ಸಮಸ್ತ-ಕರ್ನಾಟಕ
ಕೆಲಸಕ್ಕೆ ಹೋಗಿದ್ದ ಹೆಂಡತಿ ತಡವಾಗಿ ಮನೆಗೆ ಬಂದಿದ್ದಕ್ಕೆ ಕೊಡಲಿಯಿಂದ ಕೊಚ್ಚಿ ಕೊಂದ ಗಂಡ!; ಪತ್ನಿಯ ಶೀಲದ ಕುರಿತು ಅನುಮಾನ?

ಜೋಯಿಡಾ: ಕೆಲಸಕ್ಕೆ ಹೋಗಿದ್ದ ಹೆಂಡತಿ ಮನೆಗೆ ತಡವಾಗಿ ಬಂದಿದ್ದಕ್ಕೆ, ಆಕೆಯ ಶೀಲದ ಮೇಲೆ ಅನುಮಾನಗೊಂಡ ಗಂಡ ಆಕೆಯನ್ನು ಕೊಚ್ಚಿ ಕೊಲೆ ಮಾಡಿದ ಅಮಾನವೀಯ ಪ್ರಕರಣವೊಂದು ನಡೆದಿದೆ.
ಪಲ್ಲವಿ ಪ್ರಕಾಶ್ ಕಟ್ಟಿಮುನಿ (29) ಮೃತಪಟ್ಟ ಮಹಿಳೆ. ಆಕೆಯ ಪತಿ ಪ್ರಕಾಶ್ ಕೊಲೆ ಆರೋಪಿ. ಉತ್ತರಕನ್ನಡ ಜಿಲ್ಲೆಯ ಜೋಯಿಡಾದ ಗಣೇಶಗುಡಿಯ ಮಣಿಕ್ಯಾಂಪ್ನಲ್ಲಿ ಈ ಕೊಲೆ ನಡೆದಿದೆ.
ಪಲ್ಲವಿ ಮನೆಗೆಲಸಕ್ಕೆ ಹೋಗುತ್ತಿದ್ದು, ಪತಿ ಪ್ರಕಾಶ್ಗೆ ಆಕೆಯ ಚಾರಿತ್ರ್ಯದ ಕುರಿತು ಅನುಮಾನವಿತ್ತು ಎನ್ನಲಾಗಿದೆ. ಅಲ್ಲದೆ ಮನೆಗೆಲಸಕ್ಕೆ ತೆರಳಿದ್ದ ಆಕೆ ತಡವಾಗಿ ಮರಳಿದ್ದು, ಪತಿಯ ಅನುಮಾನವನ್ನು ಮತ್ತಷ್ಟು ಹೆಚ್ಚಿಸಿತ್ತು. ಹೀಗಾಗಿ ತಡವಾಗಿ ಮನೆಗೆ ಬಂದ ಹೆಂಡತಿ ಮೇಲೆ ಸಿಟ್ಟಾದ ಪತಿ ಪ್ರಕಾಶ್ ಕೊಡಲಿಯಿಂದ ಆಕೆಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
ಅತ್ತೆ ಮನೆ ಮುಂದೆಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಅಳಿಮಯ್ಯ!
3 ವರ್ಷದ ಮಗಳನ್ನು ಜೀವಂತ ದಹನ ಮಾಡಿ ತಾನೂ ಬೆಂಕಿ ಹಚ್ಚಿಕೊಂಡ ಅಮ್ಮ!