Dailyhunt
ಕರೊನಾ ನಿಯಂತ್ರಣಕ್ಕೆ ಮೇಲ್ವಿಚಾರಕರನ್ನು ನೇಮಿಸಿದ ಸರ್ಕಾರ

ಕರೊನಾ ನಿಯಂತ್ರಣಕ್ಕೆ ಮೇಲ್ವಿಚಾರಕರನ್ನು ನೇಮಿಸಿದ ಸರ್ಕಾರ

ಬೆಂಗಳೂರು: ಕರ್ನಾಟಕದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸೋಂಕಿನ ನಿಯಂತ್ರಣಕ್ಕೆ ಮೇಲ್ವಿಚಾರಕರನ್ನು ನೇಮಿಸಿ ಆದೇಶ ಹೊರಡಿಸಿದೆ. ಉಪ ಮುಖ್ಯಮಂತ್ರಿ ಸೇರಿ ಐವರಿಗೆ ವಿವಿಧ ಜವಾಬ್ದಾರಿಗಳನ್ನು ನೀಡಲಾಗಿದೆ.

ಬೃಹತ್​ ಮತ್ತು ಮಾಧ್ಯಮ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಜಗದೀಶ್​ ಶೆಟ್ಟರ್​ಗೆ ಆಕ್ಸಿಜನ್​ ಸರಬರಾಜು ಮೇಲ್ವಿಚಾರಣೆ ನೀಡಲಾಗಿದೆ. ಉಪಮುಖ್ಯಮಂತ್ರಿಗಳಾದ ಅಶ್ವಥ್​ ನಾರಾಯಣ್​ ಅವರಿಗೆ ರೆಮ್​ಡಿಸಿವಿರ್​ ಹಾಗೂ ಇತರ ಕೋವಿಡ್ ಸಂಬಂಧಿ ಪ್ರಮುಖ ಔಷಧಗಳ ನಿರ್ವಹಣೆ ಹಾಗೂ ಅಗತ್ಯ ಮಾನವ ಸಂಪನ್ಮೂಲ ನಿರ್ವಹಣೆಯ ಮೇಲ್ವಿಚಾರಣೆ ಜವಾಬ್ದಾರಿ ಕೊಡಲಾಗಿದೆ.

ಗೃಹ ಸಚಿವರ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್​ ಅಶೋಕ್​ ಅವರಿಗೆ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆ, ಮೆಡಿಕಲ್​ ಕಾಲೇಜುಗಳಲ್ಲಿ ಬೆಡ್​ ಸಮಸ್ಯೆಗಳ ನಿವಾರಣೆಯ ಮೇಲ್ವಿಚಾರಣೆ ಕೊಡಲಾಗಿದೆ.

ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರಿಗೆ ವಾರ್​ ರೂಂ, ಕಾಲ್ ಸೆಂಟರ್​ಗಳ ನಿರ್ವಹಣೆ ಹಾಗೂ ಸೋಂಕಿತರಿಗೆ ಸೂಕ್ತ ಸಮಯದಲ್ಲಿ ವೈದ್ಯಕೀಯ ಸಲಹೆ ವ್ಯವಸ್ಥೆಯ ಮೇಲ್ವಿಚಾರಣೆಯನ್ನು ನೀಡಲಾಗಿದೆ. ಈ ನಾಲ್ಕು ಮೇಲ್ವಿಚಾರಣೆಯಲ್ಲಿ ಯಾವ ಯಾವ ಕೆಲಸಗಳನ್ನು ಮಾಡಬೇಕಿದೆ ಎನ್ನುವುದನ್ನೂ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಕರೊನಾ ಸಂಕಷ್ಟಕ್ಕೆ ಮಿಡಿದ ಸುದೀಪ್; 300 ಆಕ್ಸಿಜನ್​ ಸಿಲಿಂಡರ್​ ದೇಣಿಗೆ

Dailyhunt
Disclaimer: This content has not been generated, created or edited by Dailyhunt. Publisher: Vijayvani