರು. ಅದರಂತೆ ಅಧಿಕಾರಕ್ಕೆ ಬಂದ ಬಳಿಕ ನುಡಿದಂತೆ ನಡೆದಿದ್ದಾರೆ ಎಂದು ಮಾತನಾಡಲು ಶುರು ಮಾಡಿದ ನಟ ಜಗ್ಗೇಶ್ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದಾರೆ.
ಕುರಿ ಬಲಿ ಕೊಡುವ ಮೊದಲು ಮೆರವಣಿಗೆ ಮಾಡುತ್ತಾರೆ. ಹರಕೆ ಕುರಿಗೆ ಹಾರ ಹಾಕಿ ಮೆರವಣಿಗೆ ಮಾಡಲಾಗುತ್ತದೆ. ಈ ಹಾರಗಳೇ ಗ್ಯಾರಂಟಿಗಳು. ಮತದಾರರನ್ನು ಬಲಿ ಹಾಕಲು ಗ್ಯಾರಂಟಿ ನೀಡಲಾಗಿದೆ. ಎಷ್ಟೇ ಫ್ರೀ ಸ್ಕೀಂ ಕೊಟ್ಟರೂ ಮೋದಿ ಗ್ಯಾರಂಟಿ ಶಾಶ್ವತ. ಫ್ರೀ ಬೀಸ್ ಇಸ್ಕೊಂಡ್ರೆ ಸ್ವಾಭಿಮಾನ ಮಾರಿಕೊಂಡಂತೆ ಎಂದು ನಟ ಜಗ್ಗೇಶ್ ಹೇಳಿದ್ದಾರೆ.
ಸೋಲಿನ ಬೆನ್ನಲ್ಲೇ ರಿಷಭ್ ಪಂತ್ಗೆ 24 ಲಕ್ಷ ರೂ. ದಂಡ, ನಿಷೇಧದ ಭೀತಿ
ತರಕಾರಿ ವ್ಯಾಪಾರಿಯನ್ನು ಹಿಗ್ಗಾಮುಗ್ಗಾ ಥಳಿಸಿ ಕೊಂದ ಪೊಲೀಸ್ ಅಧಿಕಾರಿಯ ಪುತ್ರ; ವಿಡಿಯೋ ವೈರಲ್
ಬಿಜೆಪಿಗೆ ವೋಟ್ ಹಾಕಿದರೆ ಗ್ಯಾರಂಟಿ ಯೋಜನೆಗಳು ಸ್ಟಾಪ್: ಪ್ರದೀಪ್ ಈಶ್ವರ್
ಬಿಜೆಪಿಗೆ ವೋಟ್ ಹಾಕಿದರೆ ಗ್ಯಾರಂಟಿ ಯೋಜನೆಗಳು ಸ್ಟಾಪ್: ಪ್ರದೀಪ್ ಈಶ್ವರ್
