Dailyhunt
ಕೆಎಫ್‌ಡಿ ಸೋಂಕಿಗೆ ಮನ್ಮನೆ ಗ್ರಾಮದ ವೃದ್ಧ ಬಲಿ | KFD

ಕೆಎಫ್‌ಡಿ ಸೋಂಕಿಗೆ ಮನ್ಮನೆ ಗ್ರಾಮದ ವೃದ್ಧ ಬಲಿ | KFD

ಶಿವಮೊಗ್ಗ: ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಮನ್ಮನೆ ಗ್ರಾಮದ ವೃದ್ಧರೊಬ್ಬರು ಮಂಗನ ಕಾಯಿಲೆ (ಕೆಎಫ್‌ಡಿ-KFD)ಸೋಂಕಿಗೆ ಬಲಿಯಾಗಿದ್ದಾರೆ.
ಮನ್ಮನೆ ಗ್ರಾಮದ ಮಂಜಪ್ಪ (72) ಮೃತರು. ಏ.1ರಂದು ಮಂಜಪ್ಪ ಅವರಿಗೆ ವಾಂತಿ ಭೇದಿ ಶುರುವಾಗಿದ್ದು, ನಿಲ್ಲದ ಕಾರಣ ಏ.4ರಂದು ಸಾಗರದ ಉಪವಿಭಾಗೀಯ ಆಸ್ಪತ್ರೆ (Sub-divisional Hospital) ಗೆ ದಾಖಲಾಗಿದ್ದರು.
ಅವರ ರಕ್ತದ ಮಾದರಿ(Blood sample) ಸಂಗ್ರಹಿಸಿ ತಪಾಸಣೆಗೆ ಒಳಪಡಿಸಿದಾಗ ಕೆಎಫ್‌ಡಿ ಸೋಂಕು ಧೃಢಪಟ್ಟಿದೆ. ವೈದ್ಯರು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ರವಾನಿಸಿದ್ದರು. ಬುಧವಾರ ಬೆಳಗ್ಗೆ ಮಂಜಪ್ಪ ಮೃತಪಟ್ಟಿದ್ದಾರೆ.

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani