ನಗರದ ಗಾಂಧೀ ಭವನದಲ್ಲಿ ಪೂರ್ವಿಕಾ ಬಂಜಾರ ಸಾಂಸ್ಕೃತಿಕ ಕಲಾ ವೇದಿಕೆ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗ ಸದ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಲಂಬಾಣಿ ಹೆಣ್ಣು ಮಕ್ಕಳು ಈ ನೆಲದ ಶ್ರಮಜೀವಿಗಳು. ಎಲ್ಲ ಕಷ್ಟ ನಷ್ಟಗಳನ್ನು ಎದುರಿಸುತ್ತ ಈಗೀಗ ಆಧುನಿಕ ಜಗತ್ತಿಗೆ ತೆರೆದುಕೊಳ್ಳುತ್ತಿದ್ದಾರೆ. ಬಟ್ಟೆ ಮತ್ತು ಬದುಕಿನ ವಿಧಾನದಲ್ಲಿ ಎಲ್ಲರಿಗಿಂತ ವಿಶಿಷ್ಟರಾಗಿರುವ ಇವರು ಕಾಡಿನೊಳಗೆ ಧೈರ್ಯವಾಗಿ ಹೋಗಿ ಬರುವ ಧೈರ್ಯ ಉಳ್ಳವರು ಎಂದು ನುಡಿದರು. ಪೂರ್ವಿಕಾ ಬಂಜಾರ ಸಂಸ್ಥೆಯ ಅಧ್ಯಕ್ಷೆ ಗೀತಾಬಾಯಿ ಲಮಾಣಿ ಮಾತನಾಡಿ, ಯಾವುದೇ ಮಹಿಳೆಯಾಗಲಿ ಇಂದು ಬಯಸುವುದು ಸಮಾನ ಗೌರವವನ್ನು. ಅಂತಹ ಗೌರವಕ್ಕೆ ಬೇಕಾಗುವ ಶಿಕ್ಷಣ ಮತ್ತು ಅರಿವು ಮಹಿಳೆಯರಿಗೆ ಬೇಕಾಗಿದೆ ಎಂದರು. ಸಮಾರಂಭದಲ್ಲಿ ಮಹಿಳಾ ಸಾಧಕಿಯರಾದ ಡಾ.ಗೀತಾ ಸುತ್ತಕೋಟಿ (ಶಿಕ್ಷಣ), ಜಯಮ್ಮ ಅಗಡಿ (ವೈದ್ಯಕೀಯ), ಅನಿತಾ ಅಶೋಕ ಉಪಲಿ (ನ್ಯಾಯಾಂಗ ) ಶಾಂತವ್ವ ಲಮಾಣಿ (ಬಂಜಾರ ಉಡುಪು ಕಲೆಗಾರರು) ಜುಬೇದಾ ನಾಯಕ್ (ಸಾಹಿತ್ಯ) ಹಾಗೂ ಖುಷಿ ಮರಬದ (ಸಮಾಜ ಸೇವೆ) ಅವರನ್ನು ಸನ್ಮಾನಿಸಲಾಯಿತು. ಬಂಜಾರ ಕುಣಿತಗಳು, ಜೋಗತಿ ನೃತ್ಯ, ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಮಾರಂಭದಲ್ಲಿ ಯೂಸುಫ್ ಸೈಕಲಗಾರ, ರಾಜಾಭಕ್ಷ ಮಾನೆಗಾರ, ಕಲಾವಿದ ಕೆ.ಆರ್.ಹಿರೇಮಠ, ಶಿವಪ್ಪ ಲಮಾಣಿ, ಇತರರು ಉಪಸ್ಥಿತರಿದ್ದರು. ಅನಿತ ಹರನಗಿರಿ ನಿರೂಪಿಸಿದರು.
ಇನ್ನಷ್ಟು ಓದಿ