Monday, 21 Sep, 11.33 am ವಿಜಯವಾಣಿ

ಮುಖಪುಟ
ಕಡಿಮೆ ವೆಚ್ಚದಲ್ಲಿ ಕರೊನಾ ಪರೀಕ್ಷೆಗೆ ಸಿದ್ಧವಾಯ್ತು 'ಫೆಲುದಾ'- ವಿಶ್ವದ ಕಣ್ಣು ಭಾರತದತ್ತ

ನವದೆಹಲಿ: ಕಡಿಮೆ ವೆಚ್ಚದಲ್ಲಿ ಕರೊನಾ ಸೋಂಕು ತಗುಲಿರುವ ಕುರಿತಂತೆ ಪರೀಕ್ಷೆ ಮಾಡುವ ಫೆಲುದಾ ಕರೊನಾ ಟೆಸ್ಟಿಂಗ್​ ವಿಧಾನಕ್ಕೆ ಭಾರತದ ಔಷಧ ನಿಯಂತ್ರಕ ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ ಇಡೀ ವಿಶ್ವದ ಕಣ್ಣು ಇದೀಗ ಮತ್ತೊಮ್ಮೆ ಭಾರತದತ್ತ ಹರಿದಿದೆ.

ಸಿಎಸ್‌ಐಆರ್‌ನ ಇನ್‌ಸ್ಟಿಟ್ಯೂಟ್‌ ಆಫ್‌ ಜಿನೊಮಿಕ್ಸ್‌ ಆಯಂಡ್ ಇಂಟಗ್ರೇಟಿವ್‌ ಬಯಾಲಜಿಯ (ಐಜಿಐಬಿ) ವಿಜ್ಞಾನಿಗಳು ಕಡಿಮೆ ವೆಚ್ಚದಲ್ಲಿ ಕರೊನಾ ವೈರಸ್‌ ಪರೀಕ್ಷೆ ನಡೆಸುವ ವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಅತ್ಯಂತ ಕಡಿಮೆ ಬೆಲೆ ಈಗಿನ ಅಂದಾಜಿನ ಪ್ರಕಾರ 500 ರೂಪಾಯಿಗಳಲ್ಲಿ ಪರೀಕ್ಷೆ ಮುಕ್ತಾಯಗೊಳ್ಳಲಿದೆ.

ಕೋವಿಡ್-19 ಗೆ ಕಾರಣವಾಗುವ ಸಾರ್ಸ್​ ಕೋವ್​-2 (SARS Cov-2) ವೈರಾಣುವನ್ನು ಪತ್ತೆ ಮಾಡುವುದಕ್ಕೆ ಈ ಪರೀಕ್ಷಾ ವಿಧಾನದಲ್ಲಿ ಕ್ರಿಸ್ಪರ್​ (CRISPR) ಜೀನ್-ಎಡಿಟಿಂಗ್ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಈ ಟೆಸ್ಟಿಂಗ್ ವಿಧಾನವನ್ನು ವಾಣಿಜ್ಯವಾಗಿ ಬಳಕೆ ಮಾಡುವುದಕ್ಕೆ ಔಷಧ ನಿಯಂತ್ರಕ ಒಪ್ಪಿಗೆ ಸೂಚಿಸಿ ಅನುಮೋದನೆ ನೀಡಿದೆ.

'ರೋಗಿಗಳಿಂದ ಸಂಗ್ರಹಿಸಿದ ಮಾದರಿಯನ್ನು ಕೆಲವು ರಾಸಾಯನಿಕಗಳನ್ನು ಬಳಸಿದ ಕಾಗದದ ಪಟ್ಟಿಯಂತಿರುವ ಸಾಧನದ ಮೇಲೆ ಹಾಕಿದರೆ ಕರೊನಾ ವೈರಸ್‌ ಇದೆಯೇ ಎಂಬುದನ್ನು ಸುಲಭವಾಗಿ ಪತ್ತೆ ಮಾಡಬಹುದು. ಸಣ್ಣ ಕಿಟ್‌ ಮೂಲಕ ಗರ್ಭಧಾರಣೆ ಪರೀಕ್ಷೆ ನಡೆಸಿದಷ್ಟೇ ಸರಳವಾದ ವಿಧಾನ ಇದಾಗಿದೆ. ಒಂದು ಗಂಟೆಯೊಳಗೆ ಕೊರನಾ ಸೋಂಕು ತಗುಲಿದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಬಹುದಾಗಿದೆ.

: ತೋಟ, ಹೊಳೆಗಳಲ್ಲಿ ಉಗ್ರರಿಂದ ಭೂಗತ ಬಂಕರ್​ನಿರ್ಮಾಣ! ಸ್ಫೋಟಕ ಮಾಹಿತಿ ಬಹಿರಂಗ

ಈ ವಿಧಾನದ ಮೂಲಕ ಪರೀಕ್ಷೆ ನಡೆಸಲು ದುಬಾರಿ ಯಂತ್ರದ ಅಗತ್ಯವಿರುವುದಿಲ್ಲ. ವಿಜ್ಞಾನಿಗಳಾದ ದೆಬೊಜ್ಯೋತಿ ಚಕ್ರವರ್ತಿ ಹಾಗೂ ಸೊವುವಿಕ್‌ ಮೈತೀ ಅವರು ಸೋಂಕಿತರ ಮಾದರಿಗಳ ಪರೀಕ್ಷೆಯನ್ನು ನಡೆಸಿದ್ದಾರೆ. 100 ದಿನಗಳಲ್ಲಿ ತಮ್ಮ ಪ್ರಯತ್ನದಲ್ಲಿ ಈ ತಂಡ ಯಶಸ್ವಿಯಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಅನುರಾಗ್‌ ಅಗರ್‌ವಾಲ್‌ ತಿಳಿಸಿದ್ದಾರೆ.

ಖ್ಯಾತ ಚಿತ್ರನಿರ್ದೇಶಕ ಸತ್ಯಜಿತ್‌ ರೇ ಅವರ ಕತೆಗಳಲ್ಲಿ ಕಾಣಿಸುವ ಪತ್ತೇದಾರಿ ಪಾತ್ರ 'ಫೆಲುದಾ' ಎಂಬ ಹೆಸರನ್ನಿಟ್ಟಿರುವ ಔಚಿತ್ಯವನ್ನು ಅಗರ್​ವಾಲ್​ ಬಣ್ಣಿಸುವುದು ಹೀಗೆ: 'ಎಂಐಟಿ, ಬರ್ಕ್‌ಲಿ ಹಾಗೂ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯಗಳ ಸಂಶೋಧಕರು ಕರೊನಾ ಪರೀಕ್ಷೆಗೆ ಸಿಆರ್‌ಎಸ್‌ಐಪಿಆರ್‌ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ, ಅದಕ್ಕೆ ಪತ್ತೇದಾರಿ ಪಾತ್ರಗಳಾದ 'ಶೆರ್ಲಾಕ್‌' ಮತ್ತು 'ಡಿಟೆಕ್ಟರ್‌' ಎಂಬ ಹೆಸರಿಟ್ಟಿದ್ದವು. ಅಂಥದ್ದೇ ಭಾರತೀಯ ಪಾತ್ರವೊಂದರ ಹೆಸರು ಇಡಬೇಕೆಂದು ಯೋಚನೆ ಬಂದ ಕಾರಣ ಈ ಹೆಸರು ಇಟ್ಟಿದ್ದೇವೆ ಎಂದಿದ್ದಾರೆ.

ಮುಂದಿನ ದಿನಗಳಲ್ಲಿ ಇದನ್ನು ಬೇರೆ ರೋಗಕಾರಕಗಳನ್ನು ಪತ್ತೆ ಮಾಡುವುದಕ್ಕೂ ಸಹ ಪುನರ್ವಿನ್ಯಾಸಗೊಳಿಸಬಹುದಾಗಿದೆ.ಇದನ್ನು ಮೇಡ್ ಇನ್ ಇಂಡಿಯಾ ಉತ್ಪನ್ನವಾಗಿಸಲು ಸಿಎಸ್‌ಐಆರ್-ಐಜಿಐಬಿ ಹಾಗೂ ಐಸಿಎಂಆರ್ ನೊಂದಿಗೆ ಟಾಟಾ ಗ್ರೂಪ್ ಸಹಕರಿಸಿದೆ.

ಕೊನೆಗೂ ಅಂಗೀಕೃತಗೊಂಡಿತು ಕೃಷಿ ಮಸೂದೆ: ರಾಷ್ಟ್ರಪತಿ ಅಂಕಿತವೊಂದೇ ಬಾಕಿ

ಲಡಾಖ್​ ಗಡಿಯಲ್ಲಿನ್ನು ಅವಳಿ ಡುಬ್ಬಗಳ ಒಂಟೆಗಳದ್ದೇ ಕಾರುಬಾರು: ಏಕೆ ಗೊತ್ತಾ?

70 ವರ್ಷಗಳ ನಂತರ ವಿದ್ಯುತ್​ ಕಂಡ ಗಡಿ ಭಾಗ: ಸಂತಸದಲ್ಲಿ ತೇಲಾಡಿದ ಜನರು

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top