Dailyhunt
ಇನ್ನಷ್ಟು ದಿನ ಕರ್ಫ್ಯೂ ಮುಂದುವರಿಕೆ! ಲಾಕ್​ಡೌನ್​ ಸುಳಿವು ಕೊಟ್ಟ ಸಚಿವರು

ಇನ್ನಷ್ಟು ದಿನ ಕರ್ಫ್ಯೂ ಮುಂದುವರಿಕೆ! ಲಾಕ್​ಡೌನ್​ ಸುಳಿವು ಕೊಟ್ಟ ಸಚಿವರು

ಬೆಂಗಳೂರು: ರಾಜ್ಯಾದ್ಯಂತ ವೀಕೆಂಡ್​ ಕರ್ಫ್ಯೂ ಜಾರಿಯಲ್ಲಿದ್ದು, ಇದು ಇನ್ನಷ್ಟು ದಿನಗಳ ವರೆಗೆ ವಿಸ್ತರಣೆ ಆಗುವ ಬಗ್ಗೆ ಸಚಿವರು ಸುಳಿವು ಕೊಟ್ಟಿದ್ದಾರೆ.

ಸದ್ಯ ಜಾರಿಯಲ್ಲಿಯಲ್ಲಿರುವಂತೆ ಸೋಮವಾರ ಬೆಳಗ್ಗೆ 6ರವರೆಗೂ ವೀಕೆಂಡ್​ ಲಾಕ್​ಡೌನ್​ ಇದೆ. ಈ ನಡುವೆ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಅಶ್ವಥನಾರಾಯಣ್, ಈಗಿರುವ ಕರ್ಫ್ಯೂ ಮುಂದುವರಿಸುವ‌ಂತೆ ಸಲಹೆ ಇದೆ. ಜನರ ಬದುಕಿಗೆ ಅನುವು ಮಾಡುವ ಮೂಲಕ ಕರ್ಫ್ಯೂ ಕ್ರಮ ಕೈಗೊಂಡಿದ್ದೇವೆ. ಇದನ್ನು ಮುಂದುವರಿಸಬೇಕಾ? ಬೇಡವಾ? ಎಂಬುದರ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.

ಇದೇ ವಿಚಾರವಾಗಿ ಮಾತನಾಡಿದ ಸಚಿವ ಬಸವರಾಜ ಬೊಮ್ಮಾಯಿ, ಕರ್ಫ್ಯೂ ವೇಳೆ ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿ ಕೊಟ್ಟಿದ್ದೇವೆ. ಲಾಕ್​ಡೌನ್​ ಮುಂದುವರಿಸುವ ಬಗ್ಗೆ ಸೋಮವಾರ ಕ್ಯಾಬಿನೆಟ್​ನಲ್ಲಿ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

Dailyhunt
Disclaimer: This content has not been generated, created or edited by Dailyhunt. Publisher: Vijayvani