ಕೋಲ್ಕತ: ಕೊನೇ 6 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಪ್ಲೇಆಫ್ ರೇಸ್ಗೆ ಮರುಜೀವ ತುಂಬಿಸಿಕೊಂಡಿರುವ ಕೋಲ್ಕತ ನೈಟ್ರೈಡರ್ಸ್ ಮತ್ತು ಈಗಾಗಲೆ ಪ್ಲೇಆಫ್ ರೇಸ್ನಿಂದ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್ ತಂಡಗಳು ಐಪಿಎಲ್-19ರಲ್ಲಿ (IPL) ಬುಧವಾರ ಮುಖಾಮುಖಿ ಆಗಲಿವೆ.
ಈಡನ್ ಗಾರ್ಡನ್ಸ್ನಲ್ಲಿ ನಡೆಯಲಿರುವ ಈ ಪಂದ್ಯ ಆತಿಥೇಯ ಕೆಕೆಆರ್ ಪಾಲಿಗೆ ಮಾಡು ಇಲ್ಲವೇ ಮಡಿ ಕಾದಾಟವೆನಿಸಿದೆ.
2024ರಲ್ಲಿ ಚಾಂಪಿಯನ್ ಆಗಿದ್ದ ಕೆಕೆಆರ್, ಕಳೆದ ವರ್ಷ 8ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಈ ಬಾರಿ ಮೊದಲ 6 ಪಂದ್ಯಗಳಲ್ಲಿ ಗೆಲುವು ಕಾಣದಿದ್ದರೂ, ನಂತರ ತೋರಿದ ಚೇತೋಹಾರಿ ನಿರ್ವಹಣೆಯಿಂದ ಈವರೆಗೂ ಪ್ಲೇಆಫ್ ರೇಸ್ನಲ್ಲಿ ಉಳಿದುಕೊಂಡಿದೆ. ಆದರೆ ಇನ್ನೊಂದು ಪಂದ್ಯ ಸೋತರೆ ರೇಸ್ನಿಂದ ಹೊರಬೀಳಲಿದೆ. ಜತೆಗೆ ಕೊನೇ 2 ಪಂದ್ಯ ಗೆದ್ದರೂ, ಇತರ ಪಂದ್ಯಗಳ ಫಲಿತಾಂಶವನ್ನೂ ಅವಲಂಬಿಸಬೇಕಾಗಿದೆ. ಆರ್ಆರ್ ಕೊನೇ ಪಂದ್ಯದಲ್ಲೂ ಗೆದ್ದರೆ ಅಥವಾ ಪಂಜಾಬ್ ಕೊನೇ ಪಂದ್ಯ ಗೆದ್ದು ರನ್ರೇಟ್ ಮೇಲುಗೈ ಉಳಿಸಿಕೊಂಡರೆ, ಕೆಕೆಆರ್ ತನ್ನ ಎರಡೂ ಪಂದ್ಯ ಗೆದ್ದರೂ ಪ್ರಯೋಜನವಾಗುವುದಿಲ್ಲ.
ಕೋಚ್ ಅಭಿಷೇಕ್ ನಾಯರ್ ಮತ್ತು ನಾಯಕ ಅಜಿಂಕ್ಯ ರಹಾನೆ ಕೊನೆಗೂ ಕೆಕೆಆರ್ಗೆ ಗೆಲುವಿನ ತಂಡ ಸಂಯೋಜನೆ ರೂಪಿಸಿದ್ದು, ಫಿನ್ ಅಲೆನ್ ಫಾರ್ಮ್ಗೆ ಮರಳಿರುವುದು ಹೆಚ್ಚಿನ ಬಲ ತುಂಬಿದೆ. ಜತೆಗೆ ಅಂಗಕ್ರಿಷ್ ರುವಂಶಿ, ಕ್ಯಾಮರಾನ್ ಗ್ರೀನ್ ಮತ್ತು ರಿಂಕು ಸಿಂಗ್ ಮಧ್ಯಮ ಕ್ರಮಾಂಕಕ್ಕೆ ಆಧಾರವಾಗಿದ್ದಾರೆ. ಬೌಲಿಂಗ್ನಲ್ಲಿ ಸುನೀಲ್ ನಾರಾಯಣ್&ವರುಣ್ ಚಕ್ರವರ್ತಿ ಅವರ ಸ್ಪಿನ್ ಜೋಡಿ ಮೋಡಿ ಮಾಡುತ್ತಿದ್ದರೆ, ವೇಗದ ಬೌಲಿಂಗ್ನಲ್ಲಿ ದೇಶೀಯ ವೇಗಿಗಳು ನೆರವಾಗಿದ್ದಾರೆ.

ಹಾರ್ದಿಕ್ ಮರಳಿ ಕಣಕ್ಕೆ?ಬೆನ್ನು ನೋವಿನಿಂದಾಗಿ ಕಳೆದ 3 ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ನಾಯಕ ಹಾರ್ದಿಕ್ ಪಾಂಡ್ಯ ಕೆಕೆಆರ್ ಎದುರು ಮರಳಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ಅವರು ಆಡಿದ ಮೊದಲ 8 ಪಂದ್ಯಗಳಲ್ಲಿ ಕೇವಲ 146 ರನ್ ಮತ್ತು 4 ವಿಕೆಟ್ ಗಳಿಸಿ ನಿರಾಸೆ ಮೂಡಿಸಿದ್ದರು. ಜತೆಗೆ ಸೂರ್ಯಕುಮಾರ್ ಯಾದವ್ ರನ್ಬರ ಮತ್ತು ಜಸ್ಪ್ರೀತ್ ಬುಮ್ರಾರ ವಿಕೆಟ್ ಕೊರತೆಯೂ ಮುಂಬೈಗೆ ಹಿನ್ನಡೆ ತಂದಿದೆ. ರೋಹಿತ್ ಶರ್ಮ, ತಿಲಕ್ ವರ್ಮ ಕೂಡ ಸ್ಥಿರ ನಿರ್ವಹಣೆ ತೋರಿಲ್ಲ.
ಮುಖಾಮುಖಿ: 36ಮುಂಬೈ: 25ಕೆಕೆಆರ್: 11ಆರಂಭ: ಬುಧವಾರ ರಾತ್ರಿ 7.30ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್
ಒಂದು ಸ್ಥಾನಕ್ಕೆ 5 ತಂಡಗಳ ಸ್ಪರ್ಧೆಐಪಿಎಲ್-19ರಲ್ಲಿ ಇನ್ನು 5 ಲೀಗ್ ಪಂದ್ಯಗಳಷ್ಟೇ ಬಾಕಿ ಇರುವಾಗ ಪ್ಲೇಆಫ್ ಹಂತಕ್ಕೇರುವ 3 ತಂಡಗಳು ಖಚಿತವಾಗಿವೆ. ಇನ್ನು ಉಳಿದ 1 ಸ್ಥಾನಕ್ಕೆ ಸದ್ಯ 5 ತಂಡಗಳು ಪೈಪೋಟಿಯಲ್ಲಿವೆ. ಈ ಪೈಕಿ ರಾಜಸ್ಥಾನ ತಂಡ ಕೊನೇ ಪಂದ್ಯದಲ್ಲೂ ಗೆದ್ದರೆ ಬೇರೆ ಯಾವ ತಂಡಕ್ಕೂ ಪ್ಲೇಆಫ್ಗೇರುವ ಅವಕಾಶ ಇರುವುದಿಲ್ಲ. ಆದರೆ ರಾಜಸ್ಥಾನ ಕೊನೇ ಪಂದ್ಯ ಸೋತರೆ, ಪಂಜಾಬ್ ಮತ್ತು ಕೆಕೆಆರ್ಗೆ ಪ್ಲೇಆಫ್ ಅವಕಾಶ ಹೆಚ್ಚಲಿದೆ.
ಕೆಕೆಆರ್ ಪ್ಲೇಆಫ್ ಹಾದಿ*ಕೊನೇ 2 ಲೀಗ್ ಪಂದ್ಯದಲ್ಲೂ ಗೆದ್ದು 15 ಅಂಕ ಗಳಿಸಬೇಕು.*ರಾಜಸ್ಥಾನ ತಂಡ ಮುಂಬೈ ವಿರುದ್ಧದ ಕೊನೇ ಪಂದ್ಯದಲ್ಲಿ ಸೋಲಬೇಕು.*ಪಂಜಾಬ್ ಕೊನೇ ಪಂದ್ಯ ಸೋಲಬೇಕು; ಗೆದ್ದರೂ ರನ್ರೇಟ್ನಲ್ಲಿ ಕೆಕೆಆರ್ಗಿಂತ ಹಿಂದೆ ಬೀಳಬೇಕು; ಅದಕ್ಕೆ ಕೆಕೆಆರ್ ತನ್ನ ಕೊನೇ 2 ಪಂದ್ಯಗಳನ್ನು ಒಟ್ಟಾರೆ ಕನಿಷ್ಠ 72 ರನ್ಗಳಿಂದ ಗೆಲ್ಲಬೇಕಾಗುತ್ತದೆ.
ಡಿಕಾಕ್, ರಾಜ್ ಬಾವಾ ಹೊರಕ್ಕೆಮುಂಬೈ ಇಂಡಿಯನ್ಸ್ ತಂಡದ ಕೊನೇ 2 ಲೀಗ್ ಪಂದ್ಯಗಳಿಗೆ ವಿಕೆಟ್ ಕೀಪರ್-ಆರಂಭಿಕ ಕ್ವಿಂಟನ್ ಡಿಕಾಕ್ ಮತ್ತು ವೇಗದ ಬೌಲಿಂಗ್ ಆಲ್ರೌಂಡರ್ ರಾಜ್ ಅಂಗದ್ ಬಾವಾ ಅಲಭ್ಯರಾಗಿದ್ದಾರೆ. ಇವರಿಬ್ಬರು ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಡಿಕಾಕ್ ಸನ್ರೈಸರ್ಸ್ ವಿರುದ್ಧದ ಪಂದ್ಯದ ವೇಳೆ ಎಡಗೈ ಮಣಿಕಟ್ಟಿನ ಗಾಯಕ್ಕೊಳಗಾಗಿದ್ದರೆ, ರಾಜ್ ಬಾವಾ ಪಂಜಾಬ್ ವಿರುದ್ಧದ ಪಂದ್ಯದ ವೇಳೆ ಬಲಗೈ ಹೆಬ್ಬೆರಳಿನ ಗಾಯಕ್ಕೊಳಗಾಗಿದ್ದಾರೆ. ಇಬ್ಬರೂ ಹಾಲಿ ಆವೃತ್ತಿಯಲ್ಲಿ ಮುಂಬೈ ಪರ ತಲಾ 3 ಪಂದ್ಯ ಆಡಿದ್ದರು.
ಇನ್ನಷ್ಟು ಓದಿ