Monday, 14 Jun, 5.55 pm ವಿಜಯವಾಣಿ

ಮುಖಪುಟ
ಕಾನ್​ಸ್ಟೇಬಲ್ ಪರೀಕ್ಷೆ ಬರೆದು ಮೋಸ ಮಾಡಿದ್ದ ಐವರು ಪೇದೆಗಳು ವಜಾ; 61 ಮಂದಿ ಅಂದರ್

ಬೆಂಗಳೂರು: ಕಳೆದ ವರ್ಷ ನಡೆದ ಕಾನ್​ಸ್ಟೇಬಲ್​ ಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದ ಪ್ರಕರಣದಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಒಟ್ಟು 61 ಮಂದಿಯನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಐವರು ಕಾನ್​ಸ್ಟೇಬಲ್​ಗಳನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

2020ರ ನವೆಂಬರ್​ನಲ್ಲಿ ಕಾನ್​ಸ್ಟೇಬಲ್ ಪರೀಕ್ಷೆ ನಡೆದಿತ್ತು. ಅದರಲ್ಲಿ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳ ಹೆಸರಿನಲ್ಲಿ ಬೇರೆ ಅಭ್ಯರ್ಥಿಗಳು ಪರೀಕ್ಷೆ ಬರೆದಿರುವುದಾಗಿ ವರದಿಯಾಗಿತ್ತು. ಈ ಬಗ್ಗೆ ರಾಜ್ಯದ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಬೆಂಗಳೂರಿನಲ್ಲಿ 11 ಪ್ರಕರಣ, ಬೆಳಗಾವಿಯಲ್ಲಿ 5 ಪ್ರಕರಣ ಸೇರಿದಂತೆ ಒಟ್ಟು 21 ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿ ಗೆ ವರ್ಗಾಹಿಸಿತ್ತು.

ತನಿಖೆ ನಡೆಸಿರುವ ಸಿಐಡಿ ಪೊಲೀಸರು ಗೋಕಾಕ್​ನ ಲಕ್ಷ್ಮಣ್ ಉತ್ತಪ್ಪ ಬಂಡಿ, ಭೀಮಪ್ಪ ಮಹಾದೇವ, ಲಕ್ಷ್ಮಣ ಮುತ್ತಪ್ಪ, ಸೇರಿದಂತೆ 61 ಆರೋಪಿಗಳ ಬಂಧಿಸಿದ್ದಾರೆ. ಅಭ್ಯರ್ಥಿಗಳ ಹೆಸರಿನಲ್ಲಿ ಪರೀಕ್ಷೆ ಬರೆದಿದ್ದ ಐವರು ಕಾನ್​ಸ್ಟೇಬಲ್​ಗಳನ್ನು ರಾಜ್ಯ ಸರ್ಕಾರ ಕೆಲಸದಿಂದ ವಜಾ ಮಾಡಿದೆ. 21 ಅಭ್ಯರ್ಥಿಗಳು ಶಾಶ್ವತವಾಗಿ ಯಾವುದೇ‌ ಪರೀಕ್ಷೆ ಬರೆಯದಂತೆ ಡಿಬಾರ್ ಮಾಡಲಾಗಿದೆ.

ಬಂಧಿತ ಆರೋಪಿಗಳು ಅಸಲಿ ಅಭ್ಯರ್ಥಿಯ ಆಧಾರ್ ಕಾರ್ಡ್​ನಲ್ಲಿ ನಕಲಿ ಅಭ್ಯರ್ಥಿಗಳ ಪೋಟೋ ಬದಲಾಯಿಸುತ್ತಿದ್ದರು. ಗೋಕಾಕ್​ನ ಪೋಟೋ ಸ್ಟುಡಿಯೋವೊಂದರಲ್ಲಿ ಈ ಕೆಲಸ ಮಾಡಲಾಗುತ್ತಿತ್ತು. ಅಲ್ಲಿ ಪರೀಕ್ಷೆಯ ನಕಲಿ ದಾಖಲೆ ಸೃಷ್ಟಿಸಿರೋದು ಪತ್ತೆಯಾಗಿದೆ ಎನ್ನಲಾಗಿದೆ. ಬಂಧಿತರಿಂದ 1.54 ಲಕ್ಷ ರೂಪಾಯಿ ನಗದು, ಎರಡು ಕಾರು, ಹಾರ್ಡ್ ಡಿಸ್ಕ್ ಮತ್ತು ಮೊಬೈಲ್ ಪೋನ್​ಗಳನ್ನು ಜಪ್ತಿ ಮಾಡಲಾಗಿದೆ.

ತಾನು ತೊಟ್ಟ ಬಟ್ಟೆಯನ್ನೇ ಮಾರಾಟ ಮಾಡಿ ತಿಂಗಳಿಗೆ 4 ಲಕ್ಷ ರೂಪಾಯಿ ದುಡಿಯುವ ಬೆಡಗಿ

ಗಂಡನನ್ನು ಕೊಂದು ಆತನ ಮರ್ಮಾಂಗ ಫ್ರೈ ಮಾಡಿದ ಹೆಂಡತಿ! ಮಹಿಳೆಯ ಹುಚ್ಚಾಟ ಕೇಳಿದರೆ ಶಾಕ್ ಆಗೋದು ಗ್ಯಾರಂಟಿ

17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top