ಟೆಹ್ರಾನ್: ಅಮೆರಿಕದಿಂದ ಕದನ ವಿರಾಮ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಇರನಿನ ಲಾವನ್ ಐಲ್ಯಾಂಡ್ (Attack on Lavan Island) ನಲ್ಲಿರುವ ತೈಲ ಸಂಸ್ಕರಣಾಗಾರದ ಮೇಲೆ ದಾಳಿ ನಡೆದಿದೆ ಎಂದು ವರದಿಯಾಗಿದೆ.
ಮಾಹಿತಿ ಪ್ರಕಾರ, ಈ ದಾಳಿಯು ಬೆಳಿಗ್ಗೆ ಸುಮಾರು 10 ಗಂಟೆಗೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಲಾವನ್ ಐಲ್ಯಾಂಡ್ನಲ್ಲಿನ ತೈಲ ಸಂಸ್ಕರಣಾಗಾರದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಮಾಹಿತಿ ಪ್ರಕಾರ, ಈ ದಾಳಿಯು ಬೆಳಿಗ್ಗೆ ಸುಮಾರು 10 ಗಂಟೆಗೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಲಾವನ್ ಐಲ್ಯಾಂಡ್ನಲ್ಲಿನ ತೈಲ ಸಂಸ್ಕರಣಾಗಾರದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಆದರೆ ಈ ದಾಳಿ ಯಾರಿಂದ ಮತ್ತು ಹೇಗೆ ನಡೆದಿದೆ ಎಂದು ಮಾಹಿತಿ ಇಲ್ಲಿವರೆಗೆ ಲಭ್ಯವಾಗಿಲ್ಲ. ಅದೇ ರೀತಿ ಎಷ್ಟು ಸಾವು-ನೋವುಗಳು ಸಂಭವಿಸಿದೆ ಎನ್ನುವುದು ಕೆಲವೇ ಕ್ಷಣದಲ್ಲಿ ತಿಳಿದು ಬರಬೇಕಿದೆ. ಇರಾನಿಗೆ ಈ ಲಾವನ್ ಐಲ್ಯಾಂಡ್ ಏಕೆ ಮುಖ್ಯ?
ಇರಾನ್‌ನ ಲಾವನ್ ದ್ವೀಪವು ಪರ್ಷಿಯನ್ ಕೊಲ್ಲಿಯಲ್ಲಿ ಕಾರ್ಯತಂತ್ರದ ಪ್ರಮುಖ ದ್ವೀಪವಾಗಿದೆ. ಇದು ಸರಿಸುಮಾರು 78 ಚದರ ಕಿಲೋಮೀಟರ್‌ಗಳನ್ನು ಒಳಗೊಂಡಿದೆ. ಇರಾನ್ ಲಾವನ್‌ನಿಂದ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ರಫ್ತು ಮಾಡುತ್ತದೆ. ಇದು ಕಚ್ಚಾ ತೈಲ ರಫ್ತು ಟರ್ಮಿನಲ್ ಕೂಡ ಆಗಿದೆ.
