Dailyhunt Logo
  • Light mode
    Follow system
    Dark mode
    • Play Story
    • App Story
ಮಾಜಿ ಸಿಎಂ ಎಂ.ಕೆ.ಸ್ಟಾಲಿನ್ ಉಪ ಚುನಾವಣೆ ಪ್ರಚಾರ ನಡೆಸುತ್ತಿರುವುದು.

ಮಾಜಿ ಸಿಎಂ ಎಂ.ಕೆ.ಸ್ಟಾಲಿನ್ ಉಪ ಚುನಾವಣೆ ಪ್ರಚಾರ ನಡೆಸುತ್ತಿರುವುದು.

ಚೆನ್ನೈ: ತಮಿಳುನಾಡಿನಲ್ಲಿ ಧಾರಾಪುರಂ ಮತ್ತು ಮಧುರಾಕಾಂತಂ ಉಪಚುನಾವಣೆ ತಾರಕಕ್ಕೇರಿದ್ದು, ಚುನಾವಣಾ ಆಯೋಗದ ಎಸ್​ಐಆರ್ ವಿವಾದದ ಬಗ್ಗೆ ಮಾತನಾಡದ ಸಿಎಂ ವಿಜಯ್ ವಿರುದ್ಧ ವ್ಯಂಗ್ಯವಾಡಿರುವ ಮಾಜಿ ಸಿಎಂ ಮತ್ತು ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್, ಸಿಎಂ ಸರ್ ಏನು ಭಯಾನಾ?

ಬಿಜೆಪಿ ಬಗ್ಗೆ ಅಷ್ಟೊಂದು ಭಯವೇ? ಎಂದು ಕೇಳಿದ್ದಾರೆ.

ಧಾರಾಪುರಂನಲ್ಲಿ ನಡೆದ ಪ್ರಚಾರ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಸ್ಟಾಲಿನ್, ದೇಶಾದ್ಯಂತ ರಾಜಕೀಯ ಪಕ್ಷಗಳಿಂದ ಟೀಕೆಗೆ ಗುರಿಯಾದ ವಿಷಯದ ಬಗ್ಗೆ ವಿಜಯ್ ಅವರ ಮೌನದ ಬಗ್ಗೆ ಅವರ ಸರ್ಕಾರಕ್ಕೆ ಬೆಂಬಲ ನೀಡಿರುವ ಪಕ್ಷಗಳೇ ಪ್ರಶ್ನಿಸುತ್ತಿವೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸರ್, ನಿಮ್ಮ ಭಯ ಏನು? ದೇಶಾದ್ಯಂತ ಎಲ್ಲಾ ನಾಯಕರು ಮಾತನಾಡುತ್ತಿರುವ ವಿಷಯದ ಬಗ್ಗೆಯೂ ನೀವು ಬಾಯಿ ತೆರೆಯಲು ಸಾಧ್ಯವಾಗದಿದ್ದರೆ, ಅದರ ಹಿಂದಿನ ಕಾರಣವೇನು? ಮುಖ್ಯಮಂತ್ರಿ ಸರ್, ನೀವು ಬಿಜೆಪಿಗೆ ಅಷ್ಟೊಂದು ಹೆದರುತ್ತಿದ್ದೀರಾ? ಎಂದು ತಾವು ಸಿಎಂ ಆಗಿದ್ದ ಸಮಯದಲ್ಲಿ ವಿಜಯ್ ಬಳಸಿದ್ದ ಸ್ಟೈಲನ್​ಲ್ಲೇ ಅಣಕಿಸಿದ್ದಾರೆ.

ಧಾರಾಪುರಂನಲ್ಲಿ ನಡೆದ ಇತ್ತೀಚಿನ ಪ್ರಚಾರದ ವೇಳೆ ವಿಜಯ್ ನೀಡಿದ ಹೇಳಿಕೆಯೊಂದನ್ನು ಉಲ್ಲೇಖಿಸಿ ಅವರು, ಟಿವಿಕೆ ಬಿಜೆಪಿಯ ಒಂದು ಶಾಖೆ ಎಂದು ಒಪ್ಪಿಕೊಳ್ಳುವ ಮೂಲಕ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಸತ್ಯವನ್ನು ನುಡಿದಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).

Dailyhunt
Disclaimer: This content has not been generated, created or edited by Dailyhunt. Publisher: Vijayvani