Dailyhunt
ನಮ್ಮ ರಕ್ತದಲ್ಲಿರುವುದು ಮಹಾದೇವನ DNA: ಜಾಮೀಯಾ ವಿವಿ ಕುಲಪತಿ ಹೇಳಿಕೆ; ವಿದ್ಯಾರ್ಥಿಗಳ ವಿರೋಧ, ಬಿಜೆಪಿ ಬೆಂಬಲ! Mahadev DNA

ನಮ್ಮ ರಕ್ತದಲ್ಲಿರುವುದು ಮಹಾದೇವನ DNA: ಜಾಮೀಯಾ ವಿವಿ ಕುಲಪತಿ ಹೇಳಿಕೆ; ವಿದ್ಯಾರ್ಥಿಗಳ ವಿರೋಧ, ಬಿಜೆಪಿ ಬೆಂಬಲ! Mahadev DNA

ವದೆಹಲಿ: ಪ್ರತಿಷ್ಠಿತ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ ಈಗ ಸೈದ್ಧಾಂತಿಕ ಸಂಘರ್ಷದ ಕಣವಾಗಿ ಬದಲಾಗಿದೆ. ವಿಶ್ವವಿದ್ಯಾಲಯದ ಉಪಕುಲಪತಿ (VC) ಮಜರ್ ಆಸಿಫ್ ನೀಡಿದ ಒಂದು ಹೇಳಿಕೆ ಈಗ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಕ್ಯಾಂಪಸ್‌ನಲ್ಲಿ ಪ್ರತಿಭಟನೆಯ ಕಿಚ್ಚು ಹಚ್ಚಿದೆ.

ಏನಿದು 'ಮಹಾದೇವ DNA' ವಿವಾದ?

ಇತ್ತೀಚೆಗೆ ಜಾಮಿಯಾ ಕ್ಯಾಂಪಸ್‌ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (RSS) ಸಂಬಂಧಿಸಿದ ಯುವ ಕುಂಭ ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇದಿಕೆಯಲ್ಲಿ ಮಾತನಾಡಿದ ಕುಲಪತಿ ಮಜರ್ ಆಸಿಫ್, ಭಾರತೀಯರ ಅಸ್ಮಿತೆಯ ಬಗ್ಗೆ ಮಾತನಾಡುತ್ತಾ ನೀಡಿರುವ ಹೇಳಿಕೆಯೊಂದು ವಿವಾದದ ರೂಪ ಪಡೆದುಕೊಂಡಿದೆ.
ನಮ್ಮ ಧರ್ಮ, ಭಾಷೆ ಮತ್ತು ಸಂಸ್ಕೃತಿಗಳು ಬೇರೆ ಬೇರೆಯಾಗಿರಬಹುದು. ಆದರೆ, ನಾವೆಲ್ಲರೂ ಭಾರತೀಯರು. ಏಕೆಂದರೆ ಭಗವಾನ್ ಮಹಾದೇವನ ಡಿಎನ್‌ಎ (Mahadev DNA) ನಮ್ಮೆಲ್ಲರ ರಕ್ತದಲ್ಲೂ ಹರಿಯುತ್ತಿದೆ ಎಂಬ ಅರ್ಥದಲ್ಲಿ ಅವರು ಮಾತನಾಡಿದ್ದರು. ಅವರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪರ-ವಿರೋಧದ ಚರ್ಚೆಗಳು ಜೋರಾಗಿವೆ.ಇದನ್ನೂ ಓದಿ: ಡಿಜೆ ಸೌಂಡ್‌ಗೆ ಬಲಿಯಾದ 140 ಕೋಳಿಗಳು: ಮದುವೆ ಸಂಭ್ರಮದ ನಡುವೆ ಫಾರ್ಮ್ ಮಾಲೀಕನ ಕಣ್ಣೀರು! DJ Music .

ವೈಜ್ಞಾನಿಕ ಮನೋಭಾವ ಎಲ್ಲಿ ಹೋಯಿತು?: ವಿದ್ಯಾರ್ಥಿಗಳ ಕಿಡಿ

ಕುಲಪತಿಗಳ ಈ ಹೇಳಿಕೆಯನ್ನು ಜಾಮಿಯಾದ ಎಸ್‌ಎಫ್‌ಐ (SFI) ವಿದ್ಯಾರ್ಥಿ ಸಂಘಟನೆ ತೀವ್ರವಾಗಿ ಖಂಡಿಸಿದೆ. ಒಬ್ಬ ಕುಲಪತಿಯಾಗಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕಾದವರು, ಇಂತಹ ಅವೈಜ್ಞಾನಿಕ ಮತ್ತು ಪ್ರತಿಗಾಮಿ ಮಾತುಗಳನ್ನು ಆಡುತ್ತಿರುವುದು ಸರಿಯಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆಯನ್ನು ವಿರೋಧಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಆಡಳಿತ ಮಂಡಳಿ ದೌರ್ಜನ್ಯ ನಡೆಸಿದೆ. ಪ್ರೊಕ್ಟೋರಿಯಲ್ ತಂಡವು ವಿದ್ಯಾರ್ಥಿಗಳನ್ನು ಎಳೆದಾಡಿ, ಹಲ್ಲೆ ನಡೆಸಿದೆ ಎಂದು ಎಸ್‌ಎಫ್‌ಐ ಗಂಭೀರವಾಗಿ ಆರೋಪಿಸಿದೆ. ಸಾಮಾನ್ಯ ವಿದ್ಯಾರ್ಥಿಗಳ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ಆಡಳಿತ ಮಂಡಳಿ, ಆರ್‌ಎಸ್‌ಎಸ್ ಕಾರ್ಯಕ್ರಮಗಳಿಗೆ ಕೆಂಪು ಹಾಸು ಹಾಸುತ್ತಿರುವುದು ಏಕೆ? ಎಂಬ ಪ್ರಶ್ನೆಯನ್ನು ವಿದ್ಯಾರ್ಥಿಗಳು ಎತ್ತಿದ್ದಾರೆ.

ವಿಸಿ ಪರವಾಗಿ ಬ್ಯಾಟಿಂಗ್ ಮಾಡಿದ ಬಿಜೆಪಿ!

ವಿದ್ಯಾರ್ಥಿಗಳು ವಿಸಿ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದರೆ, ಇತ್ತ ಬಿಜೆಪಿ ಅವರ ಹೇಳಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡಿದೆ. ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಈ ಬಗ್ಗೆ ಎಕ್ಸ್ (ಟ್ವಿಟರ್​) ನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.ಇದನ್ನೂ ಓದಿ: ಎಕ್ಸಿಟ್​ ಪೋಲ್​ ಬುಡಮೇಲಾಗುತ್ತೆ: ಮೇ. 4 ಕ್ಕೆ ಸರ್ಕಾರ ರಚನೆಯಾಗುತ್ತೆ; ದೀದಿ ವಿಡಿಯೋ ಸಂದೇಶ! Mamata Banerjee ವಿಸಿಯವರ ಮಾತನ್ನು ಅಕ್ಷರಶಃ ವಿಜ್ಞಾನದ ಪ್ರಯೋಗಾಲಯದ ದೃಷ್ಟಿಯಿಂದ ನೋಡುವುದು ತಪ್ಪು. ಅದು ನಮ್ಮ ನಾಗರಿಕತೆಯ ರೂಪಕ (Metaphor). ಭಾರತೀಯರ ಹಂಚಿಕೆಯ ಪೂರ್ವಜರು, ಸಾವಿರಾರು ವರ್ಷಗಳ ಸಂಸ್ಕೃತಿ ಮತ್ತು ನಮ್ಮ ಸಾಮೂಹಿಕ ಪ್ರಜ್ಞೆಯನ್ನು ಅವರು ಹಾಗೆ ಬಣ್ಣಿಸಿದ್ದಾರೆ ಎಂದು ಮಾಳವಿಯಾ ಹೇಳಿದ್ದಾರೆ. ನಾವು ಬೇರೆ ಬೇರೆ ಪ್ರದೇಶದವರಾಗಿರಬಹುದು, ಬೇರೆ ಧರ್ಮದವರಾಗಿರಬಹುದು, ಆದರೆ ಸಾಂಸ್ಕೃತಿಕವಾಗಿ ನಾವೆಲ್ಲ ಒಂದೇ ಎಂಬುದನ್ನು ಅವರು 'ಮಹಾದೇವ DNA' ಮೂಲಕ ಹೇಳಲು ಹೊರಟಿದ್ದಾರೆ" ಎಂದು ಅವರು ಸಮರ್ಥಿಸಿಕೊಂಡಿದ್ದಾರೆ,(ಏಜನ್ಸೀಸ್​).

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani