ಮೇಷ: ತಾಯಿಯ ಆರೋಗ್ಯ ಸುಧಾರಿಸಲಿದೆ. ಕೆಲಸಗಳಲ್ಲಿ ಯಶ ಸಿಗಲಿದೆ. ನೆಮ್ಮದಿ ನೀಡುವ ಧಾರ್ವಿುಕ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ. ಶುಭಸಂಖ್ಯೆ:2
ವೃಷಭ: ಹಣಕಾಸಿನ ವಿಷಯದಲ್ಲಿ ಸ್ವಲ್ಪ ಜಾಗರೂಕರಾಗಿರಿ. ಕೆಲಸದ ಸ್ಥಳದಲ್ಲಿ ತಾಳ್ಮೆಯಿಂದ ವರ್ತಿಸುವುದು ಒಳಿತನ್ನು ನೀಡುತ್ತದೆ.
ಶುಭಸಂಖ್ಯೆ:6
ಮಿಥುನ: ಹೊಸ ವ್ಯಾಪಾರದಲ್ಲಿ ಸ್ಪರ್ಧೆ ಜಾಸ್ತಿ. ಸಂಗಾತಿ,, ಮಕ್ಕಳೊಂದಿಗೆ ಸಮಯ ಕಳೆಯುವಿರಿ. ಕೃಷಿಕರಿಗೆ ಪ್ರವಾಸದ ಯೋಗವಿದೆ. ಶುಭಸಂಖ್ಯೆ:2
ಕಟಕ: ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ. ರಕ್ತ ಸಂಬಂಧಿ ಆರೋಗ್ಯದ ಕಡೆ ಗಮನವಿರಲಿ. ದೈಹಿಕ ವಿಶ್ರಾಂತಿಗೆ ಆದ್ಯತೆ ನೀಡಿ. ಶುಭಸಂಖ್ಯೆ:1
ಸಿಂಹ: ಉದ್ಯೋಗದಲ್ಲಿ ಶುಭಸುದ್ದಿಯ ಸಾಧ್ಯತೆ. ಕುಟುಂಬದ ಹಿರಿಯರಿಂದ ಬೆಂಬಲ. ಹಳೆಯ ಕಾರು ಮಾರಾಟದಲ್ಲಿ ಲಾಭಗಳಿಸುವಿರಿ. ಶುಭಸಂಖ್ಯೆ:6
ಕನ್ಯಾ: ಒತ್ತಡ ಹೆಚ್ಚಿದ್ದರೂ ಗುರಿ ತಲುಪುವಿರಿ. ಆತುರದ ನಿರ್ಧಾರ ಬೇಡ. ಆಲೋಚಿಸಿ ಹೆಜ್ಜೆ ಇಡಿ. ಮಾಲೀಕರಿಗೆ ಸಿಬ್ಬಂದಿ ಕೊರತೆ. ಶುಭಸಂಖ್ಯೆ:3
ತುಲಾ: ಹಳೆಯ ಸಮಸ್ಯೆ ಇತ್ಯರ್ಥ. ಕಲಾವಿದರಿಗೆ ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಸಹನೆ ಅಗತ್ಯ. ಶುಭಸಂಖ್ಯೆ:4
ವೃಶ್ಚಿಕ: ಶತ್ರುಗಳ ಮೇಲೆ ಜಯ ಸಾಧನೆ. ಸಾಹಿತಿಗಳು ಮತ್ತು ಹೋರಾಟಗಾರರಿಗೆ ಶುಭದಿನ.ಕೃಷಿ ಜಮೀನು ಖರೀದಿಗೆ ಸೂಕ್ತ ಸಮಯ. ಶುಭಸಂಖ್ಯೆ:5
ಧನಸ್ಸು: ವಿದೇಶದಲ್ಲಿರುವ ಮಕ್ಕಳಿಂದ ಶುಭವಾರ್ತೆ. ಯೋಜನೆ ಆರಂಭಕ್ಕೆ ಸುಸಮಯ. ಹೋಟೆಲ್ ವ್ಯವಹಾರದಲ್ಲಿ ಭರ್ಜರಿ ಲಾಭ. ಶುಭಸಂಖ್ಯೆ:4
ಮಕರ: ರಫ್ತು ವ್ಯವಹಾರದಲ್ಲಿ ಪ್ರಗತಿ. ಮನೆಯ ವಾತಾವರಣ ಸುಖಕರ. ಉದ್ಯೋಗಸ್ಥ ಮಹಿಳೆಯರಿಗೆ ಕಚೇರಿಯಲ್ಲಿ ನೆಮ್ಮದಿ ಇರಲಿದೆ. ಶುಭಸಂಖ್ಯೆ:2
ಕುಂಭ: ಆತ್ಮವಿಶ್ವಾಸ ಹೆಚ್ಚಾಗಲಿದೆ. ಸಣ್ಣ ಪ್ರಯಾಣವು ಲಾಭದಾಯಕವಾಗಲಿದೆ. ಗೃಹ ನಿರ್ವಣಕ್ಕೆ ಬಂಧುಗಳ ಸಹಕಾರ ಸಿಗಲಿದೆ. ಶುಭಸಂಖ್ಯೆ:7
ಮೀನ: ಮಾತಿನಲ್ಲಿ ಮಾಧುರ್ಯ ಇರಲಿ. ಆರ್ಥಿಕವಾಗಿ ಈ ದಿನವು ಉತ್ತಮವಾಗಿರಲಿದೆ. ಅಲಂಕಾರಿಕ ವಸ್ತು ಮಾರಾಟದಲ್ಲಿ ಅಭಿವೃದ್ಧಿ. ಶುಭಸಂಖ್ಯೆ:8

