Monday, 25 Jan, 8.40 am ವಿಜಯವಾಣಿ

ಮುಖಪುಟ
ಕುತಂತ್ರದಿಂದ ನುಸುಳಿದ್ದ ಪಾಕ್‌ನ ಗುಂಡಿಗೆ ಎದೆಯೊಡ್ಡಿದ್ದ ಯೋಧ ಹುತಾತ್ಮ

ಶ್ರೀನಗರ: ಕಾನೂನು ಉಲ್ಲಂಘನೆ, ನಿಯಮಬಾಹಿರ ಚಟುವಟಿಕೆ ಮಾಡುವಲ್ಲಿ ಪಾಕಿಸ್ತಾನದ ಸೇನೆಯದ್ದು ಎತ್ತಿದಕೈ. ಕುತಂತ್ರಬುದ್ಧಿ ಉಪಯೋಗಿಸಿಯಾದರೂ ಭಾರತೀಯ ಯೋಧರ ಹತ್ಯೆ ಮಾಡಬೇಕು ಎನ್ನುವ ಉದ್ದೇಶ ಹೊಂದಿರುವ ಪಾಕ್‌ನ ಇದೇ ಕುತಂತ್ರ ಬುದ್ಧಿಯಿಂದಾಗಿ ಭಾರತೀಯ ಯೋಧನೊಬ್ಬ ಇಂದು ಹುತಾತ್ಮರಾಗಿದ್ದಾರೆ.

ಪಾಕಿಸ್ತಾನ ಸೇನೆ ಕಳೆದ ವಾರ ಕದನ ವಿರಾಮ ಉಲ್ಲಂಘಿಸಿ ನಡೆಸಿದ್ದ ದಾಳಿ ವೇಳೆ ಗಾಯಗೊಂಡಿದ್ದ ಎನ್.‌ಕೆ. ನಿಶಾಂತ್‌ ಶರ್ಮಾ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯ ಸುಂದರ್‌ಬಾನಿ ವಲಯದಲ್ಲಿ ಪಾಕಿಸ್ತಾನ ಸೇನೆ ಜನವರಿ 18ರಂದು ಅಪ್ರಚೋದಿತ ದಾಳಿ ನಡೆಸಿ ಕದನ ವಿರಾಮ ಉಲ್ಲಂಘಿಸಿತ್ತು. ಇವರನ್ನು ಸದೆಬಡಿಯಲು ನಿಶಾಂತ್‌ ಶರ್ಮಾ ಮುಂದಾದಾಗ ಗುಂಡಿನಿಂದ ಗಂಭೀರವಾಗಿ ಗಾಯಗೊಂಡಿದ್ದರು. ಅವರು ಇಂದು ಹುತಾತ್ಮರಾಗಿದ್ದಾರೆ ಎಂದು ಸೇನೆ ಹೇಳಿದೆ.

ಈ ದಾಳಿಯಲ್ಲಿ ಭಾರತೀಯ ಯೋಧರು ಕೆಚ್ಚೆದೆಯ ಪ್ರದರ್ಶನ ನಡೆಸಿದ್ದು, ತಕ್ಕ ಪ್ರತಿಕ್ರಿಯೆ ನೀಡಿದೆ. ಎನ್.‌ಕೆ. ನಿಶಾಂತ್‌ ಶರ್ಮಾ ಧೈರ್ಯಶಾಲಿ, ಅಪಾರ ಉತ್ಸಾಹಿ ಹಾಗೂ ಪ್ರಾಮಾಣಿಕ ಸೈನಿಕರಾಗಿದ್ದರು. ಅವರ ಸರ್ವೋಚ್ಛ ತ್ಯಾಗ ಮತ್ತು ಕರ್ತವ್ಯ ನಿಷ್ಠೆಗಾಗಿ ದೇಶವು ಸದಾ ಅವರಿಗೆ ಋಣಿಯಾಗಿರುತ್ತದೆ' ಎಂದು ಸೇನೆ ಹೇಳಿದೆ.

ಸೈನ್ಯದಲ್ಲಿ ಇಬ್ಬರು ಪುತ್ರರು, ಒಬ್ಬ ಹುತಾತ್ಮ
ಮೂಲತಃ ರಾಂಪುರ್ ಮಣಿಹರನ್ ಕೊಟ್ವಾಲಿ ಪ್ರದೇಶದ ಲುಂಡಿ ಗ್ರಾಮದ ನಿವಾಸಿ ಜೋಗೇಂದ್ರ ಶರ್ಮಾ ತಮ್ಮ ಕುಟುಂಬದೊಂದಿಗೆ ಸಹರಾನ್‌ಪುರದ ಮೊಹಲ್ಲಾ ಶಾರದಾ ನಗರದಲ್ಲಿ ವಾಸಿಸುತ್ತಿದ್ದಾರೆ. ಜೋಗೇಂದ್ರ ಶರ್ಮಾ ಅವರ ಮೂವರು ಪುತ್ರರಲ್ಲಿ ಇಬ್ಬರು, ನಿಶಾಂತ್ ಶರ್ಮಾ ಮತ್ತು ಶುಭಮ್ ಶರ್ಮಾ ಅವರನ್ನು ಸೈನ್ಯಕ್ಕೆ ಸೇರಿಸಲಾಗಿತ್ತು. ಶುಭಮ್ ಅವರನ್ನು ಮೀರತ್ ಮತ್ತು ನಿಶಾಂತ್ ಶರ್ಮಾ ಅವರನ್ನು ಜಮ್ಮುವಿನ ಅಖ್ನೂರ್ ವಲಯದಲ್ಲಿ ಪೋಸ್ಟ್ ಮಾಡಲಾಗಿತ್ತು.

ಪತಿಯ ಸಾವಿನ ಸುದ್ದಿ ತಿಳಿಯುತ್ತಲೇ ಅವರ ಪತ್ನಿ ಪ್ರಜ್ಞೆ ಕಳೆದುಕೊಂಡಿದರು. ಇಡೀ ಕುಟುಂಬ ಶೋಕದಲ್ಲಿ ಮುಳುಗಿದೆ.

ವಿಮಾನ ದುರಂತ: ಟೂರ್ನಿಯಲ್ಲಿ ಪಾಲ್ಗೊಳ್ಳಲು ತೆರಳಿದ್ದ ಫುಟ್‌ಬಾಲ್‌ ಆಟಗಾರರ ಸಾವು

ಚಪ್ಪಲಿ ಬಿಟ್ಟು ಮಾತನಾಡಿದ ಆ ವ್ಯಕ್ತಿ ಕೇಳಿದ ಪ್ರಶ್ನೆಯಿಂದ ಕಸಿವಿಸಿಯಾಯಿತು- ಸುರೇಶ‌ಕುಮಾರ್‌

ಪತ್ನಿಯ ಜತೆ ಲೈಂಗಿಕಕ್ರಿಯೆ ನಡೆಸಲು ಆಗುತ್ತಿಲ್ಲ, ನನ್ನ ಈ ಚಟ ಕಾರಣವಾಗಿಹೋಯ್ತಾ?

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top