ಮುಖಪುಟ
ಹಿರಿಯ ವಕೀಲ, ಮಾಜಿ ಅಟಾರ್ನಿ ಜನರಲ್ ಸೊಲಿ ಸೊರಾಬ್ಜಿ ಕರೊನಾ ಸೋಂಕಿನಿಂದ ನಿಧನ
ನವದೆಹಲಿ: ಹಿರಿಯ ವಕೀಲರು ಮತ್ತು ಶ್ರೇಷ್ಠ ನ್ಯಾಯಶಾಸ್ತ್ರಜ್ಞ ಸೊಲಿ ಸೊರಾಬ್ಜಿ (91) ಅವರು ಮಹಾಮಾರಿ ಕರೊನಾ ಸೋಂಕಿನಿಂದ ಶುಕ್ರವಾರ ಮೃತಪಟ್ಟಿದ್ದಾರೆ. ಸೊರಬ್ಜಿ ಅವರಿಗೆ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಸೊರಾಬ್ಜಿ ಅವರು 1930ರಲ್ಲಿ ಜನಿಸಿದರು. ಕಾನೂನು ಅಧ್ಯಯನ ಮಾಡಿದ್ದ ಸೊರಾಬ್ಜಿ ಅವರು 1953ರಲ್ಲಿ ಬಾರ್ ಕೌನ್ಸಿಲ್ನಲ್ಲಿ ನೋಂದಣಿ ಮಾಡಿಸಿಕೊಂಡರು. 1971ರಲ್ಲಿ ಬಾಂಬೆ ಹೈಕೋರ್ಟ್ ಅವರನ್ನು ಹಿರಿಯ ವಕೀಲರಾಗಿ ನೇಮಿಸಿತ್ತು.
ಸೊರಾಬ್ಜಿ ಅವರು ಸುಮಾರು ಏಳು ದಶಕಗಳ ಕಾಲ ಕಾನೂನು ವೃತ್ತಿಯಲ್ಲಿದ್ದರು ಮತ್ತು ಎರಡು ಬಾರಿ ಭಾರತದ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ್ದಾರೆ. 1989 ರಿಂದ 90ರವೆಗೆ ಮೊದಲ ಬಾರಿ ಮತ್ತು 1998 ರಿಂದ 2004ರವೆಗೆ ಎರಡನೇ ಬಾರಿ ಅಟಾರ್ನಿ ಜನರಲ್ ಆಗಿ ಕಾರ್ಯನಿರ್ವಹಿಸಿದ್ದಾರೆ. (ಏಜೆನ್ಸೀಸ್)
ಕರೊನಾ ಮೂರನೇ ಅಲೆ ಕುರಿತು ಭಯಾನಕ ಮಾಹಿತಿ ಬಿಚ್ಚಿಟ್ಟ ಮಹಾರಾಷ್ಟ್ರ ಆರೋಗ್ಯ ಸಚಿವ!
ಇಸ್ರೇಲ್ನಲ್ಲಿ ಕಾಲ್ತುಳಿತಕ್ಕೆ 28 ಮಂದಿ ದುರಂತ ಸಾವು: 50ಕ್ಕೂ ಹೆಚ್ಚು ಮಂದಿಯ ಸ್ಥಿತಿ ಗಂಭೀರ
ವಿಶ್ವದ ದೀರ್ಘಕಾಲಿಕ ಕರೊನಾ ರೋಗಿ ಈತ: 1 ವರ್ಷ ಕೋವಿಡ್ನಿಂದ ಅನುಭವಿಸಿದ ನರಕಯಾತನೆ ಭಯಾನಕ!
related stories
-
Breaking Davanagere ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
-
Breaking Bangalore ಎಚ್ಡಿಕೆ-ಇಂದ್ರಜಿತ್ ಲಂಕೇಶ್ ಭೇಟಿ ಫೋಟೋ ವೈರಲ್: ಮಾಜಿ ಸಿಎಂ ಹೇಳಿದ್ದು ಹೀಗೆ.
-
Breaking Bangalore ಎಲೆ ಮಲ್ಲಪ್ಪ ಚೆಟ್ಟಿ ಕೆರೆಯಲ್ಲಿ ವಾಟರ್ ಸ್ಪೋರ್ಟ್ಸ್ ತರಬೇತಿ: ಸುಮಾರು 23 ಜನರಿಗೆ...