ಕಾಲಮಿತಿಯೋಳಗೆ ಕಾಮಗಾರಿ ಪೂರ್ಣಗೊಳಿಸಿ
ಸಿಂಧನೂರು: ಒಂಬತ್ತು ತಿಂಗಳ ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಗುಣಮಟ್ಟದಲ್ಲಿ ಪೂರ್ಣಗೊಳಿಸಬೇಕು ಎಂದು ಖಾದಿ ಹಾಗೂ ಗ್ರಾಮೋದ್ಯೋಗ ನಿಗಮದ ಅಧ್ಯಕ್ಷ ಆರ್.ಬಸನಗೌಡ ತುರ್ವಿಹಾಳ ಹೇಳಿದರು.ತಾಲೂಕಿನ ವಿವಿಧೆಡೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
50 ಲಕ್ಷ ರೂ. ವೆಚ್ಚದಲ್ಲಿ ಕುರುಕುಂದ ಗ್ರಾಮದಲ್ಲಿ ಸಮುದಾಯ ಭವನ, 25 ಲಕ್ಷ ರೂ. ವೆಚ್ಚದಲ್ಲಿ ಮಲ್ಲದಗುಡ್ಡ ಗ್ರಾಮದಲ್ಲಿ ಸಾಂಸ್ಕೃತಿಕ ಭವನ, 30 ಲಕ್ಷ ರೂ. ವೆಚ್ಚದಲ್ಲಿ ಅರಳಹಳ್ಳಿ ಗ್ರಾಮದಲ್ಲಿ ಸಾಂಸ್ಕೃತಿಕ ಭವನ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಡಿಯಲ್ಲಿ 1 ಕೋಟಿ ರೂ.ವೆಚ್ಚದಲ್ಲಿ ವಿರೂಪಾಪುರ ಗ್ರಾಮದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕೆಪಿಸಿಸಿ ಸದಸ್ಯ ನಲ್ಲಾ ವೆಂಕಟೇಶ್ವರರಾವ, ಎಪಿಎಂಸಿ ಅಧ್ಯಕ್ಷ ಚಂದ್ರಶೇಖರಗೌಡ ವಕೀಲ, ಪ್ರಮುಖರಾದ ಶೇಖರಗೌಡ ಪೊಪಾ, ರವಿಗೌಡ ಮಲ್ಲದಗುಡ್ಡ, ಹನುಮಂತ ಮುರುಸಾಲಿಗಿ, ಬಸವರಾಜ ಕುರಿ, ಶಿವಪ್ಪ ಕುರಿ, ದುರುಗಪ್ಪ ರೌಡಕುಂದ, ಚಂದ್ರಪ್ಪ ಬೇರ‌್ಗಿ, ರಮೇಶ ದೇಸಾಯಿ, ದೇವರಾಜ ಕಪಗಲ್ ಇತರರಿದ್ದರು.
ಇನ್ನಷ್ಟು ಓದಿ

