ಮುಖಪುಟ
ಹಸು ಸಗಣಿ ರಕ್ಷಣೆಗೆ ಸಿಸಿಟಿವಿ, ರಕ್ಷಣಾ ಸಿಬ್ಬಂದಿ ಕಣ್ಗಾವಲು: ಕಾರಣ ಕೇಳಿದ್ರೆ ಹುಬ್ಬೇರಿಸೋದು ಖಂಡಿತ!

ರಾಯ್ಪುರ್: ಸಾಮಾನ್ಯವಾಗಿ ಬೀದಿಗಳಲ್ಲಿ, ಕಚೇರಿಗಳಲ್ಲಿ ಮತ್ತು ಮನೆಗಳಲ್ಲಿ ರಕ್ಷಣೆ ಮತ್ತು ಅಪರಾಧಗಳನ್ನು ತಡೆಯಲೆಂದು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಆದರೆ, ಅದೇ ಸಿಸಿಟಿವಿ ಕ್ಯಾಮೆರಾವನ್ನು ಹಸುವಿನ ಸಗಣಿ ರಕ್ಷಣೆಗೆ ಬಳುಸುತ್ತಾರೆಂದರೆ ನೀವು ನಂಬುತ್ತೀರಾ?
ನಂಬಲು ಸಾಧ್ಯವಾಗದಿದ್ದರೂ ಈ ಮಾತು ಸತ್ಯ. ಛತ್ತೀಸ್ಗಢದಲ್ಲಿ ಸಗಣಿಗೆ ಭಾರಿ ಬೇಡಿಕೆ ಇದೆ. ಇಲ್ಲಿನ ಸರ್ಕಾರ ಕಳೆದ ವರ್ಷ 'ಗೌಧನ್ ನ್ಯಾಯ ಯೋಜನೆ' ಅನ್ನು ಜಾರಿ ಮಾಡಿದ್ದು, ಒಂದು ಕೆಜಿ ಸಗಣಿಯನ್ನು 1.5 ರೂ.ಗೆ ಸರ್ಕಾರ ತೆಗೆದುಕೊಳ್ಳುತ್ತಿದೆ. ಅಂದಿನಿಂದ ಈ ರಾಜ್ಯದಲ್ಲಿ ಸಗಣಿಗೆ ಭಾರಿ ಬೇಡಿಕೆ ಇದೆ.
ಇನ್ನು ಸರ್ಕಾರದ ಈ ಯೋಜನೆಯಿಂದ ಸಗಣಿ ಕಳ್ಳರು ಸಹ ಹೆಚ್ಚಾಗಿದ್ದು, ರಾತ್ರೋರಾತ್ರಿ ಸಗಣಿಯ ರಾಶಿಗಳು ಕಳುವಾಗುತ್ತಿವೆ. ಇದೀಗ ಸಗಣಿ ಕಳ್ಳರು ಛತ್ತೀಸ್ಗಢದಲ್ಲಿ ಸಾಮಾನ್ಯವಾಗಿಬಿಟ್ಟಿದ್ದಾರೆ. ಇತ್ತೀಚೆಗೆ, ಅಂಬಿಕಾಪುರ ಪುರಸಭೆಯ ಸ್ಥಳೀಯ ಸರ್ಕಾರಿ ಗೌ-ಧನ್ ಕೇಂದ್ರದಲ್ಲಿ ಕಳ್ಳರ ಸಂಖ್ಯೆ ಹೆಚ್ಚಾಗಿದೆ. ಈ ಕೇಂದ್ರದಿಂದ ಸಗಣಿಯನ್ನು ಕದಿಯಲಾಗುತ್ತಿದೆ.
: ಬುದ್ಧಿಗೊಂದು ಗುದ್ದು: ನಾನೇ ಬೇರೆ. ನನ್ನ ಸ್ಟೈಲೇ ಬೇರೆ. ಎಲ್ಲಿದ್ದೇನೆ ನಾನು?
ಇತ್ತೀಚೆಗಷ್ಟೇ ಸಗಣಿ ಕದಿಯುತ್ತಿದ್ದ ಐವರು ಮಹಿಳೆಯರು ಸಿಕ್ಕಿಬಿದ್ದಿದ್ದರು. ಅವರಿಂದು ಬರೋಬ್ಬರಿ 45 ಕೆಜಿ ಸಗಣಿಯನ್ನು ವಶಕ್ಕೆ ಪಡೆದಿದ್ದರು. ಸರಣಿಯಾಗಿ ನಡೆಯುತ್ತಿರುವ ಕಳ್ಳತನವು ಅಧಿಕಾರಿಗಳಿಗೆ ಹೊಸ ತಲೆ ನೋವಾಗಿದೆ. ಹೀಗಾಗಿ ಸಗಣಿ ಕಳ್ಳತನಕ್ಕೆ ಬ್ರೇಕ್ ಹಾಕಲೇಬೇಕೆಂದು ಹಠಕ್ಕೆ ಬಿದ್ದಿರುವ ಅಧಿಕಾರಿಗಳು ಗೌ-ಧನ್ ಕೇಂದ್ರದ ಸುತ್ತ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಿದ್ದಾರೆ. ಅಲ್ಲದೆ, ಕೇಂದ್ರದ ಸುತ್ತ ರಕ್ಷಣಾ ಸಿಬ್ಬಂದಿಗಳನ್ನು ನಿಯೋಜಿಸಲು ಯೋಜನೆ ರೂಪಿಸಿದ್ದಾರೆ.
ಹಸು ಸಗಣಿಯನ್ನು ಸಂರಕ್ಷಿಸುವ ಮತ್ತು ಸುಧಾರಿಸುವ, ವರ್ಮಿಕಾಂಪೋಸ್ಟ್ ಉತ್ಪಾದನೆಯನ್ನು ಉತ್ತೇಜಿಸುವ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಸುಧಾರಿಸುವ ಉದ್ದೇಶದಿಂದ 1.5 ಕೆ.ಜಿ ಹಸುವಿನ ಸಗಣಿ ಸಂಗ್ರಹಿಸಲು ಛತ್ತೀಸ್ಗಢದ ಸರ್ಕಾರ ನಿರ್ಧರಿಸಿದೆ. (ಏಜೆನ್ಸೀಸ್)
ಹುಬ್ಬಳ್ಳಿಯಲ್ಲಿ ರಾಬರ್ಟ್; ಚಪ್ಪಲಿ ಬದಿಗಿಟ್ಟು ಮಾತನಾಡಿದ ದರ್ಶನ್..
ಪ್ರೀತಿ ಮದುವೆಗೆ ಶ್ವೇತಾ ನಾಯಕಿ; ಕಿರಿಕ್ ಕೀರ್ತಿ ನಿರ್ದೇಶನದ ಚೊಚ್ಚಲ ಸಿನಿಮಾ
ಮದ್ವೆ ಆಗಿ ಆಸಿಡ್ ದಾಳಿ ಸಂತ್ರಸ್ತೆ ಬಾಳಿಗೆ ಬೆಳಕಾದ ಯುವಕ: ಇಬ್ಬರ ಲವ್ ಸ್ಟೋರಿ ಕೇಳಿದ್ರೆ ಮನಕಲಕುತ್ತೆ..!