Dailyhunt Logo
  • Light mode
    Follow system
    Dark mode
    • Play Story
    • App Story
ನಾವೇನು ಈಗ ಹಾಡುತ್ತಿದ್ದೇವೋ ಅದು ಎಸ್​ಪಿಬಿ ಹಾಕಿದ ಭಿಕ್ಷೆ!; ರಾಜೇಶ್​ ಕೃಷ್ಣನ್​

ನಾವೇನು ಈಗ ಹಾಡುತ್ತಿದ್ದೇವೋ ಅದು ಎಸ್​ಪಿಬಿ ಹಾಕಿದ ಭಿಕ್ಷೆ!; ರಾಜೇಶ್​ ಕೃಷ್ಣನ್​

ಬೆಂಗಳೂರು: ಹಿರಿಯ ಗಾಯಕ ಎಸ್​ಪಿ ಬಾಲಸುಬ್ರಮಣ್ಯಂ ಅವರ ನಿಧನದ ಬೆನ್ನಲ್ಲೇ, ಅವರ ಗರಡಿಯಲ್ಲಿಯೇ ಪಳಗಿದ ಗಾಯಕ ರಾಜೇಶ್ ಕೃಷ್ಣನ್​ ಅಗಲಿದೆ ಗಾನ ಗಂಧರ್ವನ ಬಗ್ಗೆ ಮಾತನಾಡಿದ್ದಾರೆ.

ಸದ್ಯ ಈಗ ನಾವೇನು ಅಷ್ಟೋ ಇಷ್ಟೋ ಹಾಡುತ್ತಿದ್ದೆವೆಯೋ ಅದು ಎಸ್​ಪಿಬಿ ಅವರು ಹಾಕಿದ ಭಿಕ್ಷೆ ಎಂದಿದ್ದಾರೆ. ಇಂಥ ಮತ್ತೊಂದು ಗಾಯಕ ಹುಟ್ಟಿ ಬರಬೇಕೆಂದರೆ ಇನ್ನೂ 500 ವರ್ಷ ಬೇಕು. ಅಂಥದ್ದೊಂದು ಮೇರು ಪರ್ವತವನ್ನು ನಾವಿಂದು ಕಳೆದುಕೊಂಡಿದ್ದೇವೆ' ಎಂದು ಭಾವುಕರಾಗಿ ಮಾತನಾಡಿದ್ದಾರೆ.

ಶಾಲೆ ಮತ್ತು ಕಾಲೇಜಿನ ಸಮಯದಿಂದಲೇ ಅವರ ಹಾಡುಗಳನ್ನು ಕೇಳಿ ಅಭಿಮಾನಿಯಾಗಿದ್ದ ರಾಜೇಶ್​ ಕೃಷ್ಣನ್​, ಮುಂದೊಂದು ದಿನ ಅವರ ಜತೆ ವೇದಿಕೆ ಹಂಚಿಕೊಳ್ಳುವ ಸೌಭಾಗ್ಯ ಸಿಗುತ್ತಾ ಎಂದು ಭಾವಿಸಿರಲಿಲ್ಲ.

ಆ ಗಳಿಗೆಯೂ ರಾಜೇಶ್​ಗೆ ಸಿಕ್ಕಿತ್ತು.

ಇದೀಗ ಅವರೊಂದಿಗೆ ಕಳೆದ ಆ ಸಮಯವನ್ನು ಮತ್ತು ಬಿಟ್ಟು ಹೋದ ಹಾಡುಗಳನ್ನೇ ಕೇಳುತ್ತ ಅವರ ನೆನಪು ಮಾಡಿಕೊಳ್ಳುತ್ತಾರೆಂತೆ.

ಗುಮ್ಮಟ ನಗರಿಯಲ್ಲಿ ಗಾನಸುಧೆ ಹರಿಸಿದ್ದರು ಎಸ್​ಪಿಬಿ

Dailyhunt
Disclaimer: This content has not been generated, created or edited by Dailyhunt. Publisher: Vijayvani