RCB vs GT: ಇಂದು (ಏ.30) ಅಹಮದಾಬಾದ್ನಲ್ಲಿ ಗುಜರಾತ್ ಟೈಟನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆದ 19ನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ಜಿಟಿ ಸುಲಭ ಗೆಲುವು ದಾಖಲಿಸಿತು.
ಟಾಸ್ ಗೆದ್ದ ಶುಭಮನ್ ಗಿಲ್, ಆರ್ಸಿಬಿಗೆ ಮೊದಲು ಬ್ಯಾಟ್ ಮಾಡುವಂತೆ ತಿಳಿಸಿದರು.
ಟಾಸ್ ಗೆದ್ದ ಶುಭಮನ್ ಗಿಲ್, ಆರ್ಸಿಬಿಗೆ ಮೊದಲು ಬ್ಯಾಟ್ ಮಾಡುವಂತೆ ತಿಳಿಸಿದರು.
ಅಂತೆಯೇ, ಬ್ಯಾಟಿಂಗ್ಗಿಳಿದ ಆರಂಭಿಕರಾದ ಜಾಕಬ್ ಬೆಥಲ್ ಮತ್ತು ವಿರಾಟ್ ಕೊಹ್ಲಿ ಪೈಕಿ ಕೊಹ್ಲಿ ಸ್ಫೋಟಕ ಓಪನಿಂಗ್ ನೀಡಿದರು. ಸಿರಾಜ್ ಬೌಲಿಂಗ್ನಲ್ಲಿ ಕೇವಲ 5 ರನ್ಗೆ ಬೆಥಲ್ ವಿಕೆಟ್ ಒಪ್ಪಿಸಿದರು. ಆದರೆ, ಕಗಿಸೋ ರಬಾಡ ಅವರ ಬೌಲಿಂಗ್ನಲ್ಲಿ ಕಿಂಗ್ ಕೊಹ್ಲಿ ಬ್ಯಾಕ್ ಟು ಬ್ಯಾಕ್ ಐದು ಬೌಂಡರಿ ಬಾರಿಸಿದರು. ಮೊದಲ 10 ಬಾಲ್ಗೆ 28 ರನ್ ಕಲೆಹಾಕಿದ ಕೊಹ್ಲಿ, ಹೆಚ್ಚು ಕಾಲ ಕ್ರೀಸ್ಗೆ ಅಂಟಿ ನಿಲ್ಲುವಲ್ಲಿ ವಿಫಲರಾದರು.
ಟಾಪ್ ಆರ್ಡರ್ ಕುಸಿದ ಬೆನ್ನಲ್ಲೇ ಕಣಕ್ಕಿಳಿದ ದೇವದತ್ತ ಪಡಿಕಲ್ (24 ಎಸೆತಗಳಲ್ಲಿ 40 ರನ್) ಎಂದಿನಂತೆ ತಂಡಕ್ಕೆ ತಮ್ಮ ಕೊಡುಗೆ ನೀಡಿ ಹೊರಟರು. ಕ್ಯಾಪ್ಟನ್ ರಜತ್ ಪಾಟೀದಾರ್ (19), ಜಿತೇಶ್ ಶರ್ಮ (1), ಟಿಮ್ ಡೇವಿಡ್ (9), ಕೃನಾಲ್ ಪಾಂಡ್ಯ(4) ರೊಮಾರಿಯೋ ಶೆಫರ್ಡ್ (17) ರಂತಹ ಸ್ಟಾರ್ ಬ್ಯಾಟರ್ಗಳು ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಲು ತೀರ ಹೆಣಗಾಡಿದರು. ಜಿಟಿ ಪರ ಬೌಲಿಂಗ್ ಮಾಡಿದ ಮೊಹಮ್ಮದ್ ಸಿರಾಜ್, ಕಗಿಸೊ ರಬಾಡ ತಲಾ ಒಂದು ವಿಕೆಟ್ ಪಡೆದರೆ, ರಶೀದ್ ಖಾನ್, ಜೇಸನ್ ಹೋಲ್ಡರ್, ಅರ್ಷದ್ ಖಾನ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.
ಆರ್ಸಿಬಿ ನೀಡಿದ 156 ರನ್ಗಳ ಸಾಧಾರಣ ಗುರಿಯನ್ನು ಸುಲಭವಾಗಿ ತಲುಪಿದ ಜಿಟಿಗೆ ಶುಭಮನ್ಗಿಲ್ (43), ಜಾಸ್ ಬಟ್ಲರ್(39) ಅವರ ಉತ್ತಮ ಇನ್ನಿಂಗ್ಸ್ನಿಂದ ಇನ್ನೂ 25 ಬಾಲ್ ಇರುವಂತೆಯೇ ಪಂದ್ಯ ಗೆದ್ದು ವಿಶೇಷ. ಕಳೆದ ಬಾರಿ ಇದೇ ಬೆಂಗಳೂರು ವಿರುದ್ಧ ಸೋತಿದ್ದ ಜಿಟಿ, ಇಂದಿನ ಪಂದ್ಯದಲ್ಲಿ ಸೋಲಿನ ಸೇಡನ್ನು ಕಡೆಗೂ ತೀರಿಸಿಕೊಂಡಿತು.
ಇನ್ನಷ್ಟು ಓದಿ

