Dailyhunt Logo
  • Light mode
    Follow system
    Dark mode
    • Play Story
    • App Story
ಮಹಿಳಾ ಪಿಎಸ್​ಐಗೆ 1 ಲಕ್ಷ ರೂ. ದಂಡ| High court

ಮಹಿಳಾ ಪಿಎಸ್​ಐಗೆ 1 ಲಕ್ಷ ರೂ. ದಂಡ| High court

ಬೆಂಗಳೂರು: ಮಹಿಳಾ ವಕೀಲರೊಬ್ಬರಿಗೆ ಪೊಲೀಸ್​ ಠಾಣೆಯಲ್ಲಿಯೇ ಬೂಟುಗಾಲಿನಿಂದ ಒದ್ದ ಪ್ರಕರಣಕ್ಕೆ ಸಂಬಂಧಿಸಿ ಎ​ಐಆರ್​ ದಾಖಲಿಸಲು ಹೈಕೋರ್ಟ್​ ಏಪ್ರಿಲ್​ನಲ್ಲಿ ನೀಡಿದ್ದ ಆದೇಶವನ್ನು ಮುಚ್ಚಿಟ್ಟು, ಪ್ರಕರಣದ ತನಿಖೆಗೆ ರಜಾಕಾಲದ ಪೀಠದಿಂದ ತಡೆಯಾಜ್ಞೆ ಪಡೆದಿದ್ದ ಮಹಿಳಾ ಸಬ್​ಇನ್ಸ್​ಪೆಕ್ಟರ್​ ಟಿ.ಬಿ.
ಪದ್ಮಾವತಿ ಎಂಬುವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್​, 1 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.
ಎಫ್​ಐಆರ್​ ರದ್ದುಕೋರಿ ಪಿಎಸ್​ಐ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ನ್ಯಾಯಾಲಯದಿಂದ ಸತ್ಯ ಮರೆಮಾಚಿ ತಮ್ಮ ಪರವಾಗಿ ಆದೇಶ ಪಡೆದುಕೊಂಡಿರುವ ಕ್ರಮವನ್ನು ಟೀಕಿಸಿದ ನ್ಯಾಯಪೀಠ, ತನಿಖೆಗೆ ನೀಡಲಾಗಿದ್ದ ಮಧ್ಯಂತರ ತಡೆಯನ್ನು ರದ್ದುಗೊಳಿಸಿದ್ದು, ಅರ್ಜಿ ವಜಾಗೊಳಿಸಿ ದಂಡ ವಿಧಿಸಿದೆ.

ರೋಡ್​ ರೇಜ್​ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸ್​ ಠಾಣೆಯೊಳಗೆ ವಕೀಲೆಯೊಬ್ಬರನ್ನು ಪಿಎಸ್​ಐ ಪದ್ಮಾವತಿ ಅವರು ಬೂಟುಗಾಲಿನಿಂದ ಒದೆಯುತ್ತಿರುವುದನ್ನು ಸಿಸಿಟಿವಿ ದೃಶ್ಯಗಳ ಮೂಲಕ ವೀಸಿದ್ದ ಹೈಕೋರ್ಟ್​, ಪಿಎಸ್​ಐ ವಿರುದ್ಧ ಕ್ರಿಮಿನಲ್​ ಮೊಕದ್ದಮೆ ದಾಖಲಿಸುವಂತೆ ಆದೇಶಿಸಿತ್ತು. ಅದರಂತೆ ಮೈಕೋ ಲೇಔಟ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಮೇ ತಿಂಗಳಲ್ಲಿ ಹೈಕೋರ್ಟ್​ನ ರಜಾಕಾಲದ ನ್ಯಾಯಪೀಠಕ್ಕೆ ಅರ್ಜಿ ಸಲ್ಲಿಸಿದ್ದ ಅರ್ಜಿದಾರರು ಹೈಕೋರ್ಟ್​ ಸ್ವತಃ ತನಿಖೆಗೆ ಆದೇಶಿಸಿರುವ ಮುಖ್ಯ ವಿಷಯವನ್ನು ಮರೆಮಾಚಿ ಪ್ರಕರಣಕ್ಕೆ ತಡೆ ಪಡೆದುಕೊಂಡಿದ್ದರು.

ಈ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ಎಂ. ನಾಗಪ್ರಸನ್ನ ಅವರ ನ್ಯಾಯಪೀಠ, ಯಾವ ಕಾನೂನು ಬೂಟುಗಾಲಿನಿಂದ ಒದೆಯಲು ನಿಮಗೆ ಅನುಮತಿಸುತ್ತದೆ? ಅದಲ್ಲದೆ, ಇಷ್ಟೆಲ್ಲ ಮಾಡಿ ಹೈಕೋರ್ಟ್​ ಆದೇಶವನ್ನೇ ಮುಚ್ಚಿಟ್ಟು ತಡೆಯಾಜ್ಞೆ ತರುತ್ತೀರಾ? ಪ್ರಾಮಾಣಿಕರಾಗಿದ್ದರೆ ಆದೇಶದ ಪ್ರತಿಯನ್ನು ಲಗತ್ತಿಸಿ ಮಧ್ಯಂತರ ತಡೆ ಕೋರಬೇಕಿತ್ತು. ಆಗ ತಡೆ ಸಿಗುತ್ತಿರಲಿಲ್ಲ. ಆದ್ದರಿಂದ ಈ ಅರ್ಜಿಯನ್ನು ದಂಡದೊಂದಿಗೆ ವಜಾಗೊಳಿಸಲಾಗುವುದು ಎಂದು ಆದೇಶಿಸಿದೆ.

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani