ಮಿದುಳಿಗೂ ಕೋವಿಡ್ ಹಾನಿ; ಸೋಂಕಿನ ಪರಿಣಾಮಗಳ ಅಧ್ಯಯನ ಅಗತ್ಯ

ಮಿದುಳಿಗೂ ಕೋವಿಡ್ ಹಾನಿ; ಸೋಂಕಿನ ಪರಿಣಾಮಗಳ ಅಧ್ಯಯನ ಅಗತ್ಯ

ವಿಜಯವಾಣಿ

ವಿಜಯವಾಣಿ

1987d

Loading...

ಇಂದು ಪಾರ್ಶ್ವವಾಯು ದಿನ

ಬೆಂಗಳೂರು: ಕರೊನಾ ಸೋಂಕಿನಿಂದ ಕೇವಲ ಶ್ವಾಸಕೋಶ ಮಾತ್ರವಲ್ಲದೆ ವ್ಯಕ್ತಿಯ ಮಿದುಳಿಗೂ ಹಾನಿಯಾಗುತ್ತಿದ್ದು, ಕೋವಿಡ್ ಪೀಡಿತರು ಬ್ರೖೆನ್ ಸ್ಟ್ರೋಕ್​ಗೆ ಒಳಗಾಗುವ ಅಪಾಯವಿದೆ ಎಂಬುದು ತಜ್ಞ ವೈದ್ಯರ ತಿಳಿಸಿದ್ದಾರೆ. ಸೋಂಕು ಲಕ್ಷಣ ಕಾಣಿಸಿಕೊಳ್ಳದವರಲ್ಲೂ ಕೋವಿಡ್ ತೀವ್ರವಾದ ಪರಿಣಾಬೀರುತ್ತಿದೆ. ಇದರಿಂದ ಲಕ್ಷಾಂತರ ಜನ ಗುಣಮುಖರಾಗಿದ್ದರೂ ದೀರ್ಘಾವಧಿಯಲ್ಲಿ ಸೋಂಕಿನ ಪರಿಣಾಮಗಳ ಬಗ್ಗೆ ಅಧ್ಯಯದ ಅಗತ್ಯವಿದೆ ಎನ್ನುತ್ತಾರೆ ನರರೋಗ ತಜ್ಞರು. ಕೋವಿಡ್​ನಿಂದ ಉಸಿರಾಟದ ಸಮಸ್ಯೆ ಹೆಚ್ಚುವುದರ ಜತೆಗೆ, ರೋಗ ನಿರೋಧಕ ಶಕ್ತಿ ಕಂದುತ್ತದೆ. ಮಿದುಳಿಗೆ ರಕ್ತ ಸರಬರಾಜಾಗುವ ಪ್ರಕ್ರಿಯೆಯಲ್ಲಿ ಅಡೆ-ತಡೆ ಪಾರ್ಶ್ವವಾಯುವಿಗೆ ತುತ್ತಾಗುವ ಅಪಾಯವಿದೆ. ಇತ್ತೀಚಿನ ಪ್ರಕರಣಗಳು ಇದಕ್ಕೆ ಪುಷ್ಟಿ ಒದಗಿಸಿವೆ ಎನ್ನುತ್ತಾರೆ.

ಸೋಂಕು ತಗುಲಿದ ದಿನದಿಂದ ಸರಾಸರಿ 12 ದಿನಗಳಲ್ಲಿ ಪಾರ್ಶ್ವವಾಯುವಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಹಾಗೆಂದು ಸೋಂಕು ತಗುಲಿದ ಎಲ್ಲರ ಮಿದುಳಿಗೂ ಹಾನಿಯಾಗುತ್ತದೆ ಎಂದರ್ಥವಲ್ಲ. ಆದರೆ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ನರಮಂಡಲಕ್ಕೆ ಸಂಬಂಧಿಸಿದ ಇನ್ನಿತರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಈ ಅಪಾಯ ಹೆಚ್ಚು ಎಂದು ಅವರು ಹೇಳುತ್ತಾರೆ.

ಕರೊನಾ ಸೋಂಕಿನಿಂದ ರಕ್ತನಾಳಗಳಿಗೆ ಹಾನಿಯಾದರೆ ರಕ್ತ ಹೆಪ್ಪುಗಟ್ಟುತ್ತದೆ. ಇದರಿಂದ ಹೆಪ್ಪುಗಟ್ಟಿದ ರಕ್ತದ ಅಂಶಗಳು ಮಿದುಳಿಗೆ ತಲುಪಿದಾಗ ಮಿದುಳಿನ ಕಾರ್ಯವು ಕ್ರಮೇಣ ಕುಂಠಿತವಾಗುತ್ತದೆ. ಮಿದುಳಿಗೆ ಅಗತ್ಯ ಪ್ರಮಾಣದ ಆಮ್ಲಜನಕ ಲಭ್ಯವಾಗದೆ ಪಾರ್ಶ್ವವಾಯು ಸಮಸ್ಯೆ ಉಂಟಾಗುತ್ತದೆ ಎಂದು ತಿಳಿಸಿದ್ದಾರೆ.

ಕರೊನಾ ವೈರಸ್​ನಿಂದ ಸಾಕಷ್ಟು ಅಪಾಯ

ಕರೊನಾ ಕೇವಲ ಶ್ವಾಸಕೋಶಕ್ಕೆ ಸಂಬಂಧಿಸಿದ್ದಷ್ಟೇ ಅಲ್ಲದೆ, ಮಿದುಳಿನ ಅಪಧಮನಿಗಳು, ಕಾಲಿನ ರಕ್ತನಾಳಗಳು ಮತ್ತು ಮಿದುಳಿನಲ್ಲಿರುವ ಸೈನಸ್​ಗಳಲ್ಲಿ ಉಂಟಾಗುವ ಹೆಪ್ಪುಗಟ್ಟುವಿಕೆಯಿಂದಾಗಿ ಡಿವಿಟಿ, ಪಲ್ಮನರಿ ಎಂಬಾಲಿಸಮ್ ಮತ್ತು ಮಿದುಳಿನಲ್ಲಿ ಅಪಧಮನಿಯ ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ. ಈ ಕಾಯಿಲೆಯ ವಿಶೇಷವೆಂದರೆ ವೈವಿಧ್ಯಮಯ ರೋಗನಿರೋಧಕ ಅಭಿವ್ಯಕ್ತಿಗಳಾದ ತೋಳುಗಳು ಮತ್ತು ಕಾಲುಗಳ ಗಂಟುಗಳಲ್ಲಿ ಪಾರ್ಶ್ವವಾಯು, ಮುಖದ ಅಸಹಜತೆಯ ಪಾರ್ಶ್ವವಾಯು, ಕಾರ್ನಿಯಾದ ನರಕ್ಕೆ ಉಂಟಾಗುವ ಪಾರ್ಶ್ವವಾಯುವಿನಿಂದಾಗಿ ಎರಡೆರಡು ದೃಷ್ಟಿಗೆ ಕಾರಣವಾಗುವುದು, ಕಣ್ಣಿನ ಸ್ನಾಯುಗಳ ಇಳಿಮುಖ ಇತ್ಯಾದಿಗಳು ಸಮಸ್ಯೆಗಳು ಕಾಡಲಿದೆ.

ಕೋವಿಡ್​ನಿಂದ ಚೇತರಿಸಿಕೊಳ್ಳುತ್ತಿರುವವರಿಗೆ, ಪಾರ್ಶ್ವವಾಯು ರಹಿತ ರೋಗಿಗಳಿಗೆ ಅಲ್ಪಾವಧಿಗೆ ರಕ್ತ ಹೆಪ್ಪುಗಟ್ಟುವಿಕೆ ನಿರೋಧಕತೆ ಅನುಸರಿಸಲಾಗುತ್ತದೆ. ತೀವ್ರವಾದ ಜ್ವರದಿಂದಾಗಿ ಬಾಹ್ಯ ಅರಿವು ಕಡಿಮೆಯಾಗುವುದು, ಅರೆನಿದ್ರಾವಸ್ಥೆ, ಮೂರ್ಛೆ (ಫಿಟ್ಸ್) ಹೋಗುವುದು, ನಿದ್ರೆ ಹಾಗೂ ಎಚ್ಚರ ಎರಡೂ ಸ್ಥಿತಿಯಲ್ಲಿರುವುದು ಮುಂತಾದವುಗಳಿಗೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಗಮನಾರ್ಹ ಸಂಖ್ಯೆಯಲ್ಲಿ ನೋಡುತ್ತಿದ್ದೇವೆ ಎನ್ನುತ್ತಾರೆ ಸ್ಪರ್ಶ್ ಆಸ್ಪತ್ರೆಯ ನರರೋಗ ತಜ್ಞ ಡಾ.ಅಮಿತ್ ಕುಲಕರ್ಣಿ.

ಶೇ.90.25ಕ್ಕೆ ಏರಿದ ಚೇತರಿಕೆ ಪ್ರಮಾಣ

ಬೆಂಗಳೂರು: ರಾಜ್ಯದಲ್ಲಿ ಸೋಂಕು ಪ್ರಮಾಣ ಇಳಿಕೆಯ ನಡುವೆಯೇ ಬುಧವಾರ 55 ಸೋಂಕಿತರ ಸಾವಿನೊಂದಿಗೆ ಮೃತರ ಸಂಖ್ಯೆ 11,046ಕ್ಕೆ ಏರಿಕೆಯಾಗಿದೆ. ಸೋಂಕಿತರಲ್ಲಿ 7,384 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಗುಣಮುಖರ ಸಂಖ್ಯೆ 7.33 ಲಕ್ಷ ಏರಿಕೆಯಾಗಿದೆ. ಇದರೊಂದಿಗೆ ಚೇತರಿಕೆ ಪ್ರಮಾಣ ಶೇ. 90.25ಕ್ಕೆ ಏರಿಕೆಯಾಗಿದೆ. ಇನ್ನು ಸೋಂಕಿತರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದ್ದು, 3,145 ಸೋಂಕು ಪ್ರಕರಣ ವರದಿಯಾಗುವ ಮೂಲಕ ದಿನದ ಪಾಸಿಟಿವಿಟಿ ದರ ಶೇ. 3.65ಕ್ಕೆ ಇಳಿಕೆಯಾದೆ. ಸಕ್ರಿಯ ಪ್ರಕರಣಗಳು 68,161ಕ್ಕೆ ಕುಸಿದಿದ್ದು, 935 ಮಂದಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕರೊನಾ ಸೋಂಕಿತ ರೋಗಿಗಳನ್ನು ಸಿ.ಟಿ ಸ್ಕಾಯನ್​ಗೆ ಒಳಪಡಿಸಿದಾಗ ಸೋಂಕಿತರು ಮಿದುಳಿನ ಪಾರ್ಶ್ವವಾಯುವಿಗೆ ತುತ್ತಾಗಿರುವುದು ಪತ್ತೆಯಾಗಿದೆ. ಕೈ-ಕಾಲು ಮರಗಟ್ಟುವುದು, ಮಾತನಾಡಲು ತೊಂದರೆ, ಸ್ಪರ್ಶ ಜ್ಞಾನ ಇಲ್ಲದಿರುವುದು, ತಲೆನೋವು, ದೃಷ್ಟಿ ಮಂಜಾಗುವಂತಹ ಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡದೆ ತಪಾಸಣೆಗೆ ಒಳಗಾಗಬೇಕು.

| ಡಾ. ಎನ್. ಕೆ. ವೆಂಕಟರಮಣ ನರರೋಗ ತಜ್ಞ

Your Reaction?

15
10
1
3
1
Dailyhunt
Disclaimer: This content has not been generated, created or edited by Dailyhunt. Publisher: Vijayvani