Dailyhunt Logo
  • Light mode
    Follow system
    Dark mode
    • Play Story
    • App Story
ಜೂನ್ 5ರಿಂದ 'ಮೈಸೂರು ಟ್ರಾವಲ್ ಮಾರ್ಟ್' ಉತ್ಸವ

ಜೂನ್ 5ರಿಂದ 'ಮೈಸೂರು ಟ್ರಾವಲ್ ಮಾರ್ಟ್' ಉತ್ಸವ

ಮೈಸೂರು:'ಮೈಸೂರು ಟ್ರಾವಲ್ ಮಾರ್ಟ್‌' ಐದನೇ ಆವೃತ್ತಿಯ ಉತ್ಸವವನ್ನು ಜೂ.5ರಿಂದ 7ರವರೆಗೆ ವಿಜಯನಗರ ಎರಡನೇ ಹಂತದಲ್ಲಿರುವ ಜಗನ್ನಾಥ ಸೆಂಟರ್ ಫಾರ್ ಆರ್ಟ್ಸ್ ಆಯಂಡ್ ಕಲ್ಚರ್ (ಜೆಸಿಎಸಿ) ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಆಯೋಜನಾ ಸಮಿತಿ ಉಪಾಧ್ಯಕ್ಷ ಸಿ.ನಾರಾಯಣಗೌಡ ಹೇಳಿದರು.
ಮೈಸೂರು ಟ್ರಾವಲ್ಸ್ ಅಸೋಸಿಯೇಷನ್, ಕೇಂದ್ರ ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖೆ, ಮೈಸೂರು ಹೋಟೆಲ್ ಮಾಲೀಕರ ಸಂಘ, ಸ್ಕಾಲ್ ಇಂಟರ್‌ನ್ಯಾಷನಲ್ ಮೈಸೂರು ಸೇರಿದಂತೆ ವಿವಿಧ ಸಂಘ-ಸಂಸ್ಥೆ, ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್ ಸಹಯೋಗದಲ್ಲಿ ಉತ್ಸವ ಆಯೋಜಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.5ರಂದು ಮಧ್ಯಾಹ್ನ 2.30ಕ್ಕೆ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಕಾವತ್ ಕಾರ್ಯಕ್ರಮ ಉದ್ಘಾಟಿಸುವರು. ಮಾಜಿ ಸಚಿವರಾದ ಎಚ್.ಕೆ.ಪಾಟೀಲ್, ಡಾ.ಎಚ್.ಸಿ.ಮಹದೇವಪ್ಪ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಕೆ.ಹರೀಶ್‌ಗೌಡ ಭಾಗವಹಿಸಲಿದ್ದಾರೆ ಎಂದು ಹೇಳಿದರು.6ರಂದು ಬೆಳಗ್ಗೆ 10.30ಕ್ಕೆ ಮಾಧ್ಯಮ ಹಾಗೂ ಪ್ರವಾಸೋದ್ಯಮ, ಮೈಸೂರು ವಿಮಾನ ನಿಲ್ದಾಣ ಅಭಿವೃದ್ಧಿ ಕುರಿತ ಚರ್ಚೆ, ಮೈಸೂರಿನಲ್ಲಿ ಫಿಲಂ ಸಿಟಿ, ಪ್ರವಾಸೋದ್ಯಮ ಹಾಗೂ ಸುಸ್ಥಿರ ಅಭಿವೃದ್ಧಿ ವಿಷಯಗಳ ಬಗ್ಗೆ ಹಿರಿಯ ಪತ್ರಕರ್ತರು, ಮೈಸೂರಿನ ಖ್ಯಾತ ಚಿತ್ರನಟ-ನಟಿಯರು, ಸುಸ್ಥಿರ ಪ್ರವಾಸೋದ್ಯಮದ ರೂವಾರಿಗಳಿಂದ ಚರ್ಚಾ ಕಾರ್ಯಕ್ರಮ ನಡೆಯಲಿದೆ. ಅದೇ ದಿನ ಸಂಜೆ 'ಸ್ಕಾಲ್ ಇಂಟರ್‌ನ್ಯಾಷನಲ್ ಮೈಸೂರು ಟೂರಿಸಂ ಆಯಂಡ್ ಹಾಸ್ಪಿಟಾಲಿಟಿ ಅವಾರ್ಡ್ ನೈಟ್' ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.7ರಂದು ಸಂಜೆ 5ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಇದರೊಂದಿಗೆ ಮೂರು ದಿನಗಳೂ 100ಕ್ಕೂ ಹೆಚ್ಚು ಮಳಿಗೆಗಳು (ಸ್ಟಾಲ್‌ಗಳು) ಬೆಳಗ್ಗೆ 10ರಿಂದ ಸಂಜೆ 8ರವರೆಗೂ ತೆರೆದಿರುತ್ತವೆ. ಮೈಸೂರು ಅಲ್ಲದೆ ಕೊಡಗು, ಜೈಪುರ, ರಾಜಸ್ಥಾನ, ಕೇರಳ, ಭುವನೇಶ್ವರ್, ಗುಜರಾತ್, ಜಮ್ಮು-ಕಾಶ್ಮೀರ ಸೇರಿದಂತೆ ಹಲವು ರಾಜ್ಯಗಳಿಂದ ಪ್ರವಾಸೋದ್ಯಮಿಗಳು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.ದೇಶದ ವಿವಿಧೆಡೆಯಿಂದ 500ಕ್ಕೂ ಹೆಚ್ಚು ಹೋಸ್ಟೆಡ್ ಬೈಯರ್‌ಗಳು ಆಗಮಿಸಲಿದ್ದಾರೆ. ರಾಜ್ಯ ಹಾಗೂ ಮೈಸೂರನ್ನು ದೇಶದ ಪ್ರವಾಸೋದ್ಯಮ ನಕ್ಷೆಯಲ್ಲಿ ಇನ್ನೂ ಹೆಚ್ಚು ಪ್ರಾಮುಖ್ಯ ಪಡೆಯುವಂತೆ ಮಾಡುವುದು ಇದರ ಉದ್ದೇಶವಾಗಿದೆ. ಎಲ್ಲರಿಗೂ ಕಾರ್ಯಕ್ರಮಕ್ಕೆ ಮುಕ್ತ ಅವಕಾಶವಿದೆ ಎಂದು ತಿಳಿಸಿದರು.ಮೈಸೂರು ಟ್ರಾವಲ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ.ಎಸ್.ಪ್ರಶಾಂತ್, ಮೈಸೂರು ಟ್ರಾವಲ್ ಮಾರ್ಟ್ ಛೇರ್ಮನ್ ಸಿ.ಎ.ಜಯಕುಮಾರ್, ಕಾರ್ಯದರ್ಶಿ ಸಮರ್ಥ್ ಜಿ.ವೈದ್ಯ, ಉಪಾಧ್ಯಕ್ಷ ಡೇವಿಡ್ ರಾಜ್, ಕಾರ್ಯದರ್ಶಿ ಮಂಜುನಾಥ್, ಮೈಸೂರು ಹೋಟೆಲ್ ಮಾಲೀಕರ ಧರ್ಮದತ್ತಿಯ ಅಧ್ಯಕ್ಷ ರವಿಶಾಸ್ತ್ರಿ ಇದ್ದರು.

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani