ಮುಖಪುಟ
ನಿಮ್ಮ ಕಣ್ಣಿಗೊಂದು ಸವಾಲ್: ಚಿತ್ರದಲ್ಲಿರೋ ಭಾರಿ ಗಾತ್ರದ ಹೆಬ್ಬಾವು ಪತ್ತೆ ಹಚ್ಚಿದ್ರೆ ನೀವೇ ಗ್ರೇಟ್!

ನವದೆಹಲಿ: ಚಿತ್ರದಲ್ಲಿ ಹಾವನ್ನು ಗುರುತಿಸಿ ಎಂಬ ನೂರಾರು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಹರಿದಾಡುತ್ತಿರುತ್ತವೆ. ಹಾವುಗಳೇ ಹಾಗೇ ಆಹಾರಕ್ಕಾಗಿ ಸಂಚು ಹಾಕುವಾಗ ಯಾರಿಗೂ ಗೊತ್ತಾಗದಂತೆ ಅವಿತು ಕುಳಿತುಬಿಡುತ್ತವೆ. ಅದನ್ನು ತಿಳಿಯದೇ ಹಾವನ್ನು ತುಳಿದು ಕಚ್ಚಿಸಿಕೊಂಡವರಿಗೂ ಕಡಿಮೆಯೇನಿಲ್ಲ. ಸಾವಿಗೀಡಾದವರು ಸಹ ಇದ್ದಾರೆ. ಹೀಗಿದ್ದರೂ ಚಿತ್ರಗಳಲ್ಲಿ ಹಾವು ಪತ್ತೆ ಹಚ್ಚುವ ಟಾಸ್ಕ್ ಮಾತ್ರ ನೆಟ್ಟಿಗರಿಗೆ ಮಜಾ ಕೊಡುವುದಂತೂ ಸುಳ್ಳಲ್ಲ.
: ಯುವಕರು ನಮಗೆ ಮತ ನೀಡಿದ್ರೆ ನಿರುದ್ಯೋಗವನ್ನು ಶೇ. 40ಕ್ಕಿಂತ ಕಡಿಮೆ ಮಾಡುತ್ತೇವೆ: ಅಮಿತ್ ಷಾ
ಹೌದು, ಆಸ್ಪ್ರೇಲಿಯಾ ಮೂಲದ ಸ್ನೇಕ್ ಕ್ಯಾಚಿಂಗ್ ಸರ್ವೀಸ್ ತಮ್ಮ ಫೇಸ್ಬುಕ್ ಪೇಜ್ನಲ್ಲಿ ಒಂದು ಫೋಟೋವನ್ನು ಅಪ್ಲೋಡ್ ಮಾಡಿ, ಅದರಲ್ಲಿರುವ ಬೃಹತ್ ಗಾತ್ರದ ಹೆಬ್ಬಾವನ್ನು ಪತ್ತೆ ಹಚ್ಚಿ ಎಂದು ನೆಟ್ಟಿಗರಿಗೆ ಸವಾಲು ಹಾಕಿದ್ದಾರೆ. ಬ್ರಿಸ್ಬೇನ್ನ ಪಶ್ಚಿಮ ಕೋರಿಂಡಾದಲ್ಲಿ 8 ಅಡಿಯ ಹೆಬ್ಬಾವನ್ನು ಹಿಡಿಯಲಾಗಿದೆ.
ಮನೆಯೊಂದರ ಹಿತ್ತಲಲ್ಲಿ ಹೆಬ್ಬಾವು ಅವಿತು ಕುಳಿತಿದೆ. ಇದಕ್ಕೆ ಸಂಬಂಧಿಸಿದ ಫೋಟೋವನ್ನು ಪೋಸ್ಟ್ ಮಾಡಿ ಹಾವನ್ನು ಪತ್ತೆ ಹಚ್ಚುವಂತೆ ನೆಟ್ಟಿಗರಿಗೆ ಟಾಸ್ಟ್ ಕೊಡಲಾಗಿದೆ. ಇದಕ್ಕೆ ನಾವೇನು ಕಡಿಮೆ ಇಲ್ಲ ಎಂಬಂತೆ ಅನೇಕ ನೆಟ್ಟಿಗರು ಚಿತ್ರಕ್ಕೆ ರೌಂಡ್ ಮಾರ್ಕ್ ಮಾಡಿ ಹಾವನ್ನು ಪತ್ತೆ ಹಚ್ಚಿರುವುದಾಗಿ ಕಾಮೆಂಟ್ ಬಾಕ್ಸ್ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ನಿಮಗೂ ಗೊತ್ತಿದ್ದರೆ ನೀವೂ ಸಹ ಕಾಮೆಂಟ್ ಮಾಡಬಹುದು. (ಏಜೆನ್ಸೀಸ್)
: ಸಿಗರೇಟ್ ಸೇದುವ ವಿಚಾರಕ್ಕೆ ರಿಯಾಲಿಟಿ ಶೋ ಸ್ಫರ್ಧಿಯ ಕಿರಿಕ್: ದೂರು ದಾಖಲು