ಇಂದಿನ ಕಾರ್ಪೋರೇಟ್ ಸಂಸ್ಕೃತಿಯಲ್ಲಿ ಸಾರ್ವಜನಿಕ ಸಭೆಗಳಲ್ಲಿ ಕುಳಿತಾಗ ಪಾದದ ಮೇಲೆ ಪಾದ ಹಾಕಿ ಕುಳಿತುಕೊಳ್ಳುವುದು ಒಂದು ಫ್ಯಾಷನ್. ಇದು ಆತ್ಮವಿಶ್ವಾಸದ ಸಂಕೇತವೆಂದು ಹಲವರು ಭಾವಿಸುತ್ತಾರೆ. ಆದರೆ, ಯೋಗ ವಿಜ್ಞಾನ ಮತ್ತು ಆಧುನಿಕ ವೈದ್ಯಕೀಯ ಶಾಸ್ತ್ರದ ಪ್ರಕಾರ, ಈ ಭಂಗಿಯು ದೇಹದ ಒಳಗಿನ ಸಮತೋಲನವನ್ನು ಹೇಗೆ ಕೆಡಿಸುತ್ತದೆ ಎಂಬುದು ಆತಂಕಕಾರಿ.
ದೇಹದೊಳಗಿನ ಮೌನ ಗೊಂದಲಪಾದದ ಮೇಲೆ ಪಾದ ಇಟ್ಟ ಕ್ಷಣ ನಮ್ಮ ದೇಹದ ನೈಸರ್ಗಿಕ ಜೋಡಣೆ ತಪ್ಪುತ್ತದೆ. ಅದು ರಕ್ತದ ಹರಿವಿಗೆ ಅಡ್ಡಿಯಾಗುತ್ತದೆ. ಹೇಗೆಂದರೆ ತೊಡೆಯ ಭಾಗದ ರಕ್ತನಾಳಗಳ ಮೇಲೆ ಒತ್ತಡ ಬಿದ್ದಾಗ, ರಕ್ತವು ಹೃದಯಕ್ಕೆ ಮರಳಿ ಹರಿಯಲು ಕಷ್ಟವಾಗುತ್ತದೆ. ಈ ಭಂಗಿಯಿಂದಾಗಿ ಕಾಲಿನ ಪೆರೋನಿಯಲ್ ನರ ಒತ್ತಲ್ಪಟ್ಟು, ಕಾಲು ಮರಗಟ್ಟುವಿಕೆ ಅಥವಾ 'ಪಿನ್ ಆಂಡ್ ನೀಡಲ್ಸ್' ಅನುಭವವಾಗುತ್ತದೆ. ಅಲ್ಲದೆ, ಪೆಲ್ವಿಕ್ ಅಸಮತೋಲನವಾಗುತ್ತದೆ. ಅಂದರೆ ಸೊಂಟದ ಮೂಳೆಗಳು ಒಂದು ಕಡೆಗೆ ವಾಲುವುದರಿಂದ ಬೆನ್ನುಮೂಳೆಯ ಮೇಲೆ ಅನಗತ್ಯ ಒತ್ತಡ ಬೀಳುತ್ತದೆ.ಭಗವದ್ಗೀತೆಯ ಯೋಗೋಪದೇಶದಲ್ಲಿ ಯೋಗದ ಸಮ ಸ್ಥಿತಿಯ ವಿವರಣೆ ಇದೆ. ಭಗವದ್ಗೀತೆಯ 6ನೇ ಅಧ್ಯಾಯದಲ್ಲಿ (ಆತ್ಮ ಸಂಯಮ ಯೋಗ), ಶ್ರೀಕೃಷ್ಣನು ಧ್ಯಾನಸ್ಥನಾಗಿ ಕುಳಿತುಕೊಳ್ಳುವ ಭಂಗಿಯನ್ನು ಎಷ್ಟು ನಿಖರವಾಗಿ ವಿವರಿಸಿದ್ದಾನೆಂದರೆ, ಅದು ಇಂದಿನ ಉಜಟ್ಞಟಞಜ್ಚಿಠ (ಕುಳಿತುಕೊಳ್ಳುವ ವಿಜ್ಞಾನ) ಗೂ ಅನ್ವಯಿಸುತ್ತದೆ.ಸಮಂ ಕಾಯಶಿರೋಗ್ರೀವಂ ಧಾರಯನ್ನಚಲಂ ಸ್ಥಿರಃ |ಸಂಪ್ರೇಕ್ಷ್ಯ ನಾಸಿಕಾಗ್ರಂ ಸ್ವಂ ದಿಶಶ್ಚಾನವಲೋಕಯನ್ .
||ಅರ್ಥ: ದೇಹ (ಬೆನ್ನು), ತಲೆ ಮತ್ತು ಕುತ್ತಿಗೆಯನ್ನು ಒಂದೇ ಸರಳ ರೇಖೆಯಲ್ಲಿ (ಸಮಂ), ಅಲುಗಾಡದಂತೆ (ಅಚಲಂ) ಮತ್ತು ಸ್ಥಿರವಾಗಿ ಇಟ್ಟುಕೊಳ್ಳಬೇಕು. ಸಮಂ ಕಾಯಃ: ದೇಹವು ಎಡಕ್ಕಾಗಲಿ, ಬಲಕ್ಕಾಗಲಿ ವಾಲಿರಬಾರದು. ಪಾದದ ಮೇಲೆ ಪಾದ ಹಾಕಿದಾಗ ಬೆನ್ನುಮೂಳೆಯು 'ಖ' ಆಕಾರಕ್ಕೆ ತಿರುಗುತ್ತದೆ, ಇದು ಕೃಷ್ಣನ ಈ ಉಪದೇಶಕ್ಕೆ ವಿರುದ್ಧವಾಗಿದೆ.ಯೋಗದ ದೃಷ್ಟಿಯಲ್ಲಿ ನಾಡಿ ಮತ್ತು ಪ್ರಾಣ ಶಕ್ತಿ: ಯೋಗಶಾಸ್ತ್ರದ ಪ್ರಕಾರ ನಮ್ಮ ದೇಹದಲ್ಲಿ 72,000 ನಾಡಿಗಳಿವೆ. ಇದರಲ್ಲಿ ಇಡಾ , ಪಿಂಗಲಾ ಮತ್ತು ಸುಷುಮ್ನಾ ಪ್ರಮುಖವಾದವು. ನಾವು ನೇರವಾಗಿ ಕುಳಿತಾಗ ಪ್ರಾಣಶಕ್ತಿಯು ಸುಷುಮ್ನಾ ನಾಡಿಯ ಮೂಲಕ ಮುಕ್ತವಾಗಿ ಹರಿಯುತ್ತದೆ. ಕಾಲುಗಳನ್ನು ಒಂದರ ಮೇಲೊಂದು ಹಾಕಿದಾಗ, ಕೆಳಭಾಗದ ಶಕ್ತಿ ಕೇಂದ್ರಗಳು (ಮೂಲಾಧಾರ ಮತ್ತು ಸ್ವಾಧಿಷ್ಠಾನ ಚಕ್ರಗಳು) ಸಂಕುಚಿತಗೊಳ್ಳುತ್ತವೆ. ಇದು ಮನಸ್ಸಿನಲ್ಲಿ ಅನಗತ್ಯ ಆಲೋಚನೆಗಳನ್ನು ಮತ್ತು ಚಂಚಲತೆಯನ್ನು ಹೆಚ್ಚು ಮಾಡುತ್ತದೆ.ಆಧುನಿಕ ವಿಜ್ಞಾನದ ಎಚ್ಚರಿಕೆ: ವೈದ್ಯಕೀಯ ಸಂಶೋಧನೆಗಳ ಪ್ರಕಾರ, ದೀರ್ಘಕಾಲ ಕಾಲು ಹಣೆದು ಕುಳಿತುಕೊಳ್ಳುವುದರಿಂದ ತಾತ್ಕಾಲಿಕವಾಗಿ ರಕ್ತದೊತ್ತಡ ಏರಿಕೆಯಾಗುತ್ತದೆ. ವೇರಿಕೋಸ್ ವೇನ್ಸ್ ಅಂದರೆ ರಕ್ತನಾಳಗಳು ಉಬ್ಬಿಕೊಳ್ಳುವ ಸಮಸ್ಯೆ ಉಂಟಾಗಬಹುದು. ಭುಜಗಳು ಮುಂದಕ್ಕೆ ಬಾಗುವುದು ಮತ್ತು ಕುತ್ತಿಗೆ ನೋವು ಕಾಣಿಸಿಕೊಳ್ಳಬಹುದು.
ಇನ್ನಷ್ಟು ಓದಿ

