Sunday, 11 Apr, 12.28 pm ವಿಜಯವಾಣಿ

ದೇಶ
ಕಾಡುಗಳ್ಳ ವೀರಪ್ಪನ್​ ರಹಸ್ಯವೊಂದನ್ನು ಬಿಚ್ಚಿಟ್ಟ ಮಗಳು: ಸತ್ಯಮಂಗಲ ಅರಣ್ಯದಲ್ಲಿ ಅಡಗಿದೆ ಆ ರಹಸ್ಯ!

ಚೆನ್ನೈ: ಒಂದು ಕಾಲದಲ್ಲಿ ತಮಿಳುನಾಡು ಮತ್ತು ಕರ್ನಾಟಕ ಪೊಲೀಸರಿಗೆ ತಲೆ ನೋವಾಗಿದ್ದ ಕಾಡುಗಳ್ಳ ವೀರಪ್ಪನ್ ಇಂದು ಇತಿಹಾಸ ಪುಟದಲ್ಲಿ ಕುಖ್ಯಾತಿಯಾಗಿಯೇ ಉಳಿಕೊಂಡಿದ್ದಾರೆ. ಇದೀಗ ವೀರಪ್ಪನ್ ಕುರಿತಾಗಿ ಮಗಳು ವಿಜಯಲಕ್ಷ್ಮೀ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ.

ವಿಜಯಲಕ್ಷ್ಮೀ ಪ್ರಕಾರ ತಮ್ಮ ತಂದೆ ವೀರಪ್ಪನ್ ಸಾಕಷ್ಟು ನಿಧಿಯನ್ನು ಸತ್ಯಮಂಗಲ ಅರಣ್ಯ ಪ್ರದೇಶದಲ್ಲಿ ಹೂತಿಟ್ಟಿದ್ದಾರಂತೆ. ಅದು ಈಗಲೂ ಇದೆ. ಶೋಧ ಕಾರ್ಯಚರಣೆ ಮಾಡಿದರೆ ಬಹುಶಃ ಬಯಲಿಗೆ ತರಬಹುದು ಎಂದಿದ್ದಾರೆ.

: 'ಮಾದರಿ ನೀತಿ ಸಂಹಿತೆ ಅಲ್ಲ, ಮೋದಿ ನೀತಿ ಸಂಹಿತೆ' ಎಂದು ಚುನಾವಣಾ ಆಯೋಗವನ್ನು ಲೇವಡಿ ಮಾಡಿದ ದೀದಿ

ಸದ್ಯ ವಿಜಯಲಕ್ಷ್ಮೀ ಅವರು 'ಮಾವೀರನ್​ ಪಿಲೈ' ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಅನೇಕ ಕುತೂಹಲಕಾರಿ ಮಾಹಿತಿಗಳನ್ನು ವಿಜಯಲಕ್ಷ್ಮಿ ಅವರು ತಿಳಿಸಿದರು. ವಿಜಯಲಕ್ಷ್ಮೀ, ವೀರಪ್ಪನ್​ ಅವರ ಪ್ರೀತಿಯ ಮಗಳಂತೆ. ಸತ್ಯಮಂಗಲ ಅರಣ್ಯದಲ್ಲಿ ಅನೇಕ ವರ್ಷಗಳವರೆಗೆ ಉಳಿದಕೊಂಡಿದ್ದರಂತೆ.

ದಟ್ಟಾರಣ್ಯದಲ್ಲಿ ನಮ್ಮ ತಂದೆ ಮುಚ್ಚಿಟ್ಟಿರುವ ಒಂದು ದೊಡ್ಡ ನಿಧಿ ಇದೆ. ಅದನ್ನು ಪತ್ತೆಹಚ್ಚಬೇಕಿದೆ. ನಮ್ಮ ತಂದೆಗೆ ಬಿಟ್ಟು ಇನ್ಯಾರಿಗೂ ಆ ನಿಧಿಯ ಬಗ್ಗೆ ತಿಳಿದಿರಲಿಲ್ಲ ಎಂದಿದ್ದಾರೆ. ನನ್ನೊಂದಿಗೆ ಈ ವಿಚಾರ ಹೇಳಿಕೊಂಡಿದ್ದರು. ಆದರೆ, ಎಲ್ಲಿದೆ ಎಂಬುದರ ಬಗ್ಗೆ ತಿಳಿಸಿರಲಿಲ್ಲ ಎಂದಿದ್ದಾರೆ. ಇದೀಗ ವಿಜಯಲಕ್ಷ್ಮೀ ಹೇಳಿಕೆಯಿಂದ ಕುತೂಹಲ ಗರಿಗೆದರಿದೆ. ಮೊದಲೇ ಗಂಧದ ಮರ ಮತ್ತು ಆನೆದಂತಗಳನ್ನು ಕದ್ದು ಸಾಗಿಸುತ್ತಿದ್ದ ವೀರಪ್ಪನ್​ ಭಾರಿ ಸಂಪತ್ತನ್ನು ಸಂಪಾದಿಸಿದ್ದ ಎನ್ನಲಾಗಿದೆ.

