ಚೆನ್ನೈ: ಧಾರಾವಾಹಿ ನಟಿ ವಿ.ಜೆ. ಮಹಾಲಕ್ಷ್ಮೀ ಮತ್ತು ತಮಿಳು ನಿರ್ಮಾಪಕ ರವೀಂದರ್ ಚಂದ್ರಶೇಖರ್ ತಮ್ಮ ಪ್ರೇಮ ವಿವಾಹದಿಂದಲೇ ಭಾರಿ ಸುದ್ದಿಯಾಗಿದ್ದು ಎಲ್ಲರಿಗೂ ತಿಳಿದಿದೆ. ಅದಕ್ಕೆ ಕಾರಣ ಮಹಾಲಕ್ಷ್ಮೀ ಸೌಂದರ್ಯವತಿಯಾಗಿದ್ದು, ಆಕೆ ಮದುವೆ ಆಗಿರುವ ರವೀಂದರ್ ದಡೂತಿ ಮನುಷ್ಯ.
ಕೆಲ ದಿನಗಳ ಹಿಂದೆ ರವೀಂದರ್ ತಮ್ಮ ಇನ್ಸ್ಟಾಗ್ರಾಂನಲ್ಲಿ ತಮ್ಮ ಹಳೆಯ ಫೋಟೋವೊಂದನ್ನು ಶೇರ್ ಮಾಡಿಕೊಂಡು, 'ನಾನು ನನ್ನೊಳಗೆ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ' ಎಂದು ಬರೆದುಕೊಂಡಿದ್ದರು. ಇದೇ ಪೋಸ್ಟ್ ಇದೀಗ ಡಿವೋರ್ಸ್ ವದಂತಿಯನ್ನು ಹುಟ್ಟುಹಾಕಿದೆ. ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ, ದಾಂಪತ್ಯದಲ್ಲಿ ಬಿರುಕು ಮೂಡಿದೆ ಮತ್ತು ವಿಚ್ಛೇದನ ತೆಗೆದುಕೊಳ್ಳಬಹುದು ಎಂದು ಅನೇಕ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ರವೀಂದರ್ ಮತ್ತು ಮಹಾಲಕ್ಷ್ಮೀ, ಸಾಮಾನ್ಯವಾಗಿ ದೇವಸ್ಥಾನಗಳು, ಹೋಟೆಲ್‌ಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟಿಗೆ ಇರುವ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಆದರೆ, ರವೀಂದರ್ ಮಾತ್ರ ಕೆಲ ದಿನಗಳಿಂದ ಒಂಟಿಯಾಗಿ ನಿಂತಿರುವ ಫೋಟೋವನ್ನು ಶೇರ್ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ, 'ನಿಮ್ಮೊಳಗಿನ ಕಠಿಣತೆಯನ್ನು ಜಗತ್ತಿಗೆ ತರುವುದು ಪರಿಸ್ಥಿತಿ! ನನಗಾಗಿ ಕಾಯುತ್ತಿದ್ದೇನೆ' ಎಂದು ಬರೆದುಕೊಂಡಿದ್ದರು. ಇದೀಗ ನಾನು ನನ್ನೊಳಗೆ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಸದಾ ಜತೆಯಲ್ಲಿರುವ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದ ರವೀಂದರ್ ಇದೀಗ ಏಕಾಂಗಿಯಾಗಿರುವ ಮತ್ತು ದುಃಖದಲ್ಲಿರುವ ಫೋಟೋಗಳನ್ನು ಪೋಸ್ಟ್ ಮಾಡಿರುವುದು ಡಿವೋರ್ಸ್ ವದಂತಿಗೆ ಕಾರಣವಾಗಿದೆ. ಇದೇ ರೀತಿ ಅನೇಕ ಪೋಸ್ಟ್ಗಳನ್ನು ಮಾಡಿದ್ದು, ಇಬ್ಬರ ನಡುವೆ ಬ್ರೇಕಪ್ ಆಗುತ್ತಿದೆ ಎನ್ನುವ ಅರ್ಥದಲ್ಲಿ ಬರೆಯುವುದನ್ನು ಮುಂದುವರಿಸಿದ್ದು, ಮಹಾಲಕ್ಷ್ಮೀ ಕೆಂಗಣ್ಣಿಗು ಗುರಿಯಾಗಿದೆ.
ಮಹಾಲಕ್ಷ್ಮೀ ಎಚ್ಚರಿಕೆ
ಪದೇಪದೆ ಏಕಾಂಗಿ ಫೋಟೋಗಳನ್ನು ಶೇರ್ ಮಾಡಿಕೊಂಡು ಗಂಡ ಮಾರ್ಮಿಕವಾಗಿ ಬರೆದುಕೊಳ್ಳುತ್ತಿರುವುದು ಮಹಾಲಕ್ಷ್ಮೀ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಗಂಡನಿಗೆ ಮಹಾಲಕ್ಷ್ಮೀ ಖಡಕ್ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಲಾಗಿದೆ. ಬ್ರೇಕಪ್ ಆಗಿದ್ದೇವೆ ಎನ್ನುವ ಅರ್ಥದಲ್ಲಿ ಏಕಾಂಗಿ ಫೋಟೋಗಳನ್ನು ಹಂಚಿಕೊಂಡು ಏನೇನೋ ಬರೆಯಬೇಡಿ. ಇನ್ನು ಮುಂದೆ ಇಂತಹ ಪೋಸ್ಟ್ ಮಾಡಬೇಡಿ ಎಂದು ಮಹಾಲಕ್ಷ್ಮಿ, ಪತಿಗೆ ಎಚ್ಚರಿಕೆ ನೀಡಿದ್ದಾರಂತೆ. ಆದರೂ ರವೀಂದರ್ ಏಕಾಂಗಿ ಫೋಟೋಗಳನ್ನು ಶೇರ್ ಮಾಡಿಕೊಳ್ಳುವುದನ್ನು ನಿಲ್ಲಿಸಿಲ್ಲ.
ಅಂದಹಾಗೆ ಮಹಾಲಕ್ಷ್ಮೀ ಮತ್ತು ರವಿಂದರ್ ಇಬ್ಬರು ತಿರುಪತಿಯಲ್ಲಿ ಕಳೆದ ವರ್ಷ ಸೆ.1ರಂದು ಮದುವೆ ಆದರು. ಇಬ್ಬರಿಗೂ ಇದು ಎರಡನೇ ಮದುವೆ ಆಗಿದ್ದು, ಮಹಾಬಲಿಪುರಂನಲ್ಲಿ ಇಬ್ಬರು ಹನಿಮೂನ್ ಆಚರಿಸಿದರು. ಮದುವೆ ಬೆನ್ನಲ್ಲೇ ನವದಂಪತಿ ಸನ್ ಟಿವಿಗೆ ಸಂದರ್ಶನ ನೀಡಿದ್ದರು. ಈ ವೇಳೆ ಹಣಕ್ಕಾಗಿ ಮದುವೆಯಾದ್ರಾ? ಎಂದು ಮಹಾಲಕ್ಷ್ಮೀ ಅವರನ್ನು ಪ್ರಶ್ನಿಸಲಾಗಿತ್ತು. ಏಕೆಂದರೆ, ಅನೇಕರ ಮನದಲ್ಲಿಯೂ ಇದೇ ಪ್ರಶ್ನೆ ಇದೆ. ಅಲ್ಲದೆ, ಕಾಮೆಂಟ್ಗಳಲ್ಲಿಯೂ ಹಣಕ್ಕಾಗಿಯೇ ಮದುವೆ ಆಗಿದ್ದಾರೆ ಎಂದು ಹೇಳಲಾಗುತ್ತಿತ್ತು. ಪ್ರಶ್ನೆಗೆ ಉತ್ತರ ನೀಡಿದ ಮಹಾಲಕ್ಷ್ಮೀ ನಾನು ಆರ್ಥಿಕವಾಗಿ ಸ್ವತಂತ್ರಳಾಗಿದ್ದಾನೆ ಮತ್ತು ನನ್ನ ಮಗನನ್ನು ನನ್ನದೇ ಹಣದಲ್ಲಿ ಬೆಳೆಸುವಷ್ಟು ಆರ್ಥಿಕವಾಗಿ ಸದೃಢಳಾಗಿದ್ದೇನೆ. ಮದುವೆ ಆಗದಿರಲು ಬಯಸಿದ್ದೇ ಆದರೆ, ರವೀಂದರ್ ಕೇಳಿದ ರೀತಿ ನನಗೆ ಇಷ್ಟವಾಯಿತು. ನೀವು ನನ್ನ ಪತ್ನಿಯಾಗುವಿರಾ? ಎಂದು ಮಸೇಜ್ ಮಾಡಿದರು. ಮಸೇಜ್ ನೋಡಿದ ಬಳಿಕ ತುಂಬಾ ಸಮಯ ತೆಗೆದುಕೊಂಡು, ಯೋಚಿಸಿ, ಒಪ್ಪಿಗೆ ಸೂಚಿಸಿದೆ ಎಂದು ಹೇಳಿದ್ದರು.
ಮಹಾಲಕ್ಷ್ಮೀ ಅವರು ಕಿರುತೆರೆ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ವಾಣಿ ರಾಣಿ, ಆಫೀಸ್, ಚೆಲ್ಲಮೇ, ಉಥಿರಿಪೂಕ್ಕಳ್, ಒರು ಕೈ ಒಸೈ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಇವರು ನಟಿಸಿದ್ದಾರೆ. ಪ್ರಸ್ತುತ ಅವರು ನಟಿಸಿರುವ ಮಹಾರಸಿ ಎಂಬ ಧಾರಾವಾಹಿ ಪ್ರಸಾರವಾಗುತ್ತಿದೆ. ರವೀಂದರ್ ಚಂದ್ರಶೇಖರನ್ ಅವರು 'ನಟ್ಪುನ ಎನ್ನಡು ಥೆರಿಯುಮ', 'ಮುರುಂಗೈಕೈ ಚಿಪ್ಸ್', 'ವಿಡಿಯುಮ್ ವಾರೈ ಕಾಥಿರು' ಮುಂತಾದ ಸಿನಿಮಾಗಳನ್ನು ತಮ್ಮ ಲಿಬ್ರಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. (ಏಜೆನ್ಸೀಸ್)
ಮಹಾಲಕ್ಷ್ಮೀ ದಾಂಪತ್ಯದಲ್ಲಿ ಬಿರುಗಾಳಿ! ದಡೂತಿ ಗಂಡನಿಗೆ ಖಡಕ್ ಎಚ್ಚರಿಕೆ ಕೊಟ್ಟ ನಟಿ
ಗಂಡನ ಈ ಒಂದು ಅಭ್ಯಾಸ ನನ್ನ ದೇಹದ ತೂಕ ಹೆಚ್ಚಿಸುತ್ತಿದೆ, ನಿದ್ರೆಗೂ ಭಂಗ! ಮಹಾಲಕ್ಷ್ಮೀ ರೋಧನೆ
ಮಹಾಲಕ್ಷ್ಮೀ ದಾಂಪತ್ಯದಲ್ಲಿ ಬಿರುಗಾಳಿ! ದಡೂತಿ ಗಂಡನಿಗೆ ಖಡಕ್ ಎಚ್ಚರಿಕೆ ಕೊಟ್ಟ ನಟಿ

