Dailyhunt Logo
  • Light mode
    Follow system
    Dark mode
    • Play Story
    • App Story
ಮಹಾನುಭಾವರ ಆದರ್ಶ ಅಳವಡಿಸಿಕೊಳ್ಳಲಿ

ಮಹಾನುಭಾವರ ಆದರ್ಶ ಅಳವಡಿಸಿಕೊಳ್ಳಲಿ

ಚಿತ್ರದುರ್ಗ: ಮುರುಘಾ ಪರಂಪರೆಯ ಜಯವಿಭವ ಸ್ವಾಮೀಜಿ ಸೇರಿ ಹಲವು ಮಹಾನುಭಾವರ ತತ್ವಾದರ್ಶ ಉತ್ತಮ ಸಮಾಜ ನಿರ್ಮಾಣಕ್ಕೆ ದಾರಿ ದೀಪವೆಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಸಲಹೆ ನೀಡಿದರು.
ಮುರುಘಾಮಠದಲ್ಲಿ ಭಾನುವಾರ ನಡೆದ ಲಿಂ.ಜಯವಿಭವ ಶ್ರೀ ಸ್ಮರಣೋತ್ಸವದಲ್ಲಿ ಮಾತನಾಡಿ, ಜಯವಿಭವ ಶ್ರೀ ಕನ್ನಡ, ಸಂಸ್ಕೃತ, ಹಿಂದಿ, ಬಂಗಾಳಿ, ಮರಾಠಿ ಒಳಗೊಂಡು ಇತರ ಭಾಷೆ ಬಲ್ಲ ಪ್ರವೀಣರಾಗಿದ್ದರು.
ಶಿವಾನುಭವ ಹೊಂದಿದ್ದ ವೇದಶಾಸö ಪಾರಂಗತರೂ, ಸರ್ವ ಧರ್ಮ ಸಮನ್ವಯಾಚಾರ್ಯರೂ, ವೈರಾಗ್ಯ ನಿಽಯಾಗಿದ್ದರು ಎಂದರು.
ಹೀಗಾಗಿ ಅವರ ಕಾಲದಲ್ಲೇ ಮುರುಘಾಮಠ ವಿದ್ವತ್ತು, ಲೋಕಸೇವೆ ಮತ್ತು ಸಂಪತ್ತುಗಳಿಗೆ ಸಮಗ್ರ ಭಾರತದಲ್ಲಿಯೇ ಹೆಸರಾಗಿ ತ್ತು. ಇಂಥ ಮಹಾಸಾಧಕರು ನಮ್ಮೆಲ್ಲರಿಗೂ ಸದಾ ಸೂರ್ತಿ ಎಂದು ತಿಳಿಸಿದರು.
ತಮ್ಮ ಹಿರಿಯ ಶ್ರೀಗಳಂತೆಯೇ ದೇಶೋನ್ನತಿ ಕಾರ್ಯಗಳಿಗೆ, ವಿದ್ಯಾಸಂಸ್ಥೆಗಳಿಗೆ ಲಕ್ಷಗಟ್ಟಲೆ ಸಹಾಯ ಧನವನ್ನು ನೀಡಿದ್ದಾ ರೆಂದು ಸ್ಮರಿಸಿದರು.

ವಿಶ್ರಾಂತ ಪ್ರಾಧ್ಯಾಪಕ ಮಲ್ಲಿಕಾರ್ಜುನ ಜವಳಿ ಮಾತನಾಡಿ, ಜಯದೇವ ಶ್ರೀಗಳ ಅಣತಿಯಂತೆ ಜಯವಿಭವ ಸ್ವಾಮೀಜಿ ನಡೆ ದರು. ತಮ್ಮ ಗುರುಗಳಂತೆ ನಾಡಿನಲ್ಲಿ ಶೈಕ್ಷಣಿಕ ಕ್ರಾಂತಿಗೆ ಅಡಿಪಾಯ ಹಾಕಿದರು. ಅಥಣಿಯ ಗಚ್ಚಿನಮಠ, ಧಾರವಾಡದ ಮುರುಘಾಮಠ, ಬೆಂಗಳೂರಿನ ಸರ್ಪಭೂಷಣ ಮಠ ಹೀಗೆ ನಾಡಿನ ಹಲವಾರು ಮಠಗಳು, ಮಠಾಽÃಶರ ಸಾಮೀಪ್ಯದಿಂದ ವ್ಯಕ್ತಿತ್ವವನ್ನು ರೂಪಿಸಿಕೊಂಡ ಮಹನೀಯರು ಎಂದು ಬಣ್ಣಿಸಿದರು.

ಕಣ್ವಕುಪ್ಪಿ ಮುರುಗೇಶ್, ಹನುಮಂತಪ್ಪ, ಎಂ.ಕೆ.ಪ್ರಭುದೇವ್, ಕೆಇಬಿ ಷಣ್ಮುಖಪ್ಪ, ಎಸ್.ಎಂ.ಕೊಟ್ರೇಶಪ್ಪ, ಎಸ್.ವಿ.ನಾಗರಾ ಜಪ್ಪ, ಮಹಡಿ ಶಿವಮೂರ್ತಿ, ವೀರೇಶ್, ಶಂಕರಪ್ಪ, ಮುರುಗೇಂದ್ರಪ್ಪ, ಪೈಲ್ವಾನ್ ತಿಪ್ಪೇಸ್ವಾಮಿ, ಡಾ.ಎಸ್.ಎಚ್.ಪಂಚಾಕ್ಷರಿ, ಡಾ.ಪಿ.ಬಿ. ಭರತ್, ನಾಗರಾಜ್ ಸಂಗಂ ಇತರರಿದ್ದರು.

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani