Dailyhunt Logo
  • Light mode
    Follow system
    Dark mode
    • Play Story
    • App Story
ಕಣ್ಣು ನೋವೆಂದವನ ರೆಪ್ಪೆಯಲ್ಲಿದ್ದವು ಬರೋಬ್ಬರಿ 20 ಬಿಳಿ ಬಣ್ಣದ ಜೀವಂತ ಹುಳುಗಳು..

ಕಣ್ಣು ನೋವೆಂದವನ ರೆಪ್ಪೆಯಲ್ಲಿದ್ದವು ಬರೋಬ್ಬರಿ 20 ಬಿಳಿ ಬಣ್ಣದ ಜೀವಂತ ಹುಳುಗಳು..

60ವರ್ಷದ ವ್ಯಕ್ತಿಯೋರ್ವನ ಕಣ್ಣಿನ ರೆಪ್ಪೆಯಿಂದ ಬರೋಬ್ಬರಿ 20 ಜೀವಂತ ಹುಳುಗಳನ್ನು ವೈದ್ಯರು ತೆಗೆದ ಘಟನೆ ನಡೆದಿದೆ.

ಚೀನಾದ ಈ ವೃದ್ಧನ ಹೆಸರು ವಾನ್​. ಕಳೆದ ಎರಡು ತಿಂಗಳಿನಿಂದಲೂ ಕಣ್ಣಿನೊಳಗೆ ಏನೋ ಹರಿದಾಡಿದಂತೆ ಅನುಭವ ಆಗುತ್ತಿದೆ. ಬಹುಶ್ಯಃ ಸುಸ್ತಿನ ಕಾರಣಕ್ಕೆ ಹೀಗಾಗುತ್ತಿರಬೇಕು ಎಂದು ನಿರ್ಲಕ್ಷಿಸಿದೆ..ಚಿಕಿತ್ಸೆಗೆ ಬರಲಿಲ್ಲ. ಆದರೆ ಬರುಬರುತ್ತ ನೋವಾಗಲು ಶುರುವಾಯಿತು ಎಂದು ವಾನ್​ ವೈದ್ಯರ ಬಳಿ ಹೇಳಿದ್ದಾರೆ.
ನಂತರ ಚೀನಾದ ಸುಝೌ ಮುನ್ಸಿಪಲ್ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆಂದು ವಾನ್​ ದಾಖಲಾಗಿದ್ದರು. ಕೂಲಂಕಷವಾಗಿ ಪರಿಶೀಲಿಸಿದ ವೈದ್ಯರೇ ಶಾಕ್​ ಆಗಿದ್ದಾರೆ. ವಾನ್ ಅವರ ಬಲಗಣ್ಣಿನ ರೆಪ್ಪೆಯ ಕೆಳಗ್ಗೆ ಜೀವಂತ ಹುಳುಗಳೇ ತುಂಬಿಕೊಂಡಿದ್ದವು…!

ವಾನ್​ ಕಣ್ಣರೆಪ್ಪೆಯಲ್ಲಿ ಇದ್ದ, ಬಿಳಿ ಬಣ್ಣದ, ತೆಳ್ಳನೆಯ ಸುಮಾರು 20 ಹುಳುಗಳನ್ನು ವೈದ್ಯರು ತೆಗೆದಿದ್ದಾರೆ.

ಇವು ಪರಾವಲಂಬಿ ಹುಳುಗಳಾಗಿದ್ದು ಸಾಮಾನ್ಯವಾಗಿ ನಾಯಿ, ಬೆಕ್ಕುಗಳಂತ ಪ್ರಾಣಿಗಳು ಕಣ್ಣೀರಿನ ನಾಳದಲ್ಲಿ ಇರುತ್ತವೆ. ಆದರೆ ವಾನ್ ತಮ್ಮ ಮನೆಯಲ್ಲಿ ಯಾವುದೇ ಸಾಕುಪ್ರಾಣಿಗಳೂ ಇಲ್ಲ ಎಂದು ಹೇಳಿದ್ದಾರೆ. ಆದರೆ ವಾನ್​ ಕಣ್ಣಲ್ಲಿ ಹೇಗೆ ಹುಳುಗಳು ಬಂದುವು ಎಂಬ ಬಗ್ಗೆ ವೈದ್ಯರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಹಾಗೇ ವಾನ್​ಗೆ ಚಿಕಿತ್ಸೆ ನೀಡಿರುವ ವೈದ್ಯರು ಈ ಬಗ್ಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಮನೆಯಲ್ಲಿ ಬೆಕ್ಕು, ನಾಯಿಗಳಂಥ ಪ್ರಾಣಿಗಳನ್ನು ಸಾಕಿಕೊಂಡವರು ಈ ಬಗ್ಗೆ ಗಮನ ಇಡಬೇಕು. ಇಲ್ಲದಿದ್ದರೆ ದೃಷ್ಟಿಗೆ ಸಮಸ್ಯೆಯಾಗುವ ಸಾಧ್ಯತೆಯೂ ಇರುತ್ತದೆ ಎಂದಿದ್ದಾರೆ. (ಏಜೆನ್ಸೀಸ್​)

ಈ ಏಡಿ ಅಪ್ಪಿತಪ್ಪಿ ತಲೆಯ ಮೇಲೆ ಬಿದ್ದರೆ ಅಷ್ಟೇ..!

Dailyhunt
Disclaimer: This content has not been generated, created or edited by Dailyhunt. Publisher: Vijayvani