11 ವರ್ಷದಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನಚಿಕ್ಕೋಡಿ : ಕಳ್ಳತನ ಪ್ರಕರಣ ಸಂಬಂಧಿಸಿದಂತೆ ಕಳೆದ 11 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿ ಕಾಗವಾಡ ತಾಲೂಕಿನ ಉಗಾರ ಕೆ.ಎಚ್ ಗ್ರಾಮದ ಸಾಗರ ಪೋಕಳೆನನ್ನು ಕಾಗವಾಡ ಪೊಲೀಸರು ಮಹಾರಾಷ್ಟ್ರದ ಸಾತಾರ ಜಿಲ್ಲೆಯ ಜೈತಾಪೂರದಲ್ಲಿ ಬಂಧಿಸಿದ್ದಾರೆ.ಆರೋಪಿಯು 2006 ರಲ್ಲಿ ನಡೆದ ಒಟ್ಟು 11 ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದನು.ಆರೋಪಿಯನ್ನು ಪೊಲೀಸರು ಆಧುನಿಕ ತಂತ್ರಾಂಶದ ಸಹಾಯದಿಂದ ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರ ಪಡಿಸಿರುವುದಾಗಿ ಕಾಗವಾಡ ಠಾಣೆಯ ಪೊಲೀಸರು ತಿಳಿಸಿದ್ದಾರೆ.

