Dailyhunt
ಕಣ್ಣಿಗೆ ಕಾಣಿಸಿದ್ರೂ ಅಂಪೈರ್​ ಕೊಡಲಿಲ್ಲ ಔಟ್​! ಬೌಂಡರಿ ಲೈನ್​ನಲ್ಲಿ ಕೊಹ್ಲಿ ರಂಪಾಟ, ವಿಡಿಯೋ ವೈರಲ್​​ | RCB vs GT

ಕಣ್ಣಿಗೆ ಕಾಣಿಸಿದ್ರೂ ಅಂಪೈರ್​ ಕೊಡಲಿಲ್ಲ ಔಟ್​! ಬೌಂಡರಿ ಲೈನ್​ನಲ್ಲಿ ಕೊಹ್ಲಿ ರಂಪಾಟ, ವಿಡಿಯೋ ವೈರಲ್​​ | RCB vs GT

RCB vs GT: ಇಂದು (ಏ.30) ಅಹಮದಾಬಾದ್​ನಲ್ಲಿ ಗುಜರಾತ್​ ಟೈಟನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ 19ನೇ ಆವೃತ್ತಿಯ ಐಪಿಎಲ್​ ಪಂದ್ಯ ನಡೆಯುತ್ತಿದ್ದು, ಇದೀಗ ಮೊದಲ ಇನ್ನಿಂಗ್ಸ್​ ಮುಕ್ತಾಯಗೊಂಡಿದೆ. ಆದರೆ, ಈ ಪಂದ್ಯದಲ್ಲಿ ಜೇಸನ್​ ಹೋಲ್ಡರ್​ ಹಿಡಿದ ಕ್ಯಾಚ್​ವೊಂದು ಸದ್ಯ ಭಾರೀ ವಿವಾದಕ್ಕೆ ಗುರಿಯಾಗಿದೆ.
ಅರ್ಷದ್​ ಖಾನ್​ ಬೌಲಿಂಗ್​ನಲ್ಲಿ ರಜತ್​ ಪಾಟೀದಾರ್​ ಕ್ರೀಸ್​ನಲ್ಲಿದ್ದರು. ಈ ವೇಳೆ ಶಾರ್ಟ್​ ಬಾಲ್​ಗೆ ರಜತ್​ ಪುಲ್​ ಆಡಿದರು. ಮೇಲೋದ ಚೆಂಡಿಗೆ ಕೈಹಾಕಿದ ಜೇಸನ್ ಹೋಲ್ಡರ್​, ಯಶಸ್ವಿಯಾಗಿ ಕ್ಯಾಚ್​ ಹಿಡಿದರು. ಆದರೆ, ಅದು ನೆಲಕ್ಕೆ ತಾಕಿತು ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣಿಸಿದ್ದೇ ಈಗ ವಿವಾದಕ್ಕೆ ಕಾರಣವಾಗಿದೆ.

ಹೋಲ್ಡರ್​ ಹಿಡಿದ ಕ್ಯಾಚ್​ನಲ್ಲಿ ಬಾಲ್​ ನೆಲಕ್ಕೆ ತಾಕಿರುವುದು ಕಂಡುಬಂದಿದ್ದೇ ಆದರೂ ಟಿವಿ ಮತ್ತು ಬೌಂಡರಿ ಅಂಪೈರ್​ ಅದನ್ನು ಔಟ್​ ಎಂದು ಕೊಡಲಿಲ್ಲ. ಇದರಿಂದ ಸಿಟ್ಟಾದ ವಿರಾಟ್​ ಕೊಹ್ಲಿ, ಕಣ್ಣಿಗೆ ಕಾಣಿಸಿದರೂ ಏಕೆ ಔಟ್ ಕೊಡಲಿಲ್ಲ ಎಂದು ಬೌಂಡರಿ ಲೈನ್​ನಲ್ಲಿ ನಿಂತಿದ್ದ ಅಂಪೈರ್​ ಜೊತೆಗೆ ವಾಗ್ವಾದಕ್ಕಿಳಿದರು. ಕೆಲ ನಿಮಿಷ ಇದರ ಬಗ್ಗೆ ಆರ್​ಸಿಬಿ ಕೋಚ್​, ಕೊಹ್ಲಿ ಕಿಡಿಕಾರಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಟಾಸ್​ ಗೆದ್ದ ಶುಭಮನ್​ ಗಿಲ್​, ಆರ್​ಸಿಬಿಗೆ ಮೊದಲು ಬ್ಯಾಟ್​ ಮಾಡುವಂತೆ ತಿಳಿಸಿದರು. ಅಂತೆಯೇ, ಬ್ಯಾಟಿಂಗ್​ಗಿಳಿದ ಆರಂಭಿಕರಾದ ಜಾಕಬ್​ ಬೆಥಲ್​ ಮತ್ತು ವಿರಾಟ್​ ಕೊಹ್ಲಿ ಪೈಕಿ ಕೊಹ್ಲಿ ಸ್ಫೋಟಕ ಓಪನಿಂಗ್ ನೀಡಿದರು. ಸಿರಾಜ್​ ಬೌಲಿಂಗ್​ನಲ್ಲಿ ಕೇವಲ 5 ರನ್​ಗೆ ಬೆಥಲ್​ ವಿಕೆಟ್​ ಒಪ್ಪಿಸಿದರು. ಆದರೆ, ಕಗಿಸೋ ರಬಾಡ ಅವರ ಬೌಲಿಂಗ್​ನಲ್ಲಿ ಕಿಂಗ್​ ಕೊಹ್ಲಿ ಬ್ಯಾಕ್​ ಟು ಬ್ಯಾಕ್​ ಐದು ಬೌಂಡರಿ ಬಾರಿಸಿದರು. ಮೊದಲ 10 ಬಾಲ್​ಗೆ 28 ರನ್​ ಕಲೆಹಾಕಿದ ಕೊಹ್ಲಿ, ಹೆಚ್ಚು ಕಾಲ ಕ್ರೀಸ್​ಗೆ ಅಂಟಿ ನಿಲ್ಲುವಲ್ಲಿ ವಿಫಲರಾದರು.
ಟಾಪ್​ ಆರ್ಡರ್​ ಕುಸಿದ ಬೆನ್ನಲ್ಲೇ ಕಣಕ್ಕಿಳಿದ ದೇವದತ್ತ ಪಡಿಕಲ್​ (24 ಎಸೆತಗಳಲ್ಲಿ 40 ರನ್​) ಎಂದಿನಂತೆ ತಂಡಕ್ಕೆ ತಮ್ಮ ಕೊಡುಗೆ ನೀಡಿ ಹೊರಟರು. ಕ್ಯಾಪ್ಟನ್ ರಜತ್ ಪಾಟೀದಾರ್ (19)​, ಜಿತೇಶ್​ ಶರ್ಮ (1), ಟಿಮ್ ಡೇವಿಡ್ (9)​, ಕೃನಾಲ್​ ಪಾಂಡ್ಯ(4) ರೊಮಾರಿಯೋ ಶೆಫರ್ಡ್​ (17) ಸ್ಫೋಟಕ ಬ್ಯಾಟಿಂಗ್​ ಪ್ರದರ್ಶನ ನೀಡಲು ತೀರ ಹೆಣಗಾಡಿದರು. ಜಿಟಿ ಪರ ಬೌಲಿಂಗ್ ಮಾಡಿದ ಮೊಹಮ್ಮದ್​ ಸಿರಾಜ್​, ಕಗಿಸೊ ರಬಾಡ ತಲಾ ಒಂದು ವಿಕೆಟ್​ ಪಡೆದರೆ, ರಶೀದ್​ ಖಾನ್​, ಜೇಸನ್​ ಹೋಲ್ಡರ್​, ಅರ್ಷದ್​ ಖಾನ್​ ತಲಾ ಎರಡು ವಿಕೆಟ್​ ಪಡೆದು ಮಿಂಚಿದರು.

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani