Dailyhunt Logo
  • Light mode
    Follow system
    Dark mode
    • Play Story
    • App Story
ಮತ್ತೆ ಸದ್ದು ಮಾಡುತ್ತಿದೆ ಹೇಮಾಮಾಲಿನಿ ಕೆನ್ನೆ: ನಾನಿದನ್ನು ಸುರಕ್ಷಿತವಾಗಿಟ್ಟುಕೊಳ್ಳೋದು ಬೆಸ್ಟ್‌ ಎಂದ ನಟಿ

ಮತ್ತೆ ಸದ್ದು ಮಾಡುತ್ತಿದೆ ಹೇಮಾಮಾಲಿನಿ ಕೆನ್ನೆ: ನಾನಿದನ್ನು ಸುರಕ್ಷಿತವಾಗಿಟ್ಟುಕೊಳ್ಳೋದು ಬೆಸ್ಟ್‌ ಎಂದ ನಟಿ

ಮುಂಬೈ: ರಾಜಕಾರಣಿಗಳು ನಾಲಗೆ ಹರಿಬಿಡುತ್ತ ಮಹಿಳೆಯರನ್ನು ಯಾವುದ್ಯಾವುದಕ್ಕೋ ಹೋಲಿಕೆ ಮಾಡುವ ಘಟನೆಗಳು ಹೆಚ್ಚುತ್ತಲೇ ಇವೆ. ಇತ್ತ ಮಾಜಿ ಸ್ಪೀಕರ್‌ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದರೆ, ಅತ್ತ ಮಹಾರಾಷ್ಟ್ರ ಸಚಿವ ಗುಲಾಬ್ ರಾವ್ ಪಾಟೀಲ್ ಹೆದ್ದಾರಿಯನ್ನು ನಟಿ, ಸಂಸದೆ ಹೇಮಾಮಾಲಿನಿ ಕೆನ್ನೆಗೆ ಹೋಲಿಸಿ, ಭಾರಿ ಟೀಕೆಗೆ ಗುರಿಯಾಗಿದ್ದಾರೆ.

2019ರಲ್ಲಿ ಬಿಹಾರದ ಮುಖ್ಯಮಂತ್ರಿಯಾಗಿದ್ದ ಲಾಲೂ ಪ್ರಸಾದ್‌ ಯಾದವ್‌ ಕೂಡ ಅಲ್ಲಿಯ ರಸ್ತೆಗಳನ್ನು ಹೇಮಾಮಾಲಿನಿ (73) ಕೆನ್ನೆಗೆ ಹೋಲಿಸಿ ಟೀಕೆಗೆ ಗುರಿಯಾಗಿದ್ದರು. ಈಗ ಮತ್ತೆ ನಟಿಯ ಕೆನ್ನೆ ಸದ್ದು ಮಾಡುತ್ತಿದೆ. ಈಗ ಮಹಾರಾಷ್ಟ್ರದ ಸಚಿವ ಮತ್ತು ಶಿವಸೇನೆಯ ಹಿರಿಯ ನಾಯಕ ಗುಲಾಬ್ ರಾವ್ ಪಾಟೀಲ್ ಭಾಷಣದ ವೇಳೆ 30 ವರ್ಷಗಳಿಂದ ಶಾಸಕನಾಗಿರುವ ನನ್ನ ಕ್ಷೇತ್ರಕ್ಕೆ ಬಂದು ಒಮ್ಮೆ ರಸ್ತೆ ನೋಡಿ. ಅದು ಹೇಮಾಮಾಲಿನಿ ಅವರ ಕೆನ್ನೆಯಂತೆ ಇಲ್ಲದಿದ್ದರೆ, ನಾನು ರಾಜೀನಾಮೆ ನೀಡುತ್ತೇನೆ ಎಂದಿದ್ದರು.

ರಸ್ತೆಗಳನ್ನು ತಮ್ಮ ಕೆನ್ನೆಗೆ ಹೋಲಿಸುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವರ ಬಗ್ಗೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ನಟಿ, ಯಾವುದೇ ಹೆಣ್ಣಿನ ವಿರುದ್ಧ ಈ ರೀತಿ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ. 'ಈ ಮಾತನ್ನು ಜನಸಾಮಾನ್ಯರು ಹೇಳಿದ್ದರೆ ನಿರ್ಲಕ್ಷಿಸಬಹುದಿತ್ತೇನೋ. ಆದರೆ ಜವಾಬ್ದಾರಿ ಸ್ಥಾನದಲ್ಲಿ ಇರುವ ವ್ಯಕ್ತಿಯೊಬ್ಬ ಈ ರೀತಿ ಮಾತನಾಡಿರುವುದು ಖಂಡನಾರ್ಹ. ವಿಧಾನಸಭೆಯ ಅಥವಾ ಯಾವುದೋ ಕ್ಷೇತ್ರದ ಸದಸ್ಯರಾಗಿರುವುದರಿಂದ ಈ ಮಾತು ಅವರಿಗೆ ಕ್ಷೋಭೆ ತರುವುದಿಲ್ಲ. ಯಾವುದೇ ಹೆಣ್ಣಿನ ವಿರುದ್ಧ ಈ ರೀತಿ ಹೇಳಿಕೆ ನೀಡಬಾರದು ಎಂದಿದ್ದಾರೆ. ಇದಕ್ಕೂ ಮುನ್ನ ತಿಳಿಹಾಸ್ಯದ ರೂಪದಲ್ಲಿ ನಾನು ನನ್ನ ಕೆನ್ನೆಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಉತ್ತಮ ಎಂದರು.

ಸಚಿವ ಗುಲಾಬ್ ರಾವ್ ಹೇಳಿಕೆ ಕುರಿತಂತೆ ಭಾರಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸಚಿವರು ನಾನು ಯಾರನ್ನೂ ನೋಯಿಸುವ ಉದ್ದೇಶವನ್ನು ಹೊಂದಿರಲಿಲ್ಲ ಎಂದು ಕ್ಷಮೆಯಾಚಿಸಿದ್ದರು.

ಇಲ್ಲಿದೆ ನೋಡಿ ನಟಿಯ ಹೇಳಿಕೆ:

Dailyhunt
Disclaimer: This content has not been generated, created or edited by Dailyhunt. Publisher: Vijayvani