ವೀರಪ್ಪನ್​ ಕುಟುಂಬದ ವಿಚಾರಕ್ಕೆ ಬರುವುದಾದರೆ, ಅವರಿಗೆ ಮುತ್ತುಲಕ್ಷ್ಮೀ, ವಿದ್ಯಾರಾಣಿ ಮತ್ತು ವಿಜಯಲಕ್ಷ್ಮೀ ಎಂಬ ಮೂವರು ಹೆಣ್ಣು ಮಕ್ಕಳು. ವಿದ್ಯಾರಾಣಿ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಯುವ ಮಹಿಳಾ ನಾಯಕಿಯಾಗಿದ್ದಾರೆ.

: ಸೋಲಿನ ಬೆನ್ನಲ್ಲೇ ಸಿಎಸ್​ಕೆ ತಂಡಕ್ಕೆ ಮತ್ತೊಂದು ಶಾಕ್​: ನಾಯಕ ಧೋನಿಗೆ 12 ಲಕ್ಷ ರೂ. ದಂಡ

ವರನಟ ಡಾ. ರಾಜ್​ಕುಮಾರ್​ ಅವರನ್ನು ಅಪಹರಿಸಿದ ಬಳಿಕ ವೀರಪ್ಪನ್​ ಕರ್ನಾಟಕದಲ್ಲಿ ಕುಖ್ಯಾತಿಯಾದರು. ಕಳ್ಳಸಾಗಾಣೆ ಮಾಡುತ್ತಿದ್ದ ವೀರಪ್ಪನ್​ ಮೇಲೆ ತಮಿಳುನಾಡು ಮತ್ತು ಕರ್ನಾಟಕ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ವೀರಪ್ಪನ್​ ಅಟ್ಟಹಾಸಕ್ಕೆ ಎಷ್ಟೋ ಪೊಲೀಸರು ಸಹ ತಮ್ಮ ಜೀವವನ್ನು ಕಳೆದುಕೊಂಡಿರುವ ಉದಾಹರಣೆಗಳು ಇವೆ.

ಕೊಳ್ಳೇಗಾಲ ತಾಲೂಕಿನ ರಾಮಾಪುರ ಪೊಲೀಸ್​ ಠಾಣೆಗೆ ಬೆಂಕಿ ಹಚ್ಚಿದ್ದು ಭಾರಿ ಸುದ್ದಿಯಾಗಿತ್ತು. ಇಂತಿಪ್ಪ ವೀರಪ್ಪನ್​ 2004ರಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಮೃತಪಟ್ಟಿದ್ದಾನೆ. ಕೆಲವೊಂದು ವಿಚಾರಗಳಲ್ಲಿ ಆಗಾಗ ಸುದ್ದಿಯಾಗುತ್ತಿರುತ್ತಾನೆ. (ಏಜೆನ್ಸೀಸ್​)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಕೆರೆಯಲ್ಲಿ ಬಿದ್ದ ಐಫೋನ್​ ವರ್ಷದ ಬಳಿಕ ಸಿಕ್ತು- ಚಾಲ್ತಿಯಲ್ಲಿದ್ದ ಮೊಬೈಲ್​ ನೋಡಿ ದಂಗಾದ ಮಾಲೀಕ!

ಮೊದಲ ರಾತ್ರಿ ರಕ್ತ ಕಾಣಿಸಿಲ್ಲ ಎಂದು ಡಿವೋರ್ಸ್​ ನೀಡಿದ ಪತಿ ಮಹಾಶಯ ₹10 ಲಕ್ಷ ಬೇಡಿಕೆ ಇಟ್ಟ!

'ಮಾದರಿ ನೀತಿ ಸಂಹಿತೆ ಅಲ್ಲ, ಮೋದಿ ನೀತಿ ಸಂಹಿತೆ' ಎಂದು ಚುನಾವಣಾ ಆಯೋಗವನ್ನು ಲೇವಡಿ ಮಾಡಿದ ದೀದಿ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top