ಈ ದ್ವೀಪದಲ್ಲಿ ಇರಾನ್ ಹೆಚ್ಚಿನ ಪ್ರಮಾಣದ ತೈಲವನ್ನು ಸಂಸ್ಕರಿಸಲಾಗುತ್ತದೆ. ಇದು ಹಾರ್ಮುಜ್ ಜಲಸಂಧಿಯಿಂದ ಪಶ್ಚಿಮಕ್ಕೆ ಸುಮಾರು 450 ರಿಂದ 500 ಕಿಲೋಮೀಟರ್ ದೂರದಲ್ಲಿದೆ.ಇದನ್ನೂ ಓದಿ: ಮಧ್ಯಪ್ರಾಚ್ಯದಲ್ಲಿ ಕದನ ವಿರಾಮ ಘೋಷಣೆ: ಅಮೆರಿಕದ ನಿರ್ಧಾರವನ್ನು ಶ್ಲಾಘಿಸಿದ ಭಾರತ; ರಾಜತಾಂತ್ರಿಕ ಮಾರ್ಗದಲ್ಲಿ ಶಾಂತಿ ಸ್ಥಾಪಿಸಿ: ವಿದೇಶಾಂಗ ಸಚಿವಾಲಯ..MEA on Ceasefire in Middle Eastನಲವತ್ತು ದಿನಗಳಿಂದ ನಡೆಯುತ್ತಿರುವ ಈ ಯುದ್ಧದಲ್ಲಿ ಅಮೆರಿಕ ಷರತ್ತುಬದ್ಧ ಕದನ ವಿರಾಮವನ್ನು ಘೋಷಿಸಿದೆ. ಮುಂದಿನ ಎರಡು ವಾರಗಳವರೆಗೆ ಪರಸ್ಪರ ದಾಳಿ ಮಾಡದಂತೆ ಇರಾನ್ ಮತ್ತು ಅಮೆರಿಕ ಎರಡೂ ಕಡೆಯವರು ಶಾಂತಿ ಒಪ್ಪಂದಕ್ಕೆ ಬಂದಿವೆ. ಆದರೆ ಈಗ ಲಾವೆಲ್ ಮೇಲಿನ ದಾಳಿ ಯುದ್ಧವನ್ನು ಯಾವ ದಿಕ್ಕಿಗೆ ಕೊಡೊಯ್ಯಲಿದೆ ಎಂದು ಕಾದು ನೋಡಬೇಕಿದೆ.
ಕದನ ವಿರಾಮ ಘೋಷಿಸಿದ ಡೊನಾಲ್ಡ್ ಟ್ರಂಪ್!
ಮಂಗಳವಾರ (ಏ.7) ಇರಾನಿನ ಇಡೀ ನಾಗರಿಕತೆಯನ್ನೇ ನಾಶಗೊಳಿಸುವ ಹೇಳಿಕೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ (ಏ.8) ರಂದು ಇರಾನ್ ಮೇಲೆ ಮುಂದಿನ 14 ದಿನ ಯಾವುದೇ ದಾಳಿ ನಡೆಸದಿರುವಂತೆ ಕದನ ವಿರಾಮ ಘೋಷಿಸಿದ್ದಾರೆ. ಇದನ್ನೂ ಓದಿ: ಮಧ್ಯಪ್ರಾಚ್ಯದಲ್ಲಿ ಕದನ ವಿರಾಮ: ಹೊರ್ಮುಜ್ನಲ್ಲಿ ಶಾಂತಿ ಸ್ಥಾಪನೆಯಾಗಲಿ ಎಂದ ಅಮೆರಿಕ; ಇರಾನ್ ಮುಂದಿಟ್ಟ ಷರತ್ತುಗಳೇನು? Ceasefire in the Middle Eastಈ ಕುರಿತು ತಮ್ಮ ಟ್ರೂತ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಅವರು, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರೊಂದಿಗಿನ ಮಾತುಕತೆಗಳ ಆಧಾರದ ಮೇಲೆ ಇಂದು ರಾತ್ರಿ ಇರಾನ್ ಮೇಲೆ ನಡೆಸಲು ಉದ್ದೇಶಿಸಿರುವ ವಿನಾಶಕಾರಿ ದಾಳಿಯನ್ನು ತಡೆ ಹಿಡಿಯುವಂತೆ ವಿನಂತಿಸಿದ್ದು, ಹಾರ್ಮುಜ್ ಜಲಸಂಧಿಯ ಸಂಪೂರ್ಣ ಮತ್ತು ತಕ್ಷಣದ ಮತ್ತು ಸುರಕ್ಷಿತ ತೆರೆಯುವಿಕೆಗೆ ಇರಾನ್ ಒಪ್ಪಿಕೊಂಡರೆ ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ, (ಏಜನ್ಸೀಸ್).ಇನ್ನಷ್ಟು ಓದಿ

