ಸಮಸ್ತ-ಕರ್ನಾಟಕ
ಮಲೆನಾಡಲ್ಲಿ ಭೂಕಂಪನದ ಅನುಭವ, ಭಾರಿ ಶಬ್ದ!; ಆತಂಕದಲ್ಲಿ ಸ್ಥಳೀಯ ಜನತೆ.

ಶಿವಮೊಗ್ಗ: ಮಲೆನಾಡು ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಭಾರಿ ಶಬ್ದ ಕೇಳಿಸಿದ್ದಲ್ಲದೆ, ಭೂಕಂಪನದ ಅನುಭವ ಕೂಡ ಆಗಿದ್ದು ಸಾರ್ವಜನಿಕರು ಒಮ್ಮೆ ಬೆಚ್ಚಿ ಬೀಳುವಂತಾಗಿದೆ. ಇಂದು ರಾತ್ರಿ ಇದೀಗ ಕೆಲವು ನಿಮಿಷಗಳ ಹಿಂದೆ ಜರುಗಿದ ಈ ವಿದ್ಯಮಾನ ಮಲೆನಾಡಿನ ಜನರ ನಿದ್ದೆಗೆಡುವಂತೆ ಮಾಡಿದೆ.
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ಹಾಗೂ ಕೊಪ್ಪ ತಾಲೂಕಿನ ಕೆಲವು ಪ್ರದೇಶಗಳಲ್ಲಿ 10:21ರಿಂದ 10:23ರ ನಡುವೆ ಶಬ್ದ ಹಾಗೂ ಕಂಪನದ ಅನುಭವ ಆಗಿದೆ. ಕೊಪ್ಪ ತಾಲೂಕಿನ ದೊರೇಗಲ್ಲು ಗ್ರಾಮ ಸೇರಿ ಎನ್.ಆರ್.ಪುರ ಪಟ್ಟಣ ಹಾಗೂ ಕೊಪ್ಪದ ಹಲವೆಡೆ ಈ ಅನುಭವ ಉಂಟಾಗಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ಮಾತ್ರವಲ್ಲ, ಹೆದರಿದ ಜನರು ಮನೆಯಿಂದ ಹೊರಬಂದು ನಿಂತ ದೃಶ್ಯಗಳೂ ಕಂಡುಬಂದವು.
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಕೆಲವೆಡೆ ಗುರುವಾರ ರಾತ್ರಿ ಭೂಕಂಪದ ಅನುಭವಿ ಉಂಟಾಗಿದೆ. ಶಿವಮೊಗ್ಗ ಜಿಲ್ಲೆಯ ಗಡಿಯಲ್ಲಿರುವ ಹೊಸೂರು, ಮಾವಿನಗುಂಡಿ ಭಾಗದಲ್ಲಿ ಸಣ್ಣದಾಗಿ ಭೂಮಿ ನಡುಗಿದ್ದು, ಪಟಾಕಿ ಸ್ಫೋಟವಾದ ಶಬ್ಧ ಕೇಳಿ ಬಂದಿದೆ. ಯಾವುದೇ ಹಾನಿಯ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ತಾಲೂಕಿನ ಇತರ ಭಾಗಗಳಲ್ಲಿ ಅಂಥ ಅನುಭವ ಕಂಡುಬಂದಿಲ್ಲ.
ಶಬ್ದ, ಭೂಕಂಪನದ ಅನುಭವಕ್ಕೆ ಹೆದರಿ ಮನೆಯಿಂದ ಹೊರಬಂದ ಜನರು ಶಬ್ದ, ಭೂಕಂಪನದ ಅನುಭವಕ್ಕೆ ಹೆದರಿ ಮನೆಯಿಂದ ಹೊರಬಂದ ಜನರು ಶಬ್ದ, ಭೂಕಂಪನದ ಅನುಭವಕ್ಕೆ ಹೆದರಿ ಮನೆಯಿಂದ ಹೊರಬಂದ ಜನರು ಶಬ್ದ, ಭೂಕಂಪನದ ಅನುಭವಕ್ಕೆ ಹೆದರಿ ಮನೆಯಿಂದ ಹೊರಬಂದ ಜನರುಇದು ಅಮಲಿಳಿಸೋ ಸುದ್ದಿ; 'ಫಿಗರ್' ಬೇಕೆಂದರೆ 'ಡ್ರಿಂಕ್ಸ್' ಬಿಡಿ..!
ಸೆರಂ ಇನ್ಸ್ಟಿಟ್ಯೂಟ್ನಲ್ಲಿ ಮತ್ತೆ ಬೆಂಕಿ! ಐವರ ಸಾವಿನ ನಂತರವೂ ತಣಿಯದ ಅಗ್ನಿ
ಇಂದೇ ವಿಜಯವಾಣಿ ಪತ್ರಿಕೆಗೆ ಚಂದಾದಾರರಾಗಲು - ಇಲ್ಲಿ ಕ್ಲಿಕ್ ಮಾಡಿ