Dailyhunt Logo
  • Light mode
    Follow system
    Dark mode
    • Play Story
    • App Story
ನೀನು ಟಿವಿಯಲ್ಲಿ ಬರ್ತಿದ್ದಿಯಾ.; ಸೋನು ಗೌಡ ಕೊಟ್ಟ ರಿಪ್ಲೈಗೆ ದಂಗಾದ ಪೊಲೀಸರು

ನೀನು ಟಿವಿಯಲ್ಲಿ ಬರ್ತಿದ್ದಿಯಾ.; ಸೋನು ಗೌಡ ಕೊಟ್ಟ ರಿಪ್ಲೈಗೆ ದಂಗಾದ ಪೊಲೀಸರು

ಬೆಂಗಳೂರು: ಬಾಲಕಿಯನ್ನು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಶದಲ್ಲಿರುವ ಬಿಗ್​ಬಾಸ್​ ಒಟಿಟಿ ಸೀಸನ್​-1ರ ಸ್ಪರ್ಧಿ, ರೀಲ್ಸ್​ ಸ್ಟಾರ್​ ಸೋನು ಶ್ರೀನಿವಾಸ್​ ಗೌಡ ವಿರುದ್ಧ FIR ದಾಖಲಾಗಿದ್ದು, ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ.

ಇನ್ನು ವಿಚಾರಣೆ ವೇಳೆ ಪೊಲೀಸರು ನೀನು ಟಿವಿಯಲ್ಲಿ ಬರ್ತಿದ್ದಿಯಾ ಎಂದು ಹೇಳಿದಿದ್ದಕ್ಕೆ ಪಾಸಿಟಿವೋ-ನೆಗೆಟಿವೋ ಒಟ್ನಲ್ಲಿ ಪ್ರಚಾರದಲ್ಲಿದ್ದೀನಿ. ನಾನು ಮಗುವನ್ನು ಚೆನ್ನಾಗಿಯೇ ನೋಡಿಕೊಂಡಿದ್ದೇನೆ ಎಂದು ಪೊಲೀಸ್​ ವಿಚಾರಣೆಯಲ್ಲಿ ಹೇಳಿರುವುದಾಗಿ ತಿಳಿದು ಬಂದಿದೆ.

ಪುಟ್ಟ ಬಾಲಕಿಯನ್ನು ಅನಧಿಕೃತವಾಗಿ ತಮ್ಮ ಮನೆಯಲ್ಲಿ ಇಟ್ಟುಕೊಳ್ಳಲಾಗಿದೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಮತ್ತು ಬ್ಯಾಡರಹಳ್ಳಿ ಠಾಣಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಸೋನು ಶ್ರೀನಿವಾಸ್​ ಗೌಡಳನ್ನು ಬಂಧಿಸಿದ್ದಾರೆ. ಸೋನು ವಿರುದ್ಧ ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ದೂರು ನೀಡಿದ್ದರು. ಬಳಿಕ ಜೆ.ಜೆ.ಆಯಕ್ಟ್ ಅಡಿ ಸೋನು ವಿರುದ್ಧ ಎಫ್​ಐಆರ್ ದಾಖಲಾಗಿತ್ತು.

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ; 5, 8, 9 ಮತ್ತು 11ನೇ ತರಗತಿ ಬೋರ್ಡ್ ಪರೀಕ್ಷೆಗೆ ಹೈಕೋರ್ಟ್​​ ಅಸ್ತು

ಪೊಲೀಸ್​ ವಿಚಾರಣೆ ವೇಳೆ ದತ್ತು ಪಡೆದುಕೊಳ್ಳುವುದು ಇಷ್ಟು ದೊಡ್ಡ ಪ್ರಕ್ರಿಯೆ ಎನ್ನುವುದು ಗೊತ್ತಿರಲಿಲ್ಲ ಎಂದು ಸೋನು ಹೇಳಿದ್ದಾಳೆ. ನಾನು ವಾಸವಿರುವ ಅಪಾರ್ಟ್​ಮೆಂಟ್​ ಕೆಳಗೆ ಗಾರೆ ಕೆಲಸ ಮಾಡುತ್ತಿದ್ದ ರಾಯಚೂರು ಮೂಲದ ದಂಪತಿಯ ಎರಡನೇ ಮಗಳು ಆಕೆ. ನಾನು ನಾಯಿಗೆ ಬಿಸ್ಕೆಟ್​ ಹಾಕುವಾಗ ಆಕೆ ನನ್ನ ಬಳಿ ಬಂದಳು. ಬಳಿಕ ನಾನು ಆಕೆಗೆ ಚಾಕೋಲೆಟ್​ ಕೊಡಿಸಿದೆ. ಬಳಿಕ ನಮ್ಮ ಮನೆಗೆ ಬಂದು ಆಟವಾಡುತ್ತಿದ್ದಳು. ಇದರಿಂದ ನನಗೆ ತುಂಬಾ ಹತ್ತಿರವಾಗಿಬಿಟ್ಟಳು. ಇಬ್ಬರು ಒಬ್ಬರೊನ್ನೊಬ್ಬರು ಬಿಟ್ಟಿರಲಾರದಷ್ಟು ಹಚ್ಚಿಕೊಂಡೆವು.

ದಂಪತಿ ತಮ್ಮ ಮಗಳನ್ನು ರಾಯಚೂರಿನಲ್ಲಿರುವ ಹುಟ್ಟೂರಿಗೆ ಕರೆದೊಯ್ದ ಬಳಿಕವೂ ಆಕೆ ನನ್ನ ಬಗ್ಗೆಯೇ ಮಾತನಾಡುತ್ತಿದ್ದಳಂತೆ. ನನ್ನನ್ನು ಕೇಳಿತ್ತಿದ್ದಳಂತೆ. ಅಲ್ಲದೆ, ನನ್ನದೇ ನೆನಪಿನಲ್ಲಿ ಹುಷಾರಿರಲಿಲ್ಲವಂತೆ. ಅಕ್ಕನ್ನು ನೋಡಬೇಕು ಅನ್ನುತ್ತಿದ್ದಳಂತೆ. ಈ ವಿಚಾರವನ್ನು ಬಾಲಕಿಯ ತಾಯಿ ನನಗೆ ತಿಳಿಸಿದಾಗ ನನಗೆ ತುಂಬಾ ಬೇಸರವಾಯಿತು. ಕೂಡಲೇ ಅವರ ಮನೆಗೆ ತೆರಳಿ, ನಾನೇ ಸಾಕಿಕೊಳ್ಳುತ್ತೇನೆಂದು ಹೇಳಿ ಕರೆದುಕೊಂಡು ಬಂದೆ ಎಂದು ಸೋನು ಶ್ರೀನಿವಾಸ್​ ಗೌಡ ಪೊಲೀಸ್​ ವಿಚಾರಣೆ ವೇಳೆ ಹೇಳಿದ್ದಾಳೆ.

ಸಿಎಸ್​ಕೆ ನಾಯಕತ್ವ ದಿಢೀರ್​ ಹಸ್ತಾಂತರ; ಧೋನಿ ನಿರ್ಧಾರದ ಬಗ್ಗೆ ಕೋಚ್​ ಫ್ಲೆಮಿಂಗ್​ ಹೇಳಿದ್ದಿಷ್ಟು

ನಿಜಕ್ಕೂ ಅವರನ್ನು ಪತಿಯನ್ನಾಗಿ ಪಡೆಯಲು ನಾನು ಪುಣ್ಯ ಮಾಡಿದ್ದೆ: ನಟಿ ಮಹಾಲಕ್ಷ್ಮೀ

ನಿಜಕ್ಕೂ ಅವರನ್ನು ಪತಿಯನ್ನಾಗಿ ಪಡೆಯಲು ನಾನು ಪುಣ್ಯ ಮಾಡಿದ್ದೆ: ನಟಿ ಮಹಾಲಕ್ಷ್ಮೀ
Dailyhunt
Disclaimer: This content has not been generated, created or edited by Dailyhunt. Publisher: Vijayvani