Dailyhunt Logo
  • Light mode
    Follow system
    Dark mode
    • Play Story
    • App Story
ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಹಣಕಾಸಿನಲ್ಲಿ ಪರಿಸ್ಥಿತಿಯಲ್ಲಿ ಸುಧಾರಣೆ

ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಹಣಕಾಸಿನಲ್ಲಿ ಪರಿಸ್ಥಿತಿಯಲ್ಲಿ ಸುಧಾರಣೆ

ಮೇಷ: ಮಾಡುವ ಕೆಲಸದಲ್ಲಿ ಹೆಚ್ಚು ಉತ್ಸಾಹ. ಔಷಧ ಮಾರಾಟದಲ್ಲಿ ಲಾಭಗಳಿಕೆ. ತುರ್ತಾಗಿ ದೂರ ಪ್ರಯಾಣ ಮಾಡುವಿರಿ. ಶುಭಸಂಖ್ಯೆ: 8

ವೃಷಭ: ಹಣಕಾಸಿನಲ್ಲಿ ಪರಿಸ್ಥಿತಿಯಲ್ಲಿ ಸುಧಾರಣೆ. ಕುಟುಂಬದ ಜತೆ ಸಂತೋಷದ ವಿಹಾರ. ಮಹಿಳೆಯರಿಗೆ ವಸ್ತ್ರಾಭರಣ ಲಾಭ. ಶುಭಸಂಖ್ಯೆ:1

ಮಿಥುನ: ಪ್ರಭಾವಿಗಳ ಸಂಪರ್ಕದಿಂದ ಕೆಲಸ ಲಭ್ಯ.

ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೊಸ ಪರಿಚಯ ಉಪಯೋಗಕ್ಕೆ ಬರುತ್ತದೆ. ಶುಭಸಂಖ್ಯೆ:9

ಕಟಕ: ಕೆಲಸದ ಒತ್ತಡ ಹೆಚ್ಚಾಗಲಿದೆ. ಸ್ವಯಂ ಉದ್ಯೋಗದ ಕನಸು ನನಸಾಗಲಿದೆ. ವೈಮಾನಿಕ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ:8

ಸಿಂಹ: ಉದ್ಯೋಗದಲ್ಲಿ ನಿಮ್ಮ ಕಾರ್ಯವೈಖರಿಗೆ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ. ನಾಯಕತ್ವ ಗುಣಗಳು ಪ್ರಯೋಜನಕ್ಕೆ ಬರಲಿದೆ. ಶುಭಸಂಖ್ಯೆ:2

ಕನ್ಯಾ: ವಿದ್ಯಾರ್ಥಿಗಳಿಗೆ ಶ್ರದ್ಧೆಯ ಅಧ್ಯಯನದಿಂದ ಯಶ. ಸಂಗಾತಿಯ ಆರೋಗ್ಯದತ್ತ ಗಮನ ಇರಲಿ. ಸಿಹಿತಿಂಡಿ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 7

ತುಲಾ: ಸಂಬಂಧಗಳಲ್ಲಿನ ಬಿರುಕು ಬಗೆಹರಿಯಲಿದೆ. ನಿರುದ್ಯೋಗಿಗಳಿಗೆ ಅವಕಾಶಗಳು ಸಿಗುತ್ತವೆ. ಕಿರುತೆರೆ ನಿರ್ದೇಶಕರಿಗೆ ಶುಭ. ಶುಭಸಂಖ್ಯೆ:2

ವೃಶ್ಚಿಕ: ಯಶಸ್ಸಿನಿಂದ ಆತ್ಮವಿಶ್ವಾಸ ವೃದ್ಧಿ. ಹಣಕಾಸಿನಲ್ಲಿ ವಿಚಾರದಲ್ಲಿ ದುಡುಕಿನ ನಿರ್ಧಾರ ಬೇಡ. ವ್ಯಾಪಾರದಲ್ಲಿ ನಿರೀಕ್ಷಿತ ಲಾಭ. ಶುಭಸಂಖ್ಯೆ:4

ಧನಸ್ಸು: ಸಾಲಗಾರರ ಕಿರಿಕಿರಿಯಿಂದ ಮುಕ್ತಿ. ನೃತ್ಯ ಸಂಯೋಜಕರಿಗೆ ಬೇಡಿಕೆ ಹೆಚ್ಚಲಿದೆ. ಆಧುನಿಕ ನೃತ್ಯ ಕಲಾವಿದರಿಗೆ ವಿಶೇಷ ವೇದಿಕೆ. ಶುಭಸಂಖ್ಯೆ:3

ಮಕರ: ಹೊಸ ಕೆಲಸದಲ್ಲಿ ಹೊಣೆಗಾರಿಕೆ ಹೆಚ್ಚಲಿದೆ. ಶಿಲ್ಪಕಲಾ ಪ್ರವೀಣರಿಗೆ ಧನ ಲಾಭ. ಖಾದಿ ಉಡುಪು ತಯಾರಿಕೆಗೆ ಬೇಡಿಕೆ ಹೆಚ್ಚಲಿದೆ. ಶುಭಸಂಖ್ಯೆ:1

ಕುಂಭ: ಆಲೋಚನೆಯ ಅನುಷ್ಠಾನಕ್ಕೆ ಅಡ್ಡಿ. ಸ್ನೇಹಿತರಿಂದಾಗಿ ಆಪತ್ತಿನಿಂದ ಪಾರಾಗುವಿರಿ. ರಕ್ಷಣಾ ಇಲಾಖೆ ಉದ್ಯೋಗಿಗಳಿಗೆ ವರ್ಗ. ಶುಭಸಂಖ್ಯೆ: 8

ಮೀನ: ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಹೆಚ್ಚಲಿದೆ. ಡೇರಿ ಉತ್ಪನ್ನಗಳ ಮಾರಾಟದಲ್ಲಿ ಲಾಭ. ಬದಲಾದ ಕೃಷಿಯಿಂದ ಲಾಭಗಳಿಕೆ. ಶುಭಸಂಖ್ಯೆ:2



ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani