Sunday, 11 Apr, 9.55 pm ವಿಜಯವಾಣಿ

ಮುಖಪುಟ
ಕತಾರ್​ನಲ್ಲಿ ಕರ್ನಾಟಕ ಸಂಘದಿಂದ ರಕ್ತದಾನ ಶಿಬಿರ; ಕರೊನಾ ಸಂಕಟದ ಮಧ್ಯೆ ಸಾಮಾಜಿಕ ಸೇವೆ.

ಬೆಂಗಳೂರು: ಕರೊನಾ ಎರಡನೆಯ ಅಲೆ ಜಗತ್ತಿನಾದ್ಯಂತ ವ್ಯಾಪಿಸುತ್ತಿರುವ ಸಂದರ್ಭದಲ್ಲೂ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಕರ್ನಾಟಕ ಸಂಘ ಕತಾರ್, ವಾರ್ಷಿಕ ರಕ್ತದಾನ ಶಿಬಿರ ಹಮ್ಮಿಕೊಳ್ಳುವ ಮೂಲಕ ಗಮನ ಸೆಳೆದಿದೆ.

ಇತ್ತೀಚೆಗೆ ಕತಾರ್​ನಲ್ಲಿನ 'ಹಮಾದ್ ವೈದ್ಯಕೀಯ ಕೇಂದ್ರ'ದ ಆವರಣದಲ್ಲಿರುವ 'ಹಮಾದ್ ರಕ್ತದಾನ ಕೇಂದ್ರ'ದಲ್ಲಿ ಈ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಅದರಲ್ಲೂ ಭಾರತೀಯ ಸಾಂಸ್ಕೃತಿಕ ಕೇಂದ್ರದಡಿಯಲ್ಲಿ ಆಯೋಜಿಸಿದ್ದ ಈ ರಕ್ತದಾನ ಶಿಬಿರವು 'ಭಾರತದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ' ಪ್ರಯುಕ್ತ ಸಂಘದಿಂದ ನಡೆದ ಪ್ರಪ್ರಥಮ ಕಾರ್ಯಕ್ರಮವಾಗಿದೆ. ಕರೊನಾ ಹಾವಳಿ ನಡುವೆಯೂ ಪುರುಷರು ಹಾಗೂ ಮಹಿಳೆಯರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಕೋವಿಡ್​-19 ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಸೂಕ್ತ ಮುನ್ನೆಚ್ಚರಿಕೆಯನ್ನೂ ವಹಿಸಲಾಗಿತ್ತು.

ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಅಕ್ಷಯ ಶೆಟ್ಟಿ ಸ್ವಾಗತ ಭಾಷಣದ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಸಂಘದ ಅಧ್ಯಕ್ಷ ನಾಗೇಶ್ ರಾವ್ ಗಣ್ಯರನ್ನು ಸ್ವಾಗತಿಸಿದರು. ಐಸಿಸಿ ಅಧ್ಯಕ್ಷ ಬಾಬು ರಾಜನ್ ಮುಖ್ಯಅತಿಥಿಯಾಗಿದ್ದರು. ಐಸಿಸಿ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಕಾರ್ಯಕ್ರಮದ ಸಂಚಾಲಕರಾಗಿದ್ದರು. ಐಸಿಬಿಎಫ್​ ಅಧ್ಯಕ್ಷ ಜಯೀದ್ ಉಸ್ಮಾನ್, ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರಾದ ವೇಂಕಟ ರಾವ್, ದೀಪಕ್ ಶೆಟ್ಟಿ, ವೀರಭದ್ರಪ್ಪ ಮನ್ನಂಗಿ, ಅರುಣ್ ಕುಮಾರ್, ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಮುರಳೀಧರ ರಾವ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ಮೂಲದ ಇತರ ಸಹೋದರ ಸಂಸ್ಥೆಗಳಾದ ತುಳುಕೂಟ, ಬಂಟ್ಸ್ ಕತಾರ್, ಎಂಸಿಎ, ಕೆಎಂಸಿಎ, ಎಂಸಿಸಿ ಹಾಗೂ ಎಸ್​ಕೆಎಂಡಬ್ಲ್ಯುಎ ಅಧ್ಯಕ್ಷರೆಲ್ಲರೂ ಉಪಸ್ಥಿತರಿದ್ದರು.

ರಕ್ತದಾನದ ಹಿನ್ನೆಲೆ, ಉಗಮ, ಪ್ರಯೋಜನ ಮತ್ತು ಇತರ ಉಪಯೋಗಗಳ ಕುರಿತು ಮಾಹಿತಿ ನೀಡಿದ ಹಮಾದ್ ವೈದ್ಯಕೀಯ ಕೇಂದ್ರ ಡಾ. ಗಿರೀಶ್, ಜನರಲ್ಲಿರುವ ಸಾಮಾನ್ಯ ಪ್ರಶ್ನೆಗಳಿಗೂ ಉತ್ತರಿಸಿದರು. ಕರೊನಾ ಲಸಿಕೆ ಕುರಿತು ಕೂಡ ಸಾಕಷ್ಟು ಮಾಹಿತಿಗಳನ್ನು ತಿಳಿಸಿ ಮಾರ್ಗದರ್ಶನ ನೀಡಿದರು.

ಪ್ರಿಯ ಬೆಂಗಳೂರಿಗರೇ.. ಮನೆಯ ಹೆಂಗಸರ ಮಾತು ಕೇಳಿ: ಎಡಿಜಿಪಿ ಭಾಸ್ಕರ್ ರಾವ್

ಹೆಂಡತಿಯ ಊರಿಗೆ ಬಂದಿದ್ದವ ಜೀವವನ್ನೇ ಕಳೆದುಕೊಂಡ; ವಾಪಸ್​ ಹೊರಟಾಗ ಎದುರಾದ ಯಮರಾಯ!

ರಕ್ತದಾನ ಶಿಬಿರದ ಚಿತ್ರಗಳು

1 of 9

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top