ವಿಜಯವಾಣಿ ಸುದ್ದಿಜಾಲ ಅರಟಾಳದೇವರ ಮೇಲೆ ನಂಬಿಕೆಯಿಟ್ಟು ನಡೆದರೆ ಜೀವನ ಬದಲಾಗುತ್ತದೆ. ವಿಶ್ವಾಸವಿಟ್ಟು ನಡೆದವರ ಕಷ್ಟಗಳು ಕರಗುತ್ತವೆ ಎಂದು ತಾಪಂ ಸದಸ್ಯ ಶಿವಪ್ಪ ಹಟ್ಟಿ ಹೇಳಿದರು.ಗ್ರಾಮದ ಹನುಮಾನ ದೇವರ ಓಕುಳಿ ನಿಮಿತ್ತ ಶುಕ್ರವಾರ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಲ್ಲಕ್ಕಿ ಉತ್ಸವದಲ್ಲಿ ಭಕ್ತಿಯಿಂದ ಭಾಗವಹಿಸಿದವರು ಪುಣ್ಯಶಾಲಿಗಳು ಎಂದರು.ಮೇ 23ರಂದು ಹನುಮಾನ ದೇವರಿಗೆ ಅಭಿಷೇಕ, ಮಹಾಪೂಜೆ, ನೈವೇದ್ಯ, ಧೀರ್ಘದಂಡ ನಮಸ್ಕಾರ, ಸಂಜೆ 5ಕ್ಕೆ ನೀರೋಕುಳಿ ಜರುಗಲಿದೆ.
ಮೇ 24ರಂದು ಓಕುಳಿ ಕಂಬ ಸಿಂಗರಿಸುವುದು. ಬೆಳಗ್ಗೆ 10ಕ್ಕೆ ಹಾಲೋಕುಳಿ, ಮೇ 25ರಂದು ಸಂಜೆ 5ಕ್ಕೆ ಓಕುಳಿ ಕಂಬ ಇಳಿಸಲಾಗುವುದು.ಗ್ರಾಪಂ ಮಾಜಿ ಸದಸ್ಯ ರಾಮಪ್ಪ ಪೂಜಾರಿ, ಅರುಣ ಜಂಬಗಿ, ದುಂಡಪ್ಪ ಶಿರಹಟ್ಟಿ, ವಾಸನಗೌಡ ಜಂಬಗಿ, ಕರೆಪ್ಪ ಹಟ್ಟಿ, ಮಾಳಪ್ಪ ಅರ್ಜುಣಗಿ, ಮರೆಪ್ಪ ಪೂಜಾರಿ, ಮಲ್ಲಪ್ಪ ನಾಯಿಕ, ಸೋಮಣ್ಣ ಹಟ್ಟಿ, ಕಲ್ಲಪ್ಪ ತಳವಾರ, ಶ್ರೀಶೈಲ ನಾಯಿಕ, ಚಂದ್ರಪ್ಪ ಮಾದರ, ಕುಮಾರ ಮಾದರ, ರಮೇಶ ಗುರವ ಇತರರಿದ್ದರು.
ಇನ್ನಷ್ಟು ಓದಿ
ಇನ್ನಷ್ಟು ಓದಿ

