ಮೇಷ: ಕಚೇರಿ ಕೆಲಸಗಳು ವೇಗ ಪಡೆದುಕೊಳ್ಳಲಿವೆ. ಮನೆಯಲ್ಲಿದ್ದ ಚಿಕ್ಕ ಗೊಂದಲ ನಿವಾರಣೆ. ಸಂಗಾತಿಯ ಅನಾರೋಗ್ಯ ಪರಿಹಾರ. ಶುಭಸಂಖ್ಯೆ:2
ವೃಷಭ: ಹಣದ ವಿಚಾರದ ಟೆನ್ಷನ್ ಮಧ್ಯಾಹ್ನದ ವೇಳೆಗೆ ಪರಿಹಾರ. ದೂರದ ಸಂಬಂಧಿಯಿಂದ ಶುಭಸುದ್ದಿ. ಗೃಹ ನಿರ್ವಣಕ್ಕೆ ಸಿದ್ಧತೆ. ಶುಭಸಂಖ್ಯೆ: 8
ಮಿಥುನ: ಹೊಸ ಕೆಲಸ ಪ್ರಾರಂಭಿಸಲು ಒಳ್ಳೆಯ ದಿನ. ಗೆಳೆಯರಿಂದ ಆರ್ಥಿಕ ಸಹಾಯ . ಪ್ರಮುಖ ಮಾಹಿತಿಯನ್ನು ಕಲೆ ಹಾಕಲಿದ್ದೀರಿ. ಶುಭಸಂಖ್ಯೆ:1
ಕಟಕ: ಮಕ್ಕಳ ವಿದ್ಯಾಭ್ಯಾಸದ ಕಡೆ ಜಾಸ್ತಿ ಗಮನ ಕೊಡಬೇಕಾಗುತ್ತದೆ. ಸಹೋದ್ಯೋಗಿಗಳಿಂದ ನಿಮ್ಮ ನಿರ್ಧಾರಕ್ಕೆ ಬೆಂಬಲ ಸಿಗಲಿದೆ. ಶುಭಸಂಖ್ಯೆ: 3
ಸಿಂಹ: ಕೆಲಸದಲ್ಲಿ ಧೈರ್ಯ, ಉತ್ಸಾಹ ಇರಲಿದೆ. ಹೊಸ ಯೋಜನೆ ಪ್ರಾರಂಭಕ್ಕೆ ಶುಭದಿನ. ಪ್ರಯಾಣದದಲ್ಲಿ ಅನಾರೋಗ್ಯ ಕಾಡಲಿದೆ. ಶುಭಸಂಖ್ಯೆ: 9
ಕನ್ಯಾ: ಹೊಸ ವ್ಯವಹಾರದಲ್ಲಿ ಹೆಚ್ಚು ಚಿಂತಿಸದೆ ಮುಂದಕ್ಕೆ ಹೋಗಿ. ಪ್ರತಿಭೆಗೆ ಅವಕಾಶ. ನಿವೇಶನ ಖದೀದಿಗೆ ಇದ್ದ ನಿರ್ಬಂಧ ತೆರವು. ಶುಭಸಂಖ್ಯೆ: 6
ತುಲಾ: ಸಾಲ ತೀರಿಸಲು ಸ್ನೇಹಿತರಿಂದ ಸಹಕಾರ ಸಿಗಲಿದೆ. ಸಹೋದ್ಯೋಗಿಗಳೊಂದಿಗೆ ಔತಣ ಕೂಟ. ಹಣಕಾಸಿನಲ್ಲಿ ಸ್ಥಿರತೆ ಇರಲಿದೆ. ಶುಭಸಂಖ್ಯೆ:4
ವೃಶ್ಚಿಕ: ಜವಾಬ್ದಾರಿಯನ್ನು ನಿರ್ವಹಿಸುವಿರಿ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆತ್ಮವಿಶ್ವಾಸದಿಂದ ನಡೆದುಕೊಂಡರೆ ಯಶಸ್ಸು ಖಚಿತವಾಗುವುದು. ಶುಭಸಂಖ್ಯೆ: 2
ಧನಸ್ಸು: ಸಹೋದರನ ಆರೋಗ್ಯ ಸುಧಾರಿಸಲಿದೆ. ಆಸ್ತಿ ನೊಂದಣಿ ಮುಂದೂಡಿಕೆ ಒಳ್ಳೆಯದು. ತರಕಾರಿ, ಹಣ್ಣು ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 3
ಮಕರ: ಧಾರಾವಾಹಿ ನಿರ್ದೇಶಕರಿಗೆ ಧನಲಾಭ. ಹೊಸ ಆಲೋಚನೆ ಫಲ ನೀಡಲಿವೆ. ಕೆಲಸಗಳಲ್ಲಿ ವಿಳಂಬ. ಅಡಿಕೆ ಕೃಷಿಯಲ್ಲಿ ಲಾಭ. ಶುಭಸಂಖ್ಯೆ:3
ಕುಂಭ: ಹಳೆಯ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಇಂದು ಶುಭದಿನ. ಲೆಕ್ಕಪರಿಶೋಧಕರಿಗೆ ಅಯಾಚಿತವಾಗಿ ಹಣ ಬರಲಿದೆ. ಶುಭಸಂಖ್ಯೆ: 5
ಮೀನ: ಮನೆಯಲ್ಲಿ ವಿವಾಹದ ತಯಾರಿ. ನಾಟ್ಯ, ಸಂಗೀತದವರಿಗೆ ಉತ್ತಮ ವೇದಿಕೆ ಸಿಗಲಿದೆ . ಹಣ ಹೂಡಿಕೆಗೆ ಇಂದು ಸುಸಮಯ. ಶುಭಸಂಖ್ಯೆ: 7
ಇನ್ನಷ್ಟು ಓದಿ

