Dailyhunt Logo
  • Light mode
    Follow system
    Dark mode
    • Play Story
    • App Story
ನಟಿ ನಜ್ರಿಯಾ ನಜಿಮ್ ಹಾಗೂ ನಟ ಫಹಾದ್ ಫಾಸಿಲ್

ನಟಿ ನಜ್ರಿಯಾ ನಜಿಮ್ ಹಾಗೂ ನಟ ಫಹಾದ್ ಫಾಸಿಲ್

ತಿರುವನಂತಪುರಂ: ಮಲಯಾಳಂ ಚಿತ್ರರಂಗದ ಖ್ಯಾತ ನಟ ಫಹಾದ್ ಫಾಸಿಲ್ ( Fahadh Faasil ) ತಮ್ಮ ತಮಾಷೆಯ ಹಾಗೂ ಮುಕ್ತ ಮಾತುಗಳಿಂದ ಮತ್ತೊಮ್ಮೆ ಸಿನಿರಸಿಕರ ಗಮನ ಸೆಳೆದಿದ್ದಾರೆ. ತಮ್ಮ ಮುಂಬರುವ 'ಡೋಂಟ್​ ಟ್ರಬಲ್ ದಿ ಟ್ರಬಲ್' (Don't Trouble the Trouble) ಸಿನಿಮಾದ ಪ್ರಚಾರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ತಮ್ಮ ವೈಯಕ್ತಿಕ ಜೀವನ ಹಾಗೂ ಸಹನಟಿಯ ಬಗ್ಗೆ ಹಂಚಿಕೊಂಡಿರುವ ವಿಷಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.

ಮಕ್ಕಳನ್ನು ಅತ್ಯಂತ ತಾಳ್ಮೆಯಿಂದ ನಿಭಾಯಿಸುವ ವಿಶೇಷ ಗುಣ ನಿಮಗೆ ಹೇಗೆ ಬಂತು ಎಲ್ಲರು ನನ್ನನ್ನು ಕೇಳುತ್ತಾರೆ. ನಾನೊಂದು ಮಗುವನ್ನು (ನಜ್ರಿಯಾ ನಜಿಮ್) ಮದುವೆಯಾಗಿದ್ದೇನೆ. ಮನೆಯಲ್ಲಿಯೇ ಮಗು ಇರುವುದರಿಂದ ಮಕ್ಕಳನ್ನು ಹೇಗೆ ಹ್ಯಾಂಡಲ್ ಮಾಡಬೇಕು ಎಂಬುದು ತಮಗೆ ಕರಗತವಾಗಿದೆ ಎನ್ನುವ ಮೂಲಕ ಫಹಾದ್​ ಫಾಸಿಲ್​ ಅವರು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು.

ಇದೇ ವೇಳೆ ಚಿತ್ರದಲ್ಲಿ ತಮ್ಮೊಂದಿಗೆ ನಟಿಸಿರುವ ಪುಟ್ಟ ಸಹನಟಿ ಸಾರಾ ಪಾ ನಟನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಫಹಾದ್, ನಾನು ಒಂದು ಮಗುವನ್ನು ಹ್ಯಾಂಡಲ್ ಮಾಡುತ್ತೇನೆ ಅಂದುಕೊಂಡರೆ, ಇಲ್ಲಿ ನನ್ನನ್ನು ಹ್ಯಾಂಡಲ್ ಮಾಡುತ್ತಿರುವ ಮತ್ತೊಂದು ಮಗು ಸಿಕ್ಕಿದೆ ಎಂದರು. ಡೈಲಾಗ್ ಹೇಳುವಾಗ ತಪ್ಪು ಮಾಡಿದಾಗ ತಿದ್ದಿ ತೀಡುವ ಸಾರಾ ಪಾಳೇಕರ್ ಇದುವರೆಗೆ ತಮಗೆ ಸಿಕ್ಕ ಅತ್ಯಂತ ನೆಚ್ಚಿನ ಸಹನಟಿ ಎಂದು ಪ್ರಶಂಸಿಸಿದರು.

ಚೊಚ್ಚಲ ನಿರ್ದೇಶಕ ಶಶಾಂಕ್ ಯೆಲೇತಿ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ 'ಡೋಂಟ್​ ಟ್ರಬಲ್ ದಿ ಟ್ರಬಲ್' ಸಿನಿಮಾ ಅಕ್ಟೋಬರ್ 2 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಈ ಸಿನಿಮಾ ನೋಡುಗರಿಗೆ ಸಖತ್​ ಥ್ರಿಲ್​ ನೀಡುತ್ತದೆ. ಇಡೀ ಫ್ಯಾಮಿಲಿ ಕುಳಿತು ನೋಡಬಹುದಾದ ಒಂದು ಮನರಂಜನಾತ್ಮಕ ಸಿನಿಮಾ ಇದಾಗಿದೆ ಎಂದು ಫಹಾದ್​ ಹೇಳಿದರು.

ಅಂದಹಾಗೆ, ನಟ ಫಹಾದ್ ಮತ್ತು ನಜ್ರಿಯಾ ಅವರು 2014 ರಲ್ಲಿ ವಿವಾಹವಾದರು. 'ಬೆಂಗಳೂರು ಡೇಸ್' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ ಸಂದರ್ಭದಲ್ಲಿ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿ ವಿವಾಹವಾದರು. ಇಬ್ಬರ ನಡುವಿನ ವಯಸ್ಸಿನ ವ್ಯತ್ಯಾಸದ ಬಗ್ಗೆ ಆ ಕಾಲದಲ್ಲೇ ಸಾಕಷ್ಟು ಚರ್ಚೆಗಳು ನಡೆದಿದ್ದವು ಎಂಬುದು ಇಲ್ಲಿ ಗಮನಾರ್ಹ, (ಏಜೆನ್ಸೀಸ್​).

Dailyhunt
Disclaimer: This content has not been generated, created or edited by Dailyhunt. Publisher: Vijayvani