Sunday, 07 Mar, 1.29 pm ವಿಜಯವಾಣಿ

ಮುಖಪುಟ
ನಟಿ ಪ್ರಿಯಾಂಕಾರ ಇತ್ತೀಚಿನ ಸಾಹಸ ಏನು ಗೊತ್ತೆ?!

ನ್ಯೂಯಾರ್ಕ್: ಬಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ ತಮ್ಮ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಳ್ಳಲು ಮುಂದಾಗಿದ್ದಾರೆ. ಮಿಸ್​ ವರ್ಲ್ಡ್​ನಿಂದ ಬಾಲಿವುಡ್ ನಟಿಯಾದರು. ನಂತರ ಹಾಲಿವುಡ್​​ನಲ್ಲೂ ಹೆಸರು ಮಾಡಿದರು. ಇತ್ತೀಚೆಗಷ್ಟೆ, ತಮ್ಮ ಜೀವನಗಾಥೆಯನ್ನು ಪುಸ್ತಕರೂಪಕ್ಕಿಳಿಸಿ ಲೇಖಕಿಯೂ ಆದರು. ಮತ್ತೆ ಹೇರ್​ಕೇರ್​​ ಉತ್ಪನ್ನಗಳನ್ನು ತಯಾರಿಸುವ ಅನಾಮಲಿ ಎಂಬ ಕಂಪೆನಿಯನ್ನೂ ಆರಂಭಿಸಿದರು. ಇದೀಗ ರೆಸ್ಟೊರೆಂಟ್​ ಉದ್ಯಮಕ್ಕೆ ಕಾಲಿಡುತ್ತಿದ್ದಾರೆ!

ಹೌದು! ಅಮೆರಿಕದ ನ್ಯೂಯಾರ್ಕ್​ ನಗರದಲ್ಲಿ ಭಾರತೀಯ ರೆಸ್ಟೊರೆಂಟ್​ ಒಂದನ್ನು ಪ್ರಿಯಾಂಕಾ ಚೋಪ್ರಾ ಪ್ರಾರಂಭಿಸಲಿದ್ದಾರೆ. 'ಸೋನಾ' ಎಂಬ ಹೆಸರಿನ ಈ ರೆಸ್ಟೊರೆಂಟ್​ ಮೂಲಕ ಭಾರತೀಯ ಆಹಾರದ ಬಗ್ಗೆ ತಮಗಿರುವ ಪ್ರೀತಿಯನ್ನು ಪ್ರದರ್ಶಿಸಲು ಚೋಪ್ರಾ ಸಿದ್ಧವಾಗಿದ್ದಾರಂತೆ. ಈ ತಿಂಗಳ ಕೊನೆಯಲ್ಲಿ ತೆರೆಯಲಿರುವ ಈ ರೆಸ್ಟೊರೆಂಟ್​ನ ಕೆಲಸ ಇದಾಗಲೇ ಅರ್ಧ ಮುಗಿದಿದೆ. ಪ್ರಸಿದ್ಧ ಶೆಫ್ ಆದ ಹರಿ ನಾಯಕ್ ಇಲ್ಲಿ ಮುಖ್ಯ ಬಾಣಸಿಗರಾಗಿ ಭಾರತೀಯ ತಿನಿಸುಗಳ ಸವಿರುಚಿಯನ್ನು ಜನರಿಗೆ ಉಣಬಡಿಸಲಿದ್ದಾರೆ ಎಂದು ಚೋಪ್ರಾ ಇನ್​​ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ.

ಈ ರೆಸ್ಟೊರೆಂಟ್​​ನ ಕಾರ್ಯ ಆರಂಭಿಸುವ ಜಾಗದಲ್ಲಿ 2019 ರ ಸೆಪ್ಟೆಂಬರ್​​ನಲ್ಲಿ ಸಣ್ಣ ಮಟ್ಟದಲ್ಲಿ ಮಾಡಿದ ಪೂಜೆಯ ಫೋಟೋಗಳನ್ನು ಕೂಡ ಚೋಪ್ರಾ ಶೇರ್ ಮಾಡಿದ್ದಾರೆ. ಇದರಲ್ಲಿ ಪ್ರಿಯಾಂಕಾ, ತಮ್ಮ ಪತಿ ಸಂಗೀತಕಾರ ನಿಕ್ ಜೋನಸ್​​ರೊಂದಿಗೆ ಆರತಿಯ ತಟ್ಟೆ ಹಿಡಿದಿರುವುದನ್ನು ಕಾಣಬಹುದು.(ಏಜೆನ್ಸೀಸ್)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಪಶ್ಚಿಮ ಬಂಗಾಳ ಚುನಾವಣೆ : ಡೆಬ್ರಾ ಕ್ಷೇತ್ರದಲ್ಲಿ ಐಪಿಎಸ್​ v/s ಐಪಿಎಸ್

ಮದುವೆ ಮಂಟಪವಾಗಿ ಬದಲಾದ ಜೈಲು! ವಿಚಾರಣಾಧೀನ ಖೈದಿಯ ವಧು ಯಾರು ಗೊತ್ತೆ?

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top