Monday, 18 Jan, 11.08 pm ವಿಜಯವಾಣಿ

ಮುಖಪುಟ
ನಟರಾಜನ್ ನೋಬಾಲ್‌ಗೆ ಸ್ಪಾಟ್ ಫಿಕ್ಸಿಂಗ್ ಎಂದ ವಾರ್ನ್, ಸಿಡಿದೆದ್ದ ಅಭಿಮಾನಿಗಳು

ಬ್ರಿಸ್ಬೇನ್: ಭಾರತದ ವೇಗಿ ಟಿ. ನಟರಾಜನ್ ಆಸೀಸ್ ಪ್ರವಾಸದಲ್ಲಿ ಏಕದಿನ, ಟಿ20, ಟೆಸ್ಟ್‌ಗೆ ಪದಾರ್ಪಣೆ ಮಾಡಿ ಗಮನಸೆಳೆದಿದ್ದಾರೆ. ಈ ನಡುವೆ ಬ್ರಿಸ್ಬೇನ್​ ಟೆಸ್ಟ್‌ನಲ್ಲಿ ಅವರ ನೋಬಾಲ್ ಎಸೆತಗಳನ್ನು ಪ್ರಶ್ನಿಸಿರುವ ಆಸೀಸ್ ಸ್ಪಿನ್ ದಿಗ್ಗಜ ಶೇನ್ ವಾರ್ನ್, ಕ್ರಿಕೆಟ್ ಪ್ರೇಮಿಗಳಿಂದ ತೀವ್ರ ಟೀಕೆಗಳನ್ನು ಎದುರಿಸಿದ್ದಾರೆ.

ಓವರ್‌ನ ಮೊದಲ ಎಸೆತವನ್ನು ನೋಬಾಲ್ ಮಾಡುವ ನಟರಾಜನ್ ಅಭ್ಯಾಸ ಸ್ಪಾಟ್-ಫಿಕ್ಸಿಂಗ್ ಅನುಮಾನ ಮೂಡಿಸುತ್ತಿದೆ ಎಂದು ವಾರ್ನ್ ವೀಕ್ಷಕವಿವರಣೆಯ ವೇಳೆ ಹೇಳಿದ್ದರು. ನಟರಾಜನ್ ಮೊದಲ ಇನಿಂಗ್ಸ್‌ನಲ್ಲಿ 6 ನೋಬಾಲ್ ಎಸೆದಿದ್ದರೆ, 4ನೇ ದಿನದಾಟದಲ್ಲಿ 1 ನೋಬಾಲ್ ಎಸೆದಿದ್ದರು. ಈ ಪೈಕಿ 5 ನೋಬಾಲ್ ಓವರ್‌ನ ಮೊದಲ ಎಸೆತದಲ್ಲೇ ಆಗಿತ್ತು. ವಾರ್ನ್ ಅವರ ಈ ಆರೋಪಕ್ಕೆ ಕ್ರಿಕೆಟ್ ಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಗಾಲೆ ಟೆಸ್ಟ್‌ನಲ್ಲಿ ಲಂಕಾ ವಿರುದ್ಧ 7 ವಿಕೆಟ್‌ಗಳಿಂದ ಗೆಲುವು ಕಂಡ ಇಂಗ್ಲೆಂಡ್

ನಟರಾಜನ್ ಕಠಿಣ ಪರಿಶ್ರಮದಿಂದ ಮೇಲೆ ಬಂದವರು. ಅವರನ್ನು ತುಳಿಯುವ ಪ್ರಯತ್ನ ಮಾಡಬೇಡಿ ಎಂದೂ ವಾರ್ನ್‌ಗೆ ಎಚ್ಚರಿಕೆ ನೀಡಿದ್ದಾರೆ. ಇನ್ನು ಕೆಲವರು ಶೇನ್ ವಾರ್ನ್ ಮತ್ತು ಮಾರ್ಕ್ ವಾ ಈ ಹಿಂದೆ ಬುಕ್ಕಿಗಳಿಗೆ ತಂಡ, ಪಿಚ್ ಮಾಹಿತಿ ಸೋರಿಕೆ ಮಾಡಿದ ಪ್ರಕರಣವನ್ನು ನೆನಪಿಸಿದ್ದಾರೆ. ಈ ಮೂಲಕ ವಾರ್ನ್‌ಗೆ ಫಿಕ್ಸಿಂಗ್ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದಿದ್ದಾರೆ. ಇನ್ನು ಕೆಲವರು, ರಾಜಸ್ಥಾನ ರಾಯಲ್ಸ್ ತಂಡದ ಮಾಜಿ ಆಟಗಾರ ವಾರ್ನ್, ರಾಜ್ ಕುಂದ್ರಾ ಸಹವಾಸದಿಂದ ಹೀಗೆ ಮಾತನಾಡುತ್ತಿದ್ದಾರೆ ಎಂದಿದ್ದಾರೆ. ರಾಜ್ ಕುಂದ್ರಾ ರಾಜಸ್ಥಾನ ರಾಯಲ್ಸ್ ತಂಡದ ಮಾಲೀಕರಾಗಿದ್ದ ಸಮಯದಲ್ಲಿ ಬೆಟ್ಟಿಂಗ್ ಪ್ರಕರಣದಲ್ಲಿ ಸಿಲುಕಿದ್ದರು. ಅದೇ ವೇಳೆ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣವೂ ಭುಗಿಲೆದ್ದಿತ್ತು.

ತಂದೆಯಾದ ಬಳಿಕ ಬದಲಾಯಿತು ವಿರಾಟ್ ಕೊಹ್ಲಿ ಟ್ವಿಟರ್ ಬಯೋ!

ಸ್ಪಿನ್​ ದಿಗ್ಗಜ ಬಿಎಸ್ ಚಂದ್ರಶೇಖರ್‌ಗೆ ಅನಾರೋಗ್ಯ, ಬೆಂಗಳೂರಿನ ಆಸ್ಪತ್ರೆಯಲ್ಲಿ ಚೇತರಿಕೆ

ದೇಶೀಯ ಟಿ20 ಫೈಟ್​, ಕರ್ನಾಟಕ ಗೆಲುವು ಕಂಡರೂ ನಾಕೌಟ್ ಸಾಧ್ಯತೆ ಕ್ಷೀಣ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top