Dailyhunt
ಹುಟ್ಟುಕುರುಡು ಮಗುವಿನ ಕಣ್ಣುಗಳಿಗೆ ತಾರಾ ಕಳೆ; ನಟಿ ಜಯಂತಿಯ ನೇತ್ರದಾನ..

ಹುಟ್ಟುಕುರುಡು ಮಗುವಿನ ಕಣ್ಣುಗಳಿಗೆ ತಾರಾ ಕಳೆ; ನಟಿ ಜಯಂತಿಯ ನೇತ್ರದಾನ..

ಬೆಂಗಳೂರು: ಡಾ.ರಾಜ್​ಕುಮಾರ್​ ಮುಂತಾದವರೊಂದಿಗೆ ನಟಿಸಿದ್ದ, ಅಭಿನಯ ಶಾರದೆ ಎಂದೇ ಹೆಸರಾಗಿದ್ದ ನಟಿ ಜಯಂತಿ ಅವರ ಮರಣೋತ್ತರ ಪ್ರಕ್ರಿಯೆಗಳು ಡಾ.ರಾಜ್ ಮುಂತಾದವರ ಹಾದಿಯಲ್ಲೇ ಸಾಗಿದೆ. ಅರ್ಥಾತ್​, ಜಯಂತಿ ಅವರ ನೇತ್ರಗಳನ್ನು ದಾನ ಮಾಡಲಾಗಿದೆ.

ನಟಿ ಜಯಂತಿ ಅವರ ಕಣ್ಣುಗಳನ್ನು ಬೆಂಗಳೂರಿನ ನಾರಾಯಣ ನೇತ್ರಾಲಯದ ಡಾ.ರಾಜ್​ಕುಮಾರ್ ಐ ಬ್ಯಾಂಕ್​ಗೆ ದಾನ ಮಾಡಲಾಗಿದ್ದು, ಆ ಕುರಿತ ಪ್ರಕ್ರಿಯೆ ರುದ್ರಭೂಮಿಯಲ್ಲೇ ನಡೆದಿದೆ. ವಿಶೇಷವೆಂದರೆ ಈ ನೇತ್ರದಾನದಿಂದ ಹುಟ್ಟುಕುರುಡು ಮಗುವೊಂದರ ಕಣ್ಣುಗಳಿಗೆ ತಾರಾ ಕಳೆ ಬರಲಿದೆ.

ಹುಟ್ಟಿದಾಗಿನಿಂದಲೇ ಅಂಧತ್ವಕ್ಕೆ ಒಳಗಾಗಿರುವ ಮಗುವೊಂದಕ್ಕೆ ಜಯಂತಿ ಅವರ ಕಣ್ಣುಗಳನ್ನು ಅಳವಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇದುವರೆಗೆ ಜಗತ್ತನ್ನೇ ನೋಡಿರದ ಈ ಮಗು ಇನ್ನು ಅಭಿನಯ ಶಾರದೆಯ ಕಣ್ಣುಗಳಿಂದ ಪ್ರಪಂಚವನ್ನು ನೋಡಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Vijayvani