ಮುಳಬಾಗಿಲು: ಸಾಮಾನ್ಯವಾಗಿ ಹಿಮಾಲಯ ಪರ್ವತಗಳಲ್ಲಿ ಕಾಣಸಿಗುವ ಕಾಮನ್ ಸ್ವಿಫ್ಟ್ ಅಥವಾ ಪರ್ವತ ಬಾನಾಡಿ ಎಂದೇ ಕರೆಯುವ ಪಯೊಂದು ಬೀದಿ ನಾಯಿಗಳ ದಾಳಿಗೆ ತುತ್ತಾಗಿ ಒದ್ದಾಡುತ್ತಿದ್ದನ್ನು ಗಮನಿಸಿದ ಪೊಲೀಸರು ಅದನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿ ಜೀವ ಉಳಿಸಿದ್ದಾರೆ.
ಹಿಮಾಲಯ ಪರ್ವತಗಳಲ್ಲಿ ವಾಸಿಸುವ ಈ ಪಕ್ಷಿ ಪ್ರತಿವರ್ಷ ಸಂತಾನೋತ್ಪತಿಗಾಗಿ ದಕ್ಷಿಣ ಭಾರತಕ್ಕೆ ಬರುತ್ತವೆ. ಇದು 10 ತಿಂಗಳ ಕಾಲ ಆಕಾಶದಲ್ಲೇ ಹಾರುವ ವಿಶಿಷ್ಟ ಶಕ್ತಿ ಹೊಂದಿದೆ. ಇಂತಹ ಪಕ್ಷಿಯನ್ನು ಸಂರಕ್ಷಣೆ ಮಾಡಿರುವುದು ಒಂದು ಪಯ ಸಂತತಿಯನ್ನೇ ರಕ್ಷಣೆ ಮಾಡಿದಂತಾಗಿದೆ.

