Dailyhunt Logo
  • Light mode
    Follow system
    Dark mode
    • Play Story
    • App Story
ಕಾಂಗ್ರೆಸ್ ಅಪರಾಧಿ ಹಾಗೂ ದೇಶದ್ರೋಹಿಗಳ ಜತೆ ಇದೆ: ಶೋಭಾ ಕರಂದ್ಲಾಜೆ ವಾಗ್ದಾಳಿ

ಕಾಂಗ್ರೆಸ್ ಅಪರಾಧಿ ಹಾಗೂ ದೇಶದ್ರೋಹಿಗಳ ಜತೆ ಇದೆ: ಶೋಭಾ ಕರಂದ್ಲಾಜೆ ವಾಗ್ದಾಳಿ

ಬೆಂಗಳೂರು: ಕಾಂಗ್ರೆಸ್​ ವಿರುದ್ಧ ಹರಿಹಾಯ್ದಿರುವ ಬಿಜೆಪಿ ಸಂಸದೆ ಗಂಭೀರವಾಗಿ ಟೀಕೆ ಮಾಡಿದ್ದಾರೆ. ಗೋಹತ್ಯೆ ಹಾಗೂ ಮುಸಲ್ಮಾನರ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ.

ಈ ಸಂದರ್ಭ ಅವರು 'ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ಸು ಪಡೆಯಲಾಗುವುದು ಎಂದು ಡಿಕೆಶಿ ಹೇಳಿದ್ದಾರೆ.

ರಿಜಿಲ್ ಚಂದ್ರಮಕ್ಕೂಟಿ ಕೇರಳದಲ್ಲಿ ಗೋಹತ್ಯೆ ಮಾಡಿ ಸಂಭ್ರಾಮಚರಣೆ ಮಾಡಿದರು. ಅಂತಹವರ ಜೊತೆ ಡಿಕೆಶಿ ಸ್ನೇಹ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಕಾಲದಲ್ಲಿ ಹಿಂದೂಗಳ ಹತ್ಯೆಯಾಯಿತು.

ಇಮ್ರಾನ್ ಕರ್ನಾಟಕಕ್ಕೆ ಬಂದು ಟಿಪ್ಪು ಪರ ಭಾಷಣ ಮಾಡಿದ್ದ. ಮುಸ್ಲಿಮರಿಗೆ ತಲೆ ತಗ್ಗಿಸಿ ಗೊತ್ತಿಲ್ಲ. ತಲೆ ಕಡಿದು ಗೊತ್ತಿದೆ ಅಂತ ಇಮ್ರಾನ್ ಭಾಷಣ ಮಾಡಿದ್ದ. ಇಮ್ರಾನ್, ನಮ್ಮ ರಾಜ್ಯದ ಮುಸಲ್ಮಾನರನ್ನು ಎತ್ತಿ ಕಟ್ಟುವ ಯತ್ನ ಮಾಡಿದ್ದ . ಇಮ್ರಾನ್ ಬಗ್ಗೆ ಕಾಂಗ್ರೆಸ್​ಗೆ ಎಲ್ಲವೂ ಗೊತ್ತಿದೆ.

ಯುಪಿಯಲ್ಲಿ ಹತ್ಯೆ ಆದ ಅತೀಕ್, ಅಶ್ರಫ್ ಜತೆ ಇಮ್ರಾನ್ ನಿಕಟ ವರ್ತಿ ಆಗಿದ್ದ. ಇಂಥವರ ಜತೆ ಸಂಪರ್ಕದಲ್ಲಿ ಇದ್ದವರ ಬಂಧನ ಆಗಲಿ ಅಂತ ಕೆಲ ಕಾಂಗ್ರೆಸ್ ಮುಖಂಡರೇ ಆಗ್ರಹ ಮಾಡಿದ್ದಾರೆ. ಕಾಂಗ್ರೆಸ್ ಅಪರಾಧಿಗಳು ಹಾಗೂ ದೇಶದ್ರೋಹಿಗಳ ಜತೆ ಇದೆ. ಇಮ್ರಾನ್​ನನ್ನ ಸ್ಟಾರ್ ಪ್ರಚಾರಕ ಮಾಡಿರುವ ಕಾಂಗ್ರೆಸ್ ಸ್ಪಷ್ಟೀಕರಣ ಕೊಡಬೇಕು

ಕಾಂಗ್ರೆಸ್ ಉದ್ದೇಶ ಏನು? ಇಲ್ಲೂ ಹಿಂದೂಗಳ ವಿರುದ್ಧ ಮುಸ್ಲಿಮರನ್ನು ಎತ್ತಿ ಕಟ್ಟುವ ಕೆಲಸ ಮಾಡ್ತೀರಾ?' ಎಂದು ಶೋಭಾ ಕರಂದ್ಲಾಜೆ ಕಠೋರವಾಗಿ ವಾಗ್ದಾಳಿ ಮಾಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vijayvani