Wednesday, 16 Sep, 7.42 pm ವಿಜಯವಾಣಿ

ಮುಖಪುಟ
ಜೈಲ್​​​ ಬಳಿ ಸಂಜನಾ ಗಲ್ರಾನಿ ಕಿರಿಕ್; 'ಚಿಕ್ಕದಾಯಿತು..ನಾನು ಹೋಗಲ್ಲ' ಎಂದು ಕೂಗಾಟ

ಬೆಂಗಳೂರು: ನಟಿ ಸಂಜನಾ ಗಲ್ರಾನಿ ಗಲಾಟೆ ಮಾಡಿಕೊಳ್ಳುವುದು ತೀರ ಸಾಮಾನ್ಯವಾಗಿಬಿಟ್ಟಿದೆ. ಸಿಸಿಬಿ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆಯುವ ಮೊದಲು ಪ್ರಶಾಂತ್​ ಸಂಬರಗಿ ಅವರಿಗೆ ಬಾಯಿಗೆ ಬಂದಂಗೆ ಬೈದಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ವಿರುದ್ಧವೂ ಕೂಗಿದ್ದಿದೆ.

ಇಂದು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಆದ ನಟಿ ಸಂಜನಾ ಗೇಟ್​ ಬಳಿ ಗಲಾಟೆ ಮಾಡಿದ್ದಾರೆ. ಇಷ್ಟು ಚಿಕ್ಕ ಗೇಟ್​​ನಲ್ಲಿ ನಾನು ಒಳ ಹೋಗುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದರು. ನಾನು ಹೋಗಲ್ಲ..ಹೋಗಲ್ಲ ಎಂದು ರಾಗ ಎಳೆದಿದ್ದಾರೆ ಎನ್ನಲಾಗಿದೆ.

ಕೆಲವು ಹೊತ್ತು ಅಲ್ಲೇ ಕಿರಿಕ್​ ಮಾಡಿದ ಸಂಜನಾ ನಂತರ ಗೇಟ್​ ಒಳಗೆ ಹೋಗಿದ್ದಾರೆ.(ದಿಗ್ವಿಜಯ ನ್ಯೂಸ್​)

ರಾಗಿಣಿಗಾಗಿ ಪಾಲಕರು ತಂದ ಬಟ್ಟೆಯನ್ನು ದೇವಸ್ಥಾನದ ಎದುರು ಇಟ್ಟ ಪೊಲೀಸರು

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top