Dailyhunt Logo
  • Light mode
    Follow system
    Dark mode
    • Play Story
    • App Story
ಕಾಂಗ್ರೆಸ್‌ನ ದರಿದ್ರ ಮನಸ್ಥಿತಿ ಮತ್ತೊಮ್ಮೆ ಸಾಬೀತು

ಕಾಂಗ್ರೆಸ್‌ನ ದರಿದ್ರ ಮನಸ್ಥಿತಿ ಮತ್ತೊಮ್ಮೆ ಸಾಬೀತು

ಹಾಸನ:ಮಹಿಳಾ ಮೀಸಲಾತಿ ಮಸೂದೆ ಪರಾಭವಗೊಂಡಿದ್ದಕ್ಕೆ ಸಂಭ್ರಮಿಸಿರುವ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ದೇಶಕ್ಕೆ ಅಂಟಿದ ದರಿದ್ರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿವೆ ಎಂದು ಬಿಜೆಪಿ ರಾಜ್ಯ ವಕ್ತಾರ ಎಚ್.ಎನ್.ಚಂದ್ರಶೇಖರ್ ಕಿಡಿಕಾರಿದರು.
ಕಾಂಗ್ರೆಸ್‌ನ ಕುತಂತ್ರ ನೀತಿಯನ್ನು ದೇಶದ ಜನರು ದಶಕಗಳಿಂದ ನೋಡಿಕೊಂಡು ಬಂದಿದ್ದಾರೆ.
ಲೋಕಸಭೆಯಲ್ಲಿ ಮಸೂದೆಗೆ ವಿರೋಧಿಸುವ ಮೂಲಕ ತಾವು ಮಹಿಳೆಯರ ಏಳಿಗೆ ಸಹಿಸುವುದಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ. ಆ ಮೂಲಕ ಕ್ಷೇತ್ರ ಪುನರ್ವಿಂಗಡಣೆಗೂ ತಮ್ಮ ಸಹಮತವಿಲ್ಲ ಎನ್ನುವ ಮೂಲಕ ಕಾಂಗ್ರೆಸ್ ಸಂವಿಧಾನದ ಆಶಯಗಳನ್ನೇ ಗಾಳಿಗೆ ತೂರಿದೆ ಎಂದು ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಅವರು ರಾಜಕೀಯವಾಗಿ ಪಕ್ಷವನ್ನು ದೂರವಿಡಬೇಕೆಂಬ ಕಾರಣದಿಂದ ಕಾಂಗ್ರೆಸ್ ಮುಕ್ತ ಭಾರತದ ಸಂಕಲ್ಪ ತೊಟ್ಟಿರಲಿಲ್ಲ. ಕಾಂಗ್ರೆಸ್‌ನ ವಿಷಕಾರಿ ಮನಸ್ಥಿತಿಯನ್ನು ದೇಶದಿಂದ ತೊಲಗಿಸಬೇಕೆನ್ನುವುದು ಪ್ರಧಾನಿಯ ಆಶಯವಾಗಿದೆ. ಕಾಂಗ್ರೆಸ್‌ನ ದರಿದ್ರ ಮನಸ್ಥಿತಿಗೆ ಸಾಕಷ್ಟು ನಿದರ್ಶನಗಳಿವೆ. ಒಂದೇ ಕುಟುಂಬದ ಹಿತ ಬಯಸುವುದೇ ಅವರ ಉದ್ದೇಶವಾಗಿದೆ. ದೇಶದ ಮಹಿಳೆಯರಿಗೆ ಕಾಂಗ್ರೆಸ್ ಮಹಾ ದ್ರೋಹ ಎಸಗಿದೆ. ಹಿಂದೂ ಕೋಡ್ ಬಿಲ್ ತರುವಾಗ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಕೊಡಿಸಬೇಕೆಂದು ಅವರಿಗೆ ಅನ್ನಿಸಲಿಲ್ಲ. 1996ರಲ್ಲಿ ಮೊದಲ ಬಾರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಹಿಳಾ ಮೀಸಲಾತಿ ಅನುಷ್ಠಾನಕ್ಕೆ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ನಂತರ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಮಹಿಳಾ ಮೀಸಲಾತಿ ಜಾರಿಗೆ ಯತ್ನಿಸಿದರೂ ವಿನಾಶಕಾರಿ ಮನಸ್ಥಿತಿಯ ಕಾಂಗ್ರೆಸ್‌ನವರು ಅದಕ್ಕೆ ಅವಕಾಶ ನೀಡಲಿಲ್ಲವೆಂದು ಆರೋಪಿಸಿದರು.

2010ರಲ್ಲಿ ರಾಜ್ಯಸಭೆಯಲ್ಲಿ ಮಸೂದೆ ಪಾಸಾಗಿದ್ದರೂ ಲೋಕಸಭೆಯಲ್ಲಿ ಅದನ್ನು ಮಂಡಿಸಲಿಲ್ಲ. ಹೀಗಾಗಿ ನರೇಂದ್ರ ಮೋದಿ ಸರ್ಕಾರ 2023ರಲ್ಲಿ ಮಸೂದೆ ಅಂಗೀಕರಿಸಿತು. 2034ರ ಚುನಾವಣೆಗೆ ಮಸೂದೆ ಜಾರಿಗೊಳಿಸಬೇಕೆಂದು ಮೊದಲು ನಿರ್ಧರಿಸಲಾಗಿತ್ತಾದರೂ ಚುನಾವಣೆಗಳಿಂದ ಮಹಿಳೆಯರು ಮತ್ತೆ 10 ವರ್ಷ ಹಿಂದುಳಿಯುತ್ತಾರೆಂದು 2029ಕ್ಕೆ ಜಾರಿಗೊಳಿಸಲು ಪ್ರಯತ್ನಿಸಿದರು. ಆದರೆ ಮಹಿಳೆಯರ ಏಳಿಗೆ ಸಹಿಸದ ಕಾಂಗ್ರೆಸ್ ಮಸೂದೆಗೆ ವಿರೋಧಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸ್ವಾತಂತ್ರ್ಯ ಸಿಕ್ಕಾಗ ದೇಶದ ಜನಸಂಖ್ಯೆ 35 ರಿಂದ 40 ಕೋಟಿ ಇತ್ತು. 2026ರಲ್ಲಿ ಸುಮಾರು ಮೂರು ಪಟ್ಟು ಅಂದರೆ 146-147 ಕೋಟಿ ದಾಟಿದೆ. ಆದರೆ, ಲೋಕಸಭಾ ಸದಸ್ಯರ ಸಂಖ್ಯೆ 543 ಇದೆ. ಇದರಿಂದ ಜನಸಂಖ್ಯೆಯ ಅನುಪಾತಕ್ಕೆ ಲೋಕಸಭಾ ಸದಸ್ಯರ ಸಂಖ್ಯೆ ಹೆಚ್ಚಾಗದೇ ಇರುವುದರಿಂದ ಆಡಳಿತ ಕಷ್ಟವಾಗುತ್ತಿದೆ. ಲೋಕಸಭಾ ಸ್ಥಾನವನ್ನು 850ಕ್ಕೆ ಹೆಚ್ಚಿಸಲು ಕಾಂಗ್ರೆಸ್‌ಗೆ ಇಷ್ಟವಿಲ್ಲ. ಈ ವಿಚಾರದಲ್ಲಿ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತದೆಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಪ್ರತಿ ರಾಜ್ಯದಲ್ಲಿ ಶೇ.50 ರಷ್ಟು ಕ್ಷೇತ್ರಗಳ ಸಂಖ್ಯೆ ಹೆಚ್ಚಿಸುತ್ತೇವೆಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದರೂ ಕಾಂಗ್ರೆಸ್ ಅರಿಯುತ್ತಿಲ್ಲವೆಂದರು.

ದೇಶದ ಪ್ರತಿ ಮಹಿಳೆಯರು ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳ ಬೂಟಾಟಿಕೆಯನ್ನು ಗಮನಿಸಿದ್ದು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆಂದರು.ಸುದ್ದಿಗೋಷ್ಠಿಯಲ್ಲಿ ನಗರ ಮಂಡಲ ಅಧ್ಯಕ್ಷ ಯೋಗೀಶ್ ಮಂಜಣ್ಣ, ವಕ್ತಾರ ಆರ್.ಮೋಹನ್, ಮಾಧ್ಯಮ ಪ್ರಮುಖ್ ಬಿ.ವೇದಾವತಿ ಹಾಗೂ ನಗರ ವಕ್ತಾರ ದಯಾನಂದ್ ಇದ್ದರು.

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani