ರಾಯಚೂರು ಹೈದ್ರಾಬಾದ್ ಕರ್ನಾಟಕ ವಿಶೇಷ ಸ್ಥಾನಮಾನ ಸಮರ್ಪಕವಾಗಿ ಜಾರಿಯಾಗಲು ಒತ್ತಾಯಿಸಿ ಮೇ.24ರಂದು ನಗರದ ಕೊಠಾರಿ ಫಂಕ್ಷನ್ ಹಾಲ್‌ನಲ್ಲಿ ಬೆಳಗ್ಗೆ 10 ಗಂಟೆಗೆ ದುಂಡು ಮೇಜಿನ ಸಭೆ, 371 (ಜಿ) ಹೋರಾಟಗಾರರ ಸಮಾವೇಶ ಹಾಗೂ ಕಲ್ಯಾಣ ಕರ್ನಾಟಕ ವಿಕಾಸ ವೇದಿಕೆ ಸ್ಥಾಪನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆಂದು ಹೈದ್ರಾಬಾದ್ ಕರ್ನಾಟಕ ಜನಾಂದೋಲನ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ತಿಳಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನವನ್ನು ವಿಮಾನ ನಿಲ್ದಾಣ, ಬಸ್ ಖರೀದಿ ಈ ರೀತಿಯ ಕಾಮಗಾರಿಗಳಿಗೆ ಬಳಸಲಾಗುತ್ತಿದೆಯೇ ಹೊರತು ಈ ಭಾಗದ ಶಿಕ್ಷಣ, ಆರೋಗ್ಯ, ಮತ್ತು ಇತರೆ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತಿಲ್ಲ. ಈ ಭಾಗದ ಅಭಿವೃದ್ಧಿಗಾಗಿ ಮಾಡಿದ್ದ 371 ಜೆ ಹೋರಾಟ ತಪ್ಪೆಂದು ಭಾಸವಾಗುತ್ತಿದೆ. ಈ ಎಲ್ಲ ವಿಷಯಗಳ ಬಗ್ಗೆ ಚರ್ಚಿಸಲು ಮತ್ತು ಇಡೀ ರಾಜ್ಯಕ್ಕೆ ಈ ವಿಷಯವನ್ನು ಮುಟ್ಟಿಸಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಹೋರಾಟಗಾರರು, ಸಾರ್ವಜನಿಕರು ಚಿಂತಕರು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಚಾಮರಸ ಮಾಲೀಪಾಟೀಲ್, ಹರವಿ ನಾಗನಗೌಡ, ವೀರಣ್ಣ ಭಂಡಾರಿ, ಜಾನ್‌ವೆಸ್ಸಿ, ಬಿ.ಬಸವರಾಜ, ಬೂದೆಪ್ಪ, ಆರ್.ಬಸವರಾಜ್, ಚಂದ್ರಶೇಖರ ಇದ್ದರು.
ಇನ್ನಷ್ಟು ಓದಿ

