ಮೇಷ: ಧಾರ್ವಿುಕ ಚಟುವಟಿಕೆಗಳಲ್ಲಿ ಆಸಕ್ತಿ. ಹೊಸ ಉದ್ಯಮದಲ್ಲಿ ಪ್ರಗತಿ ಸಾಧಿಸುವಿರಿ. ತಾಯಿ ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ. ಶುಭಸಂಖ್ಯೆ: 9ವೃಷಭ: ಕಚೇರಿ ನವೀಕರಣಕ್ಕೆ ಖರ್ಚು. ಕೆಲಸದಿಂದ ವಿರಾಮ ತೆಗೆದುಕೊಳ್ಳುವಿರಿ. ನಿಮ್ಮ ಅಭಿಪ್ರಾಯಕ್ಕೆ ಕುಟುಂಬದಿಂದ ಬೆಂಬಲ.
ಶುಭಸಂಖ್ಯೆ: 6ಮಿಥುನ: ಸಿಕ್ಕ ಉದ್ಯೋಗವನ್ನು ಎಚ್ಚರಿಕೆಯಿಂದ ಕಾಪಾಡಿಕೊಳ್ಳಿ. ದೂರದೂರಿನಿಂದ ಅತಿಥಿಗಳ ಆಗಮನ. ಇಷ್ಟಪಟ್ಟ ಭೋಜನ ಸಿಗಲಿದೆ. ಶುಭಸಂಖ್ಯೆ:2ಕಟಕ: ಹಣ ಹೂಡಿಕೆಯಲ್ಲಿ ಎಚ್ಚರವಿರಲಿ. ಸಾರ್ವಜನಿಕವಾಗಿ ಸಹನೆಯಿಂದ ವರ್ತಿಸಿ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಶುಭಸಂಖ್ಯೆ: 7ಸಿಂಹ: ಐಷಾರಾಮಿ ವಸ್ತುಗಳ ಖರೀದಿಗೆ ಹಣ ವ್ಯಯವಾಗುವುದು. ಸ್ಥಿರಾಸ್ತಿಯಿಂದ ಆದಾಯ. ವಿವಾಹದ ಪ್ರಯತ್ನ ಯಶಸ್ವಿಯಾಗಲಿದೆ. ಶುಭಸಂಖ್ಯೆ: 4 .
ಕನ್ಯಾ: ಕುಟುಂಬ ಸಂಬಂಧಿ ವಿಚಾರದಲ್ಲಿ ಅಡ್ಡಿ ನಿವಾರಣೆ. ವಿದೇಶದಲ್ಲಿರುವ ಮಕ್ಕಳಿಂದ ಶುಭಸುದ್ದಿ. ಪಾಲುದಾರಿಕೆ ಸುಗಮ. ಶುಭಸಂಖ್ಯೆ:1ತುಲಾ: ಪ್ರಮುಖ ವ್ಯಕ್ತಿಗಳೊಂದಿಗೆ ಗಂಭೀರವಾಗಿ ವರ್ತಿಸಿ. ಹಿತಶತ್ರುಗಳ ಬಗ್ಗೆ ಎಚ್ಚರವಾಗಿರಿ. ಸಾಲಗಾರರಿಂದ ಋಣಮುಕ್ತರಾಗುವಿರಿ. ಶುಭಸಂಖ್ಯೆ: 8ವೃಶ್ಚಿಕ: ಪ್ರೇಮದಲ್ಲಿ ಜವಾಬ್ದಾರಿಯ ಹೆಜ್ಜೆ ಇಡಿ. ಸಹೋದರರೊಂದಿನ ಸಂಘರ್ಷ ಕೊನೆಯಾಗಲಿದೆ. ಜೇನು ಕೃಷಿಕರಿಗೆ ಅನಿರೀಕ್ಷಿತ ಲಾಭ ಶುಭಸಂಖ್ಯೆ:3 .
ಇನ್ನಷ್ಟು ಓದಿ

