Dailyhunt Logo
  • Light mode
    Follow system
    Dark mode
    • Play Story
    • App Story
ನಿತ್ಯಭವಿಷ್ಯ; ಈ ರಾಶಿಯವರಿಗಿಂದು ಸ್ನೇಹಿತರಿಂದ ನಿರೀಕ್ಷಿತ ಸಹಾಯ ಸಿಗಲಿದೆ

ನಿತ್ಯಭವಿಷ್ಯ; ಈ ರಾಶಿಯವರಿಗಿಂದು ಸ್ನೇಹಿತರಿಂದ ನಿರೀಕ್ಷಿತ ಸಹಾಯ ಸಿಗಲಿದೆ

ಮೇಷ: ಸ್ನೇಹಿತರಿಂದ ನಿರೀಕ್ಷಿತ ಸಹಾಯ ಸಿಗಲಿದೆ. ರಾಜ್ಯ ಸರ್ಕಾರಿ ನೌಕರರಿಗೆ ವರ್ಗಾವಣೆ ಸಾಧ್ಯತೆ. ಪುಸ್ತಕ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 7

ವೃಷಭ: ತಂದೆಯ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ. ಸ್ವಂತ ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ. ಮಕ್ಕಳಿಗಾಗಿ ಅಧಿಕ ಖರ್ಚು.
ಶುಭಸಂಖ್ಯೆ: 1
ಮಿಥುನ: ಬಸ್ ಮಾಲೀಕರಿಗೆ ಶುಭ.ಬಂಧುಗಳಿಂದ ಸಹಾಯ. ದೈಹಿಕ ಅಸಮತೋಲನದಿಂದ ಆಯಾಸ. ನೀರಿನ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:6
ಕಟಕ: ಅಲಂಕಾರಿಕ ವಸ್ತು ವ್ಯಾಪಾರದಲ್ಲಿ ವೃದ್ಧಿ. ಆರ್ಥಿಕ ಒತ್ತಡ, ಅನಾರೋಗ್ಯ. ಅಡಿಕೆ, ಕಾಳುಮೆಣಸು, ತೆಂಗು ಬೆಳೆಗಾರರಿಗೆ ಲಾಭ. ಶುಭಸಂಖ್ಯೆ:2
ಸಿಂಹ: ಆಹಾರ ಸೇವನೆಯಲ್ಲಿ ಜಾಗರೂಕತೆಯಿಂದಿರಿ. ಉದ್ಯೋಗದಲ್ಲಿದ್ದ ಅತಂತ್ರತೆ ದೂರವಾಗಲಿದೆ. ದುಷ್ಟ ಸ್ನೇಹಿತರಿಂದ ದೂರವಿರಿ. ಶುಭಸಂಖ್ಯೆ:7
ಕನ್ಯಾ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ದೈಹಿಕ ಕಸರತ್ತು ನಡೆಸುವವರಿಗೆ ಸುಸಮಯ. ಕೂಡಿಟ್ಟಹಣ ಉಪಯೋಗಕ್ಕೆ ಬರಲಿದೆ. ಶುಭಸಂಖ್ಯೆ: 1

ತುಲಾ: ಅಡಿಕೆ ವ್ಯವಹಾರದಲ್ಲಿ ಹಿನ್ನಡೆ. ಮೇಲಧಿಕಾರಿಗಳಿಂದ ನಿಮ್ಮ ಕೆಲಸಕ್ಕೆ ಪ್ರಶಂಸೆ. ಸಂಶೋಧನಾ ಕ್ಷೇತ್ರದ ಉದ್ಯೋಗಿಗಳಿಗೆ ವರ್ಗ. ಶುಭಸಂಖ್ಯೆ:8
ವೃಶ್ಚಿಕ: ಸಂಗಾತಿಯಿಂದ ಸಕಾಲದಲ್ಲಿ ಸೂಕ್ತ ಸಲಹೆ ಸಿಗಲಿದೆ. ಕೆಟ್ಟ ಆಲೋಚನೆಗಳನ್ನು ನಿಯಂತ್ರಿಸಿ. ಉದ್ಯೋಗದಲ್ಲಿ ಉತ್ತಮ ಸಮಯ. ಶುಭಸಂಖ್ಯೆ: 2
ಧನಸ್ಸು: ಪ್ರಯಾಣದಲ್ಲಿ ಹೊಸ ಸ್ನೇಹಿತರು ಸಿಗಲಿದ್ದಾರೆ. ತಂದೆಯಿಂದ ಗೃಹ ನಿರ್ಮಾಣಕ್ಕೆ ಸಹಕಾರ, ಜಲೋತ್ಪನ್ನ ಮಾರಾಟದಲ್ಲಿ ಲಾಭ. ಶುಭಸಂಖ್ಯೆ:5
ಮಕರ: ತಾಯಿಯ ಆರೋಗ್ಯದಲ್ಲಿ ಉತ್ತಮ ಚೇತರಿಕೆ. ಆಸ್ತಿ ವಿಚಾರದಲ್ಲಿ ಅನಿರೀಕ್ಷಿತ ತಿರುವು. ಕಾನೂನು ತಜ್ಞರಿಗೆ ಬೇಡಿಕೆ ಹೆಚ್ಚಾಗಲಿದೆ. ಶುಭಸಂಖ್ಯೆ:6

ಕುಂಭ: ಸ್ಥಿರಾಸ್ತಿ ಖರೀದಿಗೆ ನಿರ್ಧಾರ. ನವದಂಪತಿಗಳಿಗೆ ಶುಭ ಸುದ್ದಿ. ಜೇನು ಕೃಷಿಕರಿಗೆ ಆರ್ಥಿಕ ಸಹಾಯ ಲಭ್ಯ. ಬಡವರಿಗೆ ನೆರವಾಗಿ. ಶುಭಸಂಖ್ಯೆ:3
ಮೀನ: ವ್ಯಾಪಾರದಲ್ಲಿ ಅಭಿವೃದ್ಧಿ. ದಿನಸಿ ಅಂಗಡಿ ಮಾಲೀಕರಿಗೆ ದ್ವಿಗುಣ ಲಾಭ. ಧಾರ್ವಿುಕ ಕ್ಷೇತ್ರದವರಿಗೆ ಒತ್ತಡ ಕಡಿಮೆಯಾಗಲಿದೆ. ಶುಭಸಂಖ್ಯೆ: 7

